ಮೂಡಬಿದಿರೆ :ಕಳೆದ ಮೂರು ದಶಕಗಳಿಂದ ಮೂಡಬಿದ್ರೆಯಲ್ಲಿ ಫೋಟೋಗ್ರಾಫರ್ ಆಗಿ ಖ್ಯಾತರಾಗಿದ್ದ ಸುಬ್ರಮಣ್ಯ (ಸುಬ್ಬು) (55 ವರ್ಷ) ಅವರು ಇಂದು ಮುಂಜಾನೆ ವಿಧಿವಶರಾಗಿದ್ದಾರೆ.
ಮೂಡಬಿದಿರೆಯಲ್ಲಿ ಸುಷ್ಮಾ ಸ್ಟುಡಿಯೋ ಮೂಲಕ ಖ್ಯಾತರಾಗಿದ್ದ ಅವರು ಕೆಲವು ಪತ್ರಿಕೆಗಳ ಛಾಯಾಗ್ರಾಹಕರಾಗಿಯೂ ಗಮನ ಸೆಳೆದಿದ್ದರು. ಕೆಲವು ಧಾರಾವಾಹಿಗಳಲ್ಲಿ ಸಹ ಕಲಾವಿದರಾಗಿಯೂ ಬಣ್ಣ ಹಚ್ಚಿದ್ದರು. ಎಲ್ಲರೊಂದಿಗೆ ಆತ್ಮೀಯ ಒಡನಾಟ ಹೊಂದಿದ್ದ ಸುಬ್ರಹ್ಮಣ್ಯ ಮೂಡುಬಿದಿರೆ ಪರಿಸರದಲ್ಲಿ ಸುಬ್ಬು ಎಂದೇ ಫೇಮಸ್ ಆಗಿದ್ದರು.
ಅವರಿಗೆ ಮಂಗಳವಾರ ತಡರಾತ್ರಿ ಎದೆ ನೋವು ಕಾಣಿಸಿಕೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಇಂದು ಮುಂಜಾನೆ ನಿಧನರಾಗಿದ್ದಾರೆ. ಮೃತರು ಪತ್ನಿ,ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.