Share this news

ಕಾರ್ಕಳ: ಸಾಮಾಜಿಕ ಬದಲಾವಣೆಯ ಹರಿಕಾರ, ಹಿಂದುಳಿದ ಮತ್ತು ದೀನ ದಲಿತರ ಪ್ರೇರಣಾ ಶಕ್ತಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನಾಧಾರಿತ “ಶೂದ್ರ ಶಿವ” ಕನ್ನಡ ನಾಟಕವು ಮಾರ್ಚ್ 26 ರವಿವಾರ ಸಂಜೆ 7 ಗಂಟೆಗೆ ಕಾರ್ಕಳದ ಗಾಂಧಿ ಮೈದಾನದಲ್ಲಿ ಪ್ರದರ್ಶನಗೊಳ್ಳಲಿದೆ.

ಮಂಗಳೂರಿನ ರುದ್ರ ಥಿಯೇಟರ್ ಅರ್ಪಿಸಿ ಖ್ಯಾತ ರಂಗ ನಿರ್ದೇಶಕ ವಿದು ಉಚ್ಚಿಲ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ರಾಜ್ಯದ ವಿವಿದ ಜಿಲ್ಲೆಗಳಿಂದ ಆಗಮಿಸಿ ರಂಗ ತರಬೇತು ಪಡೆದ ರಂಗ ಕಲಾವಿದರಿಂದ ಪದರ್ಶನಗೊಳ್ಳಲಿರುವ ಈ ನಾಟಕ ಈಗಾಗಲೇ ಅನೇಕ ಪ್ರದರ್ಶನಗಳನ್ನು ನೀಡಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಗುರುಗಳ ಅಭಿಮಾನಿಗಳು ಹಾಗೂ ಕಲಾಭಿಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕಾರ್ಯಕ್ರಮದ ಆಯೋಜಕರಾದ ಕಾರ್ಕಳ ಬ್ರಹ್ಮಶ್ರೀ ನಾರಾಯಣಗುರು ಅಭಿಮಾನಿ ಬಳಗ ಈ ಮೂಲಕ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *