Share this news

ಮೂಡುಬಿದಿರೆ: ರಾಮ ಕೇವಲ ನಾಮವಲ್ಲ, ಭಕ್ತಿಯ ಧಾಮ,ಸಮ್ಮಾನದ ಜೀವನಕ್ಕೆ ಪರಂಧಾಮ. ರಾಮನ ಬದುಕುಆಬಾಲವೃದ್ಧರಿಗೆ ಪ್ರೇರಣೆಯ ಸ್ರೋತಸ್ಸು ಎಂದು ಎಕ್ಸಲೆಂಟ್ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ಅಯೋಧ್ಯೆಯಲ್ಲಿ ಬಾಲರಾಮನ ವಿಗ್ರಹದ ಪ್ರಾಣಪ್ರತಿಷ್ಠಾಪನಾಮಹೋತ್ಸವ ನಡೆಯುತ್ತಿರುವ ಪ್ರಯುಕ್ತ ಎಕ್ಸಲೆಂಟ್ಸಂಸ್ಥೆಯ ಆವರಣದಲ್ಲಿ ರಾಮನ ಭಾವಚಿತ್ರವನ್ನು ಅನಾವರಣಗೊಳಿಸಿಪೂಜೆ ಸಲ್ಲಿಸಿ ರಾಮನ ಆದರ್ಶಮಯ ಬದುಕನ್ನು ಪ್ರಸ್ತುತಪಡಿಸಿದರು. ಪ್ರೀತಿಗೆ ಆದರ್ಶ, ಸಹೋದರತ್ವಕ್ಕೆ ಮಾದರಿ,ಆತ್ಮಾಭಿಮಾನ ಗೌರವದ ಸಂಕೇತ, ಇಂದ್ರಿಯನಿಗ್ರಹಿ,
ಶೌರ್ಯಸಾಹಸದ ಪ್ರತಿರೂಪ, ಗುರುಸೇವಾಧುರಂಧರ, ಪರಿಪೂರ್ಣವ್ಯಕ್ತಿತ್ವಕ್ಕೆ ನಿದರ್ಶನ ಪ್ರಭು ಶ್ರೀರಾಮ ನಮ್ಮೆಲ್ಲರ ಬದುಕಿಗೆ ಸ್ಫೂರ್ತಿಯಾಗಿ ಹೃದಯಮಂದಿರದಲ್ಲಿ ಶಾಶ್ವತವಾಗಿನೆಲೆಸಲಿ ಎಂದು ಯುವರಾಜ ಜೈನ್  ಸದಾಶಯ ವ್ಯಕ್ತಪಡಿಸಿದರು.
ಭಾಷಾ ವಿಭಾಗ ಮುಖ್ಯಸ್ಥ ವಿಕ್ರಮ್ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡುತ್ತ ದಯೆ, ಧೈರ್ಯ, ವಿನಯ ಮತ್ತು ಸದಾಚಾರಗಳಿಂದ ಅಲಂಕೃತವಾದ ಜೀವನದೆಡೆಗೆ ನಮ್ಮನ್ನು ಕೈಬೀಸಿ ಕರೆಯುವ ಭಗವಂತ ರಾಮನ ಸಾರ್ವಕಾಲಿಕ
 ಸದ್ಗುಣಗಳು ನಮ್ಮ ಮಾರ್ಗವನ್ನು ಬೆಳಗಿಸಲಿ. ರಾಮನ ಗುಣಗಳನ್ನು ಅಳವಡಿಸಿಕೊಳ್ಳುವ ಮೂಲಕ ನಾವು ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ಸೌಹಾರ್ದತೆ, ಸಹಾನುಭೂತಿಯನ್ನು ಬೆಳೆಸಿಕೊಳ್ಳುತ್ತೇವೆ. ಅಚಲವಾದ ಶೌರ್ಯದಿಂದ ಸವಾಲುಗಳನ್ನು ಎದುರಿಸುತ್ತೇವೆ. ಇತರರ ಜೊತೆಗೆ ನೈಜ ನಮ್ರತೆಯಿಂದ ವ್ಯವಹರಿಸುತ್ತೇವೆ ಮತ್ತು ಸದಾಚಾರದ ತತ್ವಗಳನ್ನು ಎತ್ತಿ
ಹಿಡಿಯುತ್ತೇವೆ. ಸದ್ಗುಣದ ಪ್ರಯಾಣವನ್ನು ರೂಪಿಸುತ್ತೇವೆ ಎಂದು
ರಾಮನ ತತ್ವಗಳನ್ನು ಬಿತ್ತರಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಿಂದ ರಾಮಭಜನೆ ನೆರವೇರಿತು. ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್, ಪ್ರಾಂಶುಪಾಲ ಪ್ರದೀಪ್ ಕುಮಾರ ಶೆಟ್ಟಿ, ಪ್ರೌಢಶಾಲೆಯ ಉಪಮುಖ್ಯೋಪಾಧ್ಯಾಯ ಜಯಶೀಲ ಉಪಸ್ಥಿತರಿದ್ದರು. ತೇಜಸ್ವೀ ಭಟ್ ನಿರೂಪಿಸಿ ವಂದಿಸಿದರು.

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *