ಮಣಿಪುರ: ಮಣಿಪುರದ ಖೋಕೆನ್ ಗ್ರಾಮದಲ್ಲಿ ನಡೆದ ಹಿಂಸಾಚಾರದಲ್ಲಿ ಶಂಕಿತ ಬಂಡುಕೋರರು ನಡೆಸಿದ ದಾಳಿಯಲ್ಲಿ ಮಹಿಳೆ ಸೇರಿದಂತೆ ಮೂರು ಮಂದಿ ಬಲಿಯಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಖೋಕೆನ್ ಗ್ರಾಮವು ಕಾಂಪೋಕ್ಪಿ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಯ ನಡುವಿನ ಗಡಿಯಲ್ಲಿದೆ. ಶಂಕಿತ ಉಗ್ರರು ಮತ್ತು ಸಂತ್ರಸ್ತರು ವಿವಿಧ ಸಮುದಾಯಗಳಿಗೆ ಸೇರಿದವರು ಎಂದು ಹೇಳಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ದಾಳಿಕೋರರು ಯೋಧರ ಸೋಗಿನಲ್ಲಿ ಬಂದಿದ್ದು, ಮಿಲಿಟರಿ ಬಳಸುವ ವಾಹನಗಳನ್ನು ಹೋಲುವ ವಾಹನಗಳನ್ನು ಚಲಾಯಿಸಿದ್ದರು. ಶುಕ್ರವಾರ ಮುಂಜಾನೆ ಖೋಕನ್ ಗ್ರಾಮಕ್ಕೆ ತೆರಳಿದ ಅವರು ತಮ್ಮ ಸ್ವಯಂಚಾಲಿತ ರೈಫಲ್‌ಗಳಿಂದ ಗ್ರಾಮಸ್ಥರ ಮೇಲೆ ಗುಂಡು ಹಾರಿಸಿದ್ದಾರೆ.



