Share this news

ಚಿತ್ರದುರ್ಗ: ಮುರುಘಾ ಶ್ರೀ ಮೇಲಿನ ಎರಡನೇ ಪೋಕ್ಸೋ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾದ ಆರೋಪ ಪಟ್ಟಿಇದೀಗ ಬಹಿರಂಗಗೊಂಡಿದ್ದು, ಸಂತ್ರಸ್ತ ಬಾಲಕಿಯರೊಂದಿಗೆ ಯಾವುದೇ ಲೈಂಗಿಕ ಕ್ರಿಯೆ ನಡೆದಿಲ್ಲ. ಆದರೆ ಲೈಂಗಿಕ ದೌರ್ಜನ್ಯ ಅಲ್ಲಗಳೆಯುವಂತಿಲ್ಲ ಎಂದು ತಜ್ಞ ವೈದ್ಯರು ವರದಿ ನೀಡಿದ್ದಾರೆ.

ಜ.10 ರಂದೇ ಗ್ರಾಮಾಂತರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದು ಸೋಮವಾರ ಚಾರ್ಜ್‌ಶೀಟ್‌ ನಂಬರ್‌ ನೀಡಲಾಗಿದೆ. ಮುರುಘಾಶ್ರೀ ಪರ ವಕೀಲರು ಜಾರ್ಜ್‌ಶೀಟ್ ಪಡೆದ ನಂತರ ಅದರಲ್ಲಿನ ಪ್ರಮುಖ ಸಂಗತಿಗಳು ಗೊತ್ತಾಗಿವೆ. ಸಂತ್ರಸ್ತ ಬಾಲಕಿಯರಿಬ್ಬರ ವೈದ್ಯಕೀಯ ಪರೀಕ್ಷೆ ವರದಿಯಲ್ಲಿ ಲೈಂಗಿಕ ಕ್ರಿಯೆ ನಡೆದಿಲ್ಲ. ಆದರೆ ಲೈಂಗಿಕ ದೌರ್ಜನ್ಯ ಅಲ್ಲಗಳೆಯುವಂತಿಲ್ಲ ಎಂದು ಚಿತ್ರದುರ್ಗ ಜಿಲ್ಲಾಸ್ಪತ್ರೆಯ ಡಾ.ಉಮಾ, ಡಾ.ರೂಪಾ ತಮ್ಮ ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಮೊದಲ ಆರೋಪಿ ಮುರುಘಾಶ್ರೀ ಹಾಗೂ ಎರಡನೇ ಆರೋಪಿ ರಶ್ಮಿ  ತಮ್ಮ ಮೇಲಿನ ಎಲ್ಲ ಆರೋಪಗಳನ್ನು ನಿರಾಕರಿಸಿದ್ದಾರೆ. ಸಂತ್ರಸ್ತ ಬಾಲಕಿಯರು ನಮಗೆ ಗೊತ್ತೇ ಇಲ್ಲವೆಂದು ಮುರುಘಾಶ್ರೀ  ಹೇಳಿದ್ದರೆ, ಮುರುಘಾಶ್ರೀ ಖಾಸಗಿ ಕೋಣೆಗೆ ನಾನೆಂದೂ ಬಾಲಕಿಯರ ಕಳಿಸಿಲ್ಲವೆಂದು ರಶ್ಮಿ ಹೇಳಿಕೆ ನೀಡಿದ್ದು ಆರೋಪ ಪಟ್ಟಿಯಲ್ಲಿ ನಮೂದಿಸಲಾಗಿದೆ.

ಮೊದಲ ಪ್ರಕರಣದಲ್ಲಿ ಸಂತ್ರಸ್ತ ಬಾಲಕಿಯರು ಹೇಳಿದ ರೀತಿಯೇ 2ನೇ ದೂರಿನ ದಾಟಿಯೂ ಇದೆ. ಹಾಸ್ಟೆಲ್‌ ವಾರ್ಡನ್‌ ರಶ್ಮಿ ಟೈಂ ಟೇಬಲ್‌ ಹಾಕಿಕೊಂಡು ಸರದಿ ಪ್ರಕಾರ ನಮ್ಮನ್ನು ಮುರುಘಾಶ್ರೀಗಳ ಖಾಸಗಿ ಕೋಣೆಗೆ ಕಳಿಸುತ್ತಿದ್ದರು. ಸ್ವಾಮೀಜಿಯವರು ಚಾಕೋಲೇಟ್‌ ಹಾಗೂ ಮತ್ತು ಬರುವ ಔಷಧ ನೀಡಿ ನಮ್ಮನ್ನು ಬಳಿಸಿಕೊಳ್ಳುತ್ತಿದ್ದರೆಂದು ಸಂತ್ರಸ್ತ ಬಾಲಕಿಯರು ಹೇಳಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *