ಕಾರ್ಕಳ: ಮಾಳ ಘಾಟಿಯಲ್ಲಿ ಬೈಕಿಗೆ ಕಾರು ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ. ಕಳಸ ಕಡೆಯಿಂದ ಎಸ್ ಕೆ ಬಾರ್ಡರ್ ಮಾರ್ಗವಾಗಿ ಮಾಳ ಘಾಟಿಯಲ್ಲಿ ಕಾರ್ಕಳ ಕಡೆಗೆ ಅತೀವೇಗವಾಗಿ ಬರುತ್ತಿದ್ದ ಇನ್ನೋವಾ ಕಾರು ಮುಂದಿನಿAದ ಹೋಗುತ್ತಿದ್ದ ಬುಲೆಟ್ ಬೈಕಿಗೆ ಡಿಕ್ಕಿಯಾದ ಪರಿಣಾಮ ಸವಾರ ಕೃಷ್ಣ ಎಂಬವರು ಬಿದ್ದು ಗಾಯಗೊಂಡಿದ್ದಾರೆ. ಈ ಅಪಘಾತ ನಡೆದ ಬಳಿಕ ಕಾರು ಚಾಲಕ ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








