Share this news

ಟೊರಂಟೋ: ಕೆನಡಾದ ದೇಗುಲದ ಮೇಲೆ ಖಲಿಸ್ತಾನಿ ಉಗ್ರರು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಇಲ್ಲಿನ ಹಿಂದೂ ದೇಗುಲವೊಂದರ ಮೇಲೆ ದೇಶ ವಿರೋಧಿ ಮತ್ತು ಮೋದಿ ದ್ವೇಷದ ಹೇಳಿಕೆಗಳನ್ನು ಬರೆಯಲಾಗಿದೆ. ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿರುವ ಶ್ರೀ ಮಾತಾ ಭಾಮೇಶ್ವರಿ ದುರ್ಗಾ ದೇವಿ ದೇಗುಲವನ್ನು ಖಲಿಸ್ತಾನಿಗಳು ವಿರೂಪಗೊಳಿಸಿದ್ದಾರೆ.

ದೇಗುಲದ ಗೋಡೆ ಮೇಲೆ ಕಪ್ಪು ಬಣ್ಣದ ಸ್ಪ್ರೇ ಯಲ್ಲಿ “ಮೋದಿ ಈಸ್ ಟೆರರಿಸ್ಟ್, ಪಂಜಾಬ್ ಈಸ್ ನಾಟ್ ಇಂಡಿಯಾ” (ಮೋದಿ ಓರ್ವ ಭಯೋತ್ಪಾದಕ, ಪಂಜಾಬ್ ಭಾರತದ ಭಾಗವಲ್ಲ) ಎಂದು ಬರೆದಿದ್ದಾರೆ. ಕಳೆದ ತಿಂಗಳು ಆಗಸ್ಟ್ನಲ್ಲಿ ಇದೇ ಪ್ರಾಂತ್ಯದ ಶ್ರೀ ಲಕ್ಷಿö್ಮÃನಾರಾಯಣ ಮಂದಿರವನ್ನು ಖಲಿಸ್ತಾನಿ ಉಗ್ರರು ಧ್ವಂಸಗೊಳಿಸಿದ್ದರು. ಇದರಲ್ಲಿ ಇಬ್ಬರು ಖಲಿಸ್ತಾನಿ ಉಗ್ರರು ಭಾಗಿಯಾಗಿರುವುದು ಕಂಡುಬAದಿತ್ತು.

ಕಳೆದ ತಿಂಗಳು, ಆಗಸ್ಟ್ನಲ್ಲಿ, ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ದೇವಾಲಯವನ್ನು ಧ್ವಂಸಗೊಳಿಸಲಾಯಿತು ಮತ್ತು ಇಬ್ಬರು ಖಲಿಸ್ತಾನ್ ಬೆಂಬಲಿಗರು ಘಟನೆಯಲ್ಲಿ ಭಾಗಿಯಾಗಿರುವುದು ಕಂಡುಬAದಿದೆ. ಹಿಂದಿನ ಘಟನೆಯಲ್ಲೂ ದೇವಸ್ಥಾನದ ಗೋಡೆಗಳ ಮೇಲೆ ಭಾರತ ವಿರೋಧಿ ಗೀಚುಬರಹವನ್ನು ಎರಚಲಾಗಿತ್ತು. ಇದೀಗ ಜಿ20 ಶೃಂಗಸಭೆ ನಡೆಯುತ್ತಿರುವ ಬೆನ್ನಲ್ಲೇ ಭಾರತ ಮತ್ತು ಪ್ರಧಾನಿ ವಿರುದ್ಧ ಬರೆದಿರುವುದು ತೀವೃ ಆಕ್ರೋಶಕ್ಕೆ ಕಾರಣವಾಗಿದೆ.

 

 

Leave a Reply

Your email address will not be published. Required fields are marked *