Share this news

ಕಾರ್ಕಳ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಸಿರಿಧಾನ್ಯ ಬಳಕೆ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮವು ಕಾರ್ಕಳ ತಾಲೂಕು ಬಜಗೋಳಿ ವಲಯದ ಮಾಳ ಚೌಕಿ ಸ.ಹಿ.ಪ್ರಾಥಮಿಕ ಶಾಲೆಯಲ್ಲಿ ಡಿ 25ರಂದು ಸೋಮವಾರ ನಡೆಯಿತು.
ಪ್ರಗತಿ ಪರ ಕೃಷಿಕರಾದ ರತ್ನಾಕರ ಜೈನ್ ಕದಂಡಲಾಜೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಯೋಜನೆಯ ಉಡುಪಿ ಜಿಲ್ಲೆಯ ಸಿರಿಧಾನ್ಯ ಮೇಲ್ವಿಚಾರಕ ಅಭಿಮಾನ್ ಜೈನ್ ಸಿರಿ ಧಾನ್ಯ ಬಳಕೆಯ ಪ್ರಯೋಜನ ಬಗ್ಗೆ ಮಾಹಿತಿ ಹಾಗೂ ಸಾಮೆ ಸಿರಿಧಾನ್ಯದ ಮೊಸರನ್ನದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಶಾಲಾ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಮಂಜುಳಾ, ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ, ವಲಯ ಮೇಲ್ವಿಚಾರಕ ಮಧುಕಿರಣ್, ಸೇವಾ ಪ್ರತಿನಿಧಿ ಪುಷ್ಪವತಿ ಹೆಗ್ಡೆ ಚೌಕಿ ಒಕ್ಕೂಟ ಅಧ್ಯಕ್ಷೆ ಸುಮತಿ ಮುಂತಾದವರು ಉಪಸ್ಥಿತರಿದ್ದರು

ನೀವು ಈಗಾಗಲೇ ಶಿಕ್ಷಣ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ಇದ್ದೀರಾ? ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *