ಕಾರ್ಕಳ : ತಾಲೂಕಿನ ಕಡ್ತಲ ಗ್ರಾಮದ ಮುಳ್ಕಾಡು ಕಿರಿಯ ಪ್ರಾಥಮಿಕ ಶಾಲೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶೌಚಾಲಯ ರಚನೆಗೆ ಮಂಜೂರಾದ ರೂ. 50,000 ಸಹಾಯಧನವನ್ನು ಹಸ್ತಾಂತರಿಸಲಾಯಿತು.
ಕಡ್ತಲ ಗ್ರಾಮ ಪಂಚಾಯತಿ ಅಧ್ಯಕ್ಷ ಸುಕೇಶ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ವಲಯ ನಿರ್ದೇಶಕ ಶಿವರಾಯ ಪ್ರಭು ಅವರನ್ನು ಇಜ ಸಂದರ್ಭ ಸನ್ಮಾನಿಸಲಾಯಿತು. ಹೆಬ್ರಿ ವಲಯದ ಯೋಜನಾಧಿಕಾರಿ ಲೀಲಾವತಿ ಗೌಡ ಸಹಾಯಧನವನ್ನು ಹಸ್ತಾಂತರಿಸಿದರು.
ಮುಖ್ಯ ಅತಿಥಿಗಳಾಗಿ ಅಜೆಕಾರು ವಲಯ ಮೇಲ್ವಿಚಾರಕರಾದ ಸಂತೋಷ್, S.D.M.C ಅಧ್ಯಕ್ಷ ಸತೀಶ್ ಪೂಜಾರಿ, ಒಕ್ಕೂಟ ಅಧ್ಯಕ್ಷೆ ಶಾಂತಿ ಪ್ರಭು, ಜನಜಾಗೃತಿ ಅಧ್ಯಕ್ಷ ದೇವೇಂದ್ರ ಕಾಮತ್, ಮುದ್ರಾಡಿ ವಲಯಾಧ್ಯಕ್ಷ ರತ್ನಾಕರ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಜನಾರ್ಧನ ಬೇಳಿರಾಯ ಸ್ವಾಗತಿಸಿ, ಸಹಶಿಕ್ಷಕ ಸುಭಾಸ್ ನಿರೂಪಿಸಿದರು.ಜ್ಞಾನದೀಪ ಶಿಕ್ಷಕಿ ರೂಪ ವಂದಿಸಿದರು. ಇತರ ಶಿಕ್ಷಕರು ಸಹಕರಿಸಿದರು.


























