Share this news

ಮಂಗಳೂರು: ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ದಾಂಡಿಯಾ ನೃತ್ಯ ಕಾರ್ಯಕ್ರಮಕ್ಕೆ ಮಂಗಳೂರು ಪೊಲೀಸರು ಅನುಮತಿ ನೀಡಿದ್ದಾರೆ. ಅದರಂತೆ, ಉತ್ತರ ಭಾರತದಿಂದ ದಾಂಡಿಯಾ ನೃತ್ಯ ಕಲಾವಿದರು ಆಗಮಿಸಿದ್ದಾರೆ. ಇಂದಿನಿAದ 4 ದಿನ ಮಂಗಳೂರಿನ 23 ಕಡೆ ದಾಂಡಿಯಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ನವರಾತ್ರಿಯ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ನಡೆಯುವ ದಾಂಡಿಯಾ ನೃತ್ಯ (ಗರ್ಬಾ) ಹೆಸರಿನಲ್ಲಿ ಮಂಗಳೂರಿನಲ್ಲಿ ಕೆಲವೊಂದು ಕಡೆ ಕಾರ್ಯಕ್ರಮ ಆಯೋಜನೆ ಮಾಡಿದ್ದು, ಇದಕ್ಕೆ ಎಲ್ಲಾ ಯುವಕ ಯುವತಿಯರು ಮುಕ್ತವಾಗಿ ಭಾಗವಹಿಸುವಂತೆ ಆಮಂತ್ರಣ ಹಂಚಿಕೊAಡಿದ್ದಾರೆ .ದಾಂಡಿಯಾ ನೃತ್ಯ ಜಗನ್ಮಾತೆ ದುರ್ಗಾದೇವಿ ಹೆಸರಿನಲ್ಲಿ ನವರಾತ್ರಿಯ ಸಂದರ್ಭದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮವಾಗಿದ್ದು, ಕಳೆದ ವರ್ಷಗಳಲ್ಲಿ ನಡೆದ ಇಂತಹ ಕಾರ್ಯಕ್ರಮದಲ್ಲಿ ಡ್ರಗ್ಸ್, ಮಾಧಕ ವಸ್ತು ದ್ರವ್ಯ ಸೇವನೆ, ಅಸಭ್ಯ ನೃತ್ಯಗಳ ಬಗ್ಗೆ ದೂರುಗಳು ಬಂದಿದ್ದವು. ಅಲ್ಲದೆ, ಧಾರ್ಮಿಕ ಕಾರ್ಯಕ್ರಮ ಈ ರೀತಿಯಲ್ಲಿ ನಡೆದರೆ ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಹೀಗಾಗಿ ಕಾರ್ಯಕ್ರಮಕ್ಕೆ ಅನುಮತಿ ನೀಡಬಾರದಾಗಿ ಎಂದು ವಿಶ್ವ ಹಿಂದೂ ಪರಿಷತ್ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿತ್ತು.

 

 

 

 

 

 

 

 

Leave a Reply

Your email address will not be published. Required fields are marked *