Share this news

ಕಾರ್ಕಳ : ಭಾರತೀಯ ಕಿಸಾನ್ ಸಂಘ ಕಾರ್ಕಳ ತಾಲೂಕು ಸಮಿತಿಯ ಮಾಸಿಕ ಸಭೆಯು ಫೆ.1 ರಂದು ಸಂಘದ ಕಾರ್ಯಲಯದಲ್ಲಿ ಅಧ್ಯಕ್ಷರಾದ ಗೋವಿಂದ ರಾಜ್ ಭಟ್ ಕಡ್ತಲ ಅಧ್ಯಕ್ಷತೆಯಲ್ಲಿ ನಡೆಯಿತು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಮಾತನಾಡಿ, ಫೆ.11 ರಂದುಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನದ ಶ್ರೀಮತಿ ಶಾಲಿನಿ ಡಾ. ಜಿ. ಶಂಕರ್ ತೆರೆದ ಸಭಾಂಗಣದಲ್ಲಿ ಉಡುಪಿ ಜಿಲ್ಲಾ ರೈತ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ ರೈತ ಉಪಯೋಗಿ ಕೃಷಿ ಯಂತ್ರೋಪಕರಣಗಳ, ಕೃಷಿ ಸಲಕರಣೆಗಳ, ಸಾವಯವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿಗೆ ಅವಕಾಶಗಳಿದ್ದು ರೈತರು ಹೆಚ್ಚು ಪ್ರಯೋಜನ ಪಡೆದುಕೊಳ್ಳಬೇಕು. ಪ್ರತಿ ಗ್ರಾಮ ಸಮಿತಿಗಳು ಹೆಚ್ಚು ಮುತುವರ್ಜಿ ವಹಿಸಿ ಸಮ್ಮೇಳನದ ಯಶಸ್ಸಿಗೆ ಸಹಕರಿಸಲು ವಿನಂತಿಸಿದರು.

ಜಿಲ್ಲಾಧ್ಯಕ್ಷರಾದ ನವೀನಚಂದ್ರ ಜೈನ್ ಮಾತನಾಡಿ, ಜಿಲ್ಲಾ ಸಮ್ಮೇಳನದ ಪೂರ್ವ ತಯಾರಿಯಾಗಿ ನಡೆಸಬೇಕಾದ ತುರ್ತು ಕೆಲಸಗಳ ಬಗ್ಗೆ ಉಲ್ಲೇಖಿಸಿದರು.

ಇತ್ತೀಚಿಗೆ ವ್ಯಾಪಕವಾಗಿ ಹರಡುತ್ತಾ ಹೈನುಗಾರಿಕೆ ಅವಲಂಬಿತ ಕುಟುಂಬ ಮತ್ತು ಪಶುಗಳಿಗೆ ಕಂಟಕವಾದ ಚರ್ಮ ಗಂಟು ರೋಗದ ತೀವ್ರತೆ ಮತ್ತು ಅನುಸರಿಸಬೇಕಾದ ಮುಂಜಾಗರುಕತಾ ಕ್ರಮಗಳು ಹಾಗೂ ಲಭ್ಯ ಔಷದಿಗಳ ಬಗ್ಗೆ ಸಂಘದ ಹಿರಿಯರಾದ ಅನಂತ್ ಭಟ್ ಇರ್ವತ್ತೂರು ಮತ್ತು ಶ್ರೀನಿವಾಸ್ ಭಟ್ ಇರ್ವತ್ತೂರು ಸೂಕ್ತ ಮಾಹಿತಿ ನೀಡಿ, ಕಿಸಾನ್ ಸಂಘದ ಸಹಯೋಗದಲ್ಲಿ ಉಚಿತವಾಗಿ ವಿತರಿಸುವ ರೋಗ ನಿವಾರಣಾ ಔಷದಿಯ ಸಮರ್ಪಕ ಉಪಯೋಗದ ಕುರಿತು ವಿವರಿಸಿ ಅಗತ್ಯವಿರುವ ರೈತರು ಕಿಸಾನ್ ಸಂಘದ ಕಾರ್ಕಳ ಕಾರ್ಯಲಯ ಅಥವಾ ಅನಂತಶಯನ ಬಳಿ ಇರುವ “ಅಮೃತ ಸಾವಯವ ಮಳಿಗೆ “ಯಿಂದ ಔಷದಿಯನ್ನು ಉಚಿತವಾಗಿ ಪಡೆಯಲು ವಿನಂತಿಸಿದರು.

ಸಭೆಯಲ್ಲಿ ರೈತರಿಂದ ಬಂದಿರುವ ಕೆಲವು ದೂರು ಅರ್ಜಿಗಳನ್ನು ಪರಿಶೀಲನೆ ಮಾಡಿ ಸಂಬAಧಪಟ್ಟ ಇಲಾಖೆಗಳನ್ನು ಸಂಪರ್ಕಿಸಿ ರೈತರಿಗೆ ಸೂಕ್ತ ನ್ಯಾಯ ಒದಗಿಸಲು ತೀರ್ಮಾನಿಸಲಾಯಿತು.

ಸುಂದರ ಶೆಟ್ಟಿ ಮುನಿಯಾಲು, ಮೋಹನದಾಸ್ ಅಡ್ಯoತಾಯ ಕಾಂತಾವರ,ಕೆ ಪಿ ಭಂಡಾರಿ, ನೀರೆ ಶೇಖರ್ ಶೆಟ್ಟಿ, ಬೋಳ ಕರುಣಾಕರ್ ಶೆಟ್ಟಿ, ಕೇಶವ ಮರಾಟೆ ಹಾಗೂ ಸಮ್ಮೇಳನ ಉಪಸಮಿತಿ ಪದಾಧಿಕಾರಿಗಳು, ತಾಲೂಕು ಮತ್ತು ಗ್ರಾಮ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ಇನ್ನಾ ನಿರೂಪಿಸಿ, ವಂದಿಸಿದರು.

.

Leave a Reply

Your email address will not be published. Required fields are marked *