ಮೂಡಬಿದಿರೆ : ಪಡಿತರ ಚೀಟಿ ತಿದ್ದುಪಡಿಗೆ ಸೆ. 12 ರಿಂದ 14ರವರೆಗೆ ಕಾಲಾವಕಾಶ ನೀಡಲಾಗಿದ್ದು ಈ ಅವಧಿಯಲ್ಲಿ ದಿನವಿಡೀ ಸರ್ವರ್ ಸಮಸ್ಯೆಯಿಂದ ಜನರು ಪರದಾಡುವಂತಾಗಿದೆ.

ಇದರಿಂದ ತುರ್ತು ಆರೋಗ್ಯ ಸಂಬಂಧಿ ಚಿಕಿತ್ಸೆ ಸೇರಿದಂತೆ ಇತರ ಅವಶ್ಯಕತೆಗಳಿಗೆ ಪಡಿತರ ಚೀಟಿ ತಿದ್ದುಪಡಿ ಅಗತ್ಯ. ಪ್ರಸ್ತುತ ಸರ್ವರ್ ಸಮಸ್ಯೆಯಿಂದ ತಿದ್ದುಪಡಿ ಬಾಕಿ ಆಗಿರುವ ಕಾರಣ ಸಾರ್ವಜನಿಕರ ಹಿತದೃಷ್ಟಿಯಿಂದ ಪಡಿತರ ಚೀಟಿ ತಿದ್ದುಪಡಿ ದಿನಾಂಕವನ್ನು ವಿಸ್ತರಿಸಬೇಕೆಂದು ಹಾಗೂ ಅತೀ ಅಗತ್ಯ ತಿದ್ದುಪಡಿಗಳನ್ನು ಖಾಯಂಗೊಳಿಸುವಂತೆ ಜವನೆರ್ ಬೆದ್ರ ಯುವ ಸಂಘಟನೆ ವತಿಯಿಂದ ದ.ಕ ಜಿಲ್ಲಾಧಿಕಾರಿ, ಮೂಡುಬಿದಿರೆ ತಹಶೀಲ್ದಾರರು ಹಾಗೂ ಆಹಾರ ನಿರೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಜವನೆರ್ ಬೆದ್ರ ಯುವ ಸಂಘಟನೆ ಸ್ಥಾಪಕಾಧ್ಯಕ್ಷ ಅಮರ್ ಕೋಟೆ, ಸಂಚಾಲಕ ನಾರಾಯಣ ಪಡುಮಲೆ, ಸದಸ್ಯರುಗಳಾದ ಸಂಪತ್ ಪೂಜಾರಿ, ನೆತ್ತೊಡಿ ಅಖಿಲೇಶ್, ಸಾಕ್ಷತ್ ಮತ್ತಿತ್ತರು ಉಪಸ್ಥಿತರಿದ್ದರು.




