ವಾಷಿಂಗ್ಟನ್:ಶುಕ್ರವಾರ ತಡರಾತ್ರಿ ಮೊರಾಕೋದ ಮರ್ಕೆಚ್ ಬಳಿ ಭೀಕರ ಪ್ರಬಲ ಭೂಕಂಪ ಸಂಭವಿಸಿದ್ದು ಸುಮಾರು 296ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ ಎಂದು ದೇಶದ ಆಂತರಿಕ ಸಚಿವಾಲಯ ಸ್ಪಷ್ಟಪಡಿಸಿದೆ. ಮೊರಾಕ್ಕೋದ ಮರ್ಕೇಜ್ ನೈಋತ್ಯ ಭಾಗದಲ್ಲಿ ಶುಕ್ರವಾರ ತಡರಾತ್ರಿ 6.8 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಮರ್ಕೇಜ್ ನೈಋತ್ಯಕ್ಕೆ 44 ಮೈಲಿ (71 ಕಿಲೋಮೀಟರ್) ದೂರದಲ್ಲಿ ರಾತ್ರಿ 11:11 ಕ್ಕೆ 18.5 ಕಿಲೋಮೀಟರ್ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಮೊರಾಕ್ಕೋ ರಾಜಧಾನಿ ರಬಾತ್ನಿಂದ ದಕ್ಷಿಣಕ್ಕೆ 320 ಕಿಲೋಮೀಟರ್ ದೂರದಲ್ಲಿರುವ ಪ್ರವಾಸಿನಗರ ಮರ್ರಾಕೆಚ್ ಪ್ರದೇಶದಲ್ಲಿ 27 ಜನರು ಸಾವನ್ನಪ್ಪಿದ್ದಾರೆ. ದಕ್ಷಿಣಕ್ಕೆ ಔರ್ಜಾಜೆಟ್ ಪ್ರಾಂತ್ಯದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮೂಲಗಳನ್ನು ಉಲ್ಲೇಖಿಸಿ ವರದಿ ತಿಳಿಸಿದೆ.ಭೂಕಂಪನದ ವೇಳೆ ಸೆರೆ ಹಿಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, ಕಿರಿದಾದ ಗಲ್ಲಿಗಳಲ್ಲಿ ವಸ್ತುಗಳು ಹಾರುತ್ತಿರುವುದು ತ್ತು ಕಪಾಟುಗಳಿಂದ ವಸ್ತುಗಳು ನೆಲಕ್ಕೆ ಬೀಳುತ್ತಿರುವುದನ್ನು ತೋರಿಸಿದೆ.

ಮರ್ಕೇಜ್ ನ ನೈಋತ್ಯ ಭಾಗವು ಭೂಕಂಪನಕ್ಕೆ ಹೆಚ್ಚು ಗುರಿಯಾಗುವ ಪ್ರದೇಶವಾಗಿದ್ದು, ಅಗ್ಗಾಗೆ ಭೂಮಿ ಕಂಪಿಸುತ್ತಿರುತ್ತದೆ. ಮೊರಾಕ್ಕೋದ ಉತ್ತರ ಪ್ರದೇಶದಲ್ಲಿ ಆಗಾಗ್ಗೆ ಭೂಕಂಪಗಳನ್ನು ಸಂಭವಿಸುತ್ತದೆ. 2004 ರಲ್ಲಿ ಈಶಾನ್ಯ ಮೊರಾಕ್ಕೋದ ಅಲ್ ಹೊಸೈಮಾದಲ್ಲಿ ಸಂಭವಿಸಿದ ಭೂಕಂಪದಲ್ಲಿ 628 ಮಂದಿ ಮೃತಪಟ್ಟಿದ್ದರು. 926 ಮಂದಿ ಗಾಯಗೊಂಡಿದ್ದರು.




