ಕಾರ್ಕಳ: ಶ್ರೀ ಕ್ಷೇತ್ರ ಪಳ್ಳಿ-ಅಡಪಾಡಿ ಶ್ರೀ ಉಮಾಮಹೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ಸಹಸ್ರ ಚಂಡಿಕಾಯಾಗ ಹಾಗೂ ಆಲಡೆ ಪ್ರತಿಷ್ಠಾಪನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಮಾರ್ಚ್ 22 ರಿಂದ 28ರ ವರೆಗೆ ನಡೆಯಲಿವೆ.
ಮಾರ್ಚ್ 24ರಂದು ಸಂಜೆ 6ಕ್ಕೆ ಬಲಿ ಮಂಡಲೊತ್ಸವ, ಮಾರ್ಚ್.25 ರಮದು ಮಧ್ಯಾಹ್ನ ವಿಷ್ಣುಯಾಗ ಸಂಜೆ 3ರಿಂದ ಧಾರ್ಮಿಕ ಸಭೆ ನಡೆಯಲಿದ್ದು,ಗೋವಾ ಕವಳೆ ಪೊಂಡಾ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠದ ಶಿವಾನಂದ ಸರಸ್ವತೀ ಸ್ವಾಮೀಜಿ ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಮಾರ್ಚ್ 26ರಂದು ಮಧ್ಯಾಹ್ನ ಲಘುರುದ್ರಯಾಗ ನಡೆಯಲಿದ್ದು ಸಂಜೆ ಧಾರ್ಮಿಕ ಸಭೆಯಲ್ಲಿ ಮಾತೃ ಸಂಗಮ ಕಾರ್ಯಕ್ರಮ ನಡೆಯಲಿದೆ.
ಮಾರ್ಚ್ 27ರಂದು ಸಹಸ್ರ ಚಂಡಿಕಾಯಾಗ ಪೂರ್ಣಾಹುತಿ, ಬ್ರಹ್ಮಕಲಶಾಅಭಿಷೇಕ ಹಾಗೂ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಸಪ್ತಯತಿವರೇಣ್ಯರ ದಿವ್ಯ ಉಪಸ್ಥಿತಿಯಲ್ಲಿ ಸಂತಸಂಗಮ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 23 ರಿಂದ 27ರವರೆಗೆ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾಭಿವಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀದೇವರ ಪೂರ್ಣಾನುಗ್ರಹಕ್ಕೆ ಪಾತ್ರರಾಗಬೇಕೆಂದು ದೇವಳದ ಪ್ರಕಟಣೆ ತಿಳಿಸಿದೆ