ನವದೆಹಲಿ: ಯುಪಿಐ ಮೂಲಕ ಇಂಟರ್ ನೆಟ್ ಇಲ್ಲದೇ ಆಫ್ ಲೈನ್ ವಹಿವಾಟಿನ ಮಿತಿಯನ್ನು ಹೆಚ್ಚಿಸಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸುತ್ತೋಲೆ ಹೊರಡಿಸಿದೆ. ಇಂಟರ್ನೆಟ್ ಇಲ್ಲದಿರುವ ಅಥವಾ ಸಿಗ್ನಲ್ ತುಂಬಾ ದುರ್ಬಲವಾಗಿರುವ ಪ್ರದೇಶಗಳಲ್ಲಿ, ಯುಪಿಐ ಲೈಟ್ ಮೂಲಕ ಆಫ್‌ಲೈನ್ ಮೋಡ್‌ನಲ್ಲಿ ವಹಿವಾಟುಗಳ ಮಿತಿಯನ್ನು 200 ರಿಂದ 500 ಕ್ಕೆ ಹೆಚ್ಚಿಸಲಾಗಿದೆ ಎಂದು ಆರ್‌ಬಿಐ ತಿಳಿಸಿದೆ. ಇದರಿಂದ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಅನುಕೂಲವಾಗಲಿದೆ.
ಇಂಟರ್ನೆಟ್ ಸೌಲಭ್ಯದಿಂದ ದೂರವಿರುವ ಮೊಬೈಲ್ ಫೋನ್ ಹೊಂದಿರುವವರಿಗೆ ಆಫ್‌ಲೈನ್ ಪಾವತಿ ಸೌಲಭ್ಯವನ್ನು ಸೆಪ್ಟೆಂಬರ್ 2022 ರಲ್ಲಿ ಆರಂಭಿಸಲಾಗಿತ್ತು.ಇದಕ್ಕಾಗಿ, ಹೊಸ ಇಂಟಿಗ್ರೇಟೆಡ್ ಪೇಮೆಂಟ್ ಪ್ಲಾಟ್‌ಫಾರ್ಮ್ ಯುಪಿಐ ಲೈಟ್ ಅನ್ನು ಪ್ರಾರಂಭಿಸಿ ಗರಿಷ್ಟ ಪಾವತಿಮಿತಿ ಕೇವಲ 200 ರೂ.ಗೆ ನಿಗದಿಪಡಿಸಲಾಗಿತ್ತು. ಈ ಹಿಂದೆ ಆಗಸ್ಟ್ 10 ರಂದು ನಡೆದ ಹಣಕಾಸು ನೀತಿ ಸಭೆಯಲ್ಲಿ ಆರ್‌ಬಿಐ ಗವರ್ನರ್ ಮಿತಿಯನ್ನು ಹೆಚ್ಚಿಸುವುದಾಗಿ ಘೋಷಿಸಿದ್ದರು.
ಆರ್‌ಬಿಐ ಈ ಕ್ರಮದಿಂದ ಇಂಟರ್ ನೆಟ್ ಬಳಸದೇ ಸ್ಮಾರ್ಟ್ ಫೋನ್ ಬಳಸುವ ಗ್ರಾಹಕರಿಗೂ ಅನುಕೂಲವಾಗಲಿದೆ.