Share this news

ಮುನಿಯಾಲು : ಸೇವಾ ಲೈಫ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಹಾಗೂ ಹಿಂದೂ ಹೆಲ್ಪ್ ಲೈನ್ ಮುನಿಯಾಲು ಸಹಯೋಗದೊಂದಿಗೆ ಟ್ರಾನ್ಸ್ ಫ್ಯೂಷನ್ ಡಿಪೆಂಡೆಂಟ್ ಥಲಸ್ಸೆಮಿಯಾ ಖಾಯಿಲೆಯಿಂದ ಬಳಲುತ್ತಿರುವ ಮುನಿಯಾಲಿನ 8 ವರ್ಷ ಪ್ರಾಯದ ಅಮೂಲ್ಯಳ ಚಿಕಿತ್ಸೆಗೆ ಸಂಗ್ರಹಿಸಿದ ರೂ.7 ಲಕ್ಷ ಧನಸಹಾಯವನ್ನು ಹಸ್ತಾಂತರಿಸಲಾಯಿತು.

ವಿಶೇಷವಾಗಿ ಈ ಮಗುವಿನ ಚಿಕಿತ್ಸೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿರುವ ಅರ್ಜುನ್ ಬಂಡಾರ್ಕರ್ ಇವರಿಗೆ ಮುನಿಯಾಲಿನ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ವರಂಗ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಅಂಡಾರು, ಅರ್ಚಕ ರಾಘವೇಂದ್ರ ಭಟ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಧಾಕರ್ ಶೆಟ್ಟಿ, ಜನಪ್ರಿಯ ರೈಸ್ ಮಿಲ್ ನ ಮಂಜುನಾಥ್ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *