ಹೆಬ್ರಿ: ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ವರಂಗ ಗ್ರಾಮದ ಮುನಿಯಾಲು ಸಮೀಪದ ಚಟ್ಕಲ್’ಪಾದೆ ಎಂಬಲ್ಲಿ ನಡೆದಿದೆ
ಬೈಕ್ ಸವಾರ ಉತ್ತರಪ್ರದೇಶ ಮೂಲದ ಬಿನಯ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಬಿನಯ್ ಹಾಗೂ ಆತನ ಸ್ನೇಹಿತ ಬಿಟ್ಟಾಜ್ ಬೈಕಿನಲ್ಲಿ ಹಬ್ರಿ ಕಡೆಯಿಂದ ಅಜೆಕಾರು ಕಡೆಗೆ ಹೋಗುತ್ತಿದ್ದಾಗ ಅಜೆಕಾರು ಕಡೆಯಿಂದ ಹೆಬ್ರಿ ಕಡೆಗೆ ಕಾರು ಚಾಲಕ ಸೆಬಾಸ್ಟಿಯನ್ ಎಂಬಾತ ತನ್ನ ಕಾರನ್ನು ಅತೀವೇಗವಾಗಿ ಚಲಾಯಿಸಿಕೊಂಡು ತಿರುವಿನಲ್ಲಿ ಬಲಭಾಗಕ್ಕೆ ಬಂದು ಬಿನಯ್ ಚಲಾಯಿಸುತ್ತಿದ್ದ ಬೈಕಿಗೆ ಹೊಡೆದ ಪರಿಣಾಮ ಸವಾರ ಬಿನಯ್ ಅವರ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ