ಮಾಸ್ಕೊ: ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಲು ರಷ್ಯಾ ಕೈಗೊಂಡಿರುವ ಲೂನಾ-25 ಯೋಜನೆಯ ಡೀಬೂಸ್ಟಿಂಗ್ ವೇಳೆ ತಾಂತ್ರಿಕ ಸಮಸ್ಯೆ ಉಂಟಾಗಿರುವುದಾಗಿ ರಷ್ಯಾ ಹೇಳಿದೆ. ರಷ್ಯಾ ಬ್ಯಾಹ್ಯಾಕಾಶ ಸಂಸ್ಥೆ ರಾಸ್ ಕಾಸ್ಮೋಸ್ ಶನಿವಾರ “ಲ್ಯಾಂಡಿAಗ್ ಪೂರ್ವ ಕಕ್ಷೆಗೆ ನೌಕೆ ಇಳಿಸುವ ವೇಳೆ ತಾಂತ್ರಿಕ ಸಮಸ್ಯೆ ಉಂಟಾಗಿದೆ” ಎಂದು ಹೇಳಿದೆ. ಚಂದ್ರಯಾನ-3 ಉಡಾವಣೆಯ ಬಳಿಕ ರಷ್ಯಾ ಈ ರಾಕೆಟ್ ಉಡಾವಣೆ ಮಾಡಿದ್ದರೂ ಭಾರತಕ್ಕಿಂತಲೂ ಮೊದಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸುವುದಾಗಿ ಹೇಳಿತ್ತು. ಆದರೆ ಇದೀಗ ತಾಂತ್ರಿಕ ಸಮಸ್ಯೆ ಉಂಟಾಗಿರುವುದರಿAದ ಲ್ಯಾಂಡಿAಗ್ ವಿಳಂಬವಾಗಲಿದೆಯೇ ಅಥವಾ ಈ ಸಮಸ್ಯೆಯನ್ನು ಸರಿಪಡಿಸಿ ನೌಕೆಯನ್ನು ಸರಿಯಾದ ಕಕ್ಷೆಗೆ ಕೂರಿಸಲಾಗಿದೆಯೇ ಎಂಬ ಮಾಹಿತಿಯನ್ನು ರಷ್ಯಾ ಹಂಚಿಕೊAಡಿಲ್ಲ.
1976ರ ಬಳಿಕ ರಷ್ಯಾ ಇದೇ ಮೊದಲ ಬಾರಿಗೆ ಚಂದ್ರನ ಅನ್ವೇಷಣೆಗೆ ನೌಕೆಯನ್ನು ಕಳಿಸಿಕೊಟ್ಟಿತ್ತು. ಆದರೆ ಅದರಲ್ಲೀಗ ತಾಂತ್ರಿಕ ತೊಂದರೆ ಕಾಣಿಸಿಕೊಂಡಿದೆ. ಅಂದು ಯುಎಸ್‌ಎಸ್‌ಆರ್ ಎನ್ನುವ ಹೆಸರಿನಲ್ಲಿದ್ದ ರಷ್ಯಾ, ಅಮರಿಕದ ಜೊತೆಗೆ ನಡೆಸಿದ್ದ ಸ್ಪೇಸ್ ರೇಸ್ ನಡೆಸಿತ್ತು. ಈ ಬಾರಿ ಚಂದ್ರನ ದಕ್ಷಿಣ ಧ್ರುವದ ರೇಸ್‌ನಲ್ಲಿ ಭಾರತವಿದೆ. ಭಾರತ ಚಂದ್ರನ ಮೇಲೆ ಲ್ಯಾಂಡ್ ಆಗುವ ನಿಟ್ಟಿನಲ್ಲಿ ಆಮೆಯಂತೆ ಎಚ್ಚರಿಕೆ ಹೆಜ್ಜೆ ಇರಿಸಿದ್ದರೆ, ರಷ್ಯಾ ಮೊಲದಂತೆ ವೇಗವಾಗಿ ಚಂದ್ರನ ತಲುಪುವ ಇರಾದೆಯಲ್ಲಿದೆ. ಸುಯೇಜ್ 2.1ವಿ ರಾಕೆಟ್ ಮೂಲಕ ಲೂನಾ 25 ಅನ್ನು ವೊಸ್ಟೊಚ್ನಿ ಕಾಸ್ಮೊಡ್ರೋಮ್‌ನಿಂದ ರೋಸ್ಕೊಸ್ಮೊಸ್ ನಭಕ್ಕೆ ಹಾರಿಸಿತ್ತು. ಚಂದ್ರನ ದಕ್ಷಿಣ ಧ್ರುವದಲ್ಲಿ ಸಾಫ್ಟ್ ಲ್ಯಾಂಡಿAಗ್ ಸಾಧಿಸುವುದು ಮಿಷನ್‌ನ ಪ್ರಾಥಮಿಕ ಗುರಿಯಾಗಿತ್ತು. ಹೆಪ್ಪುಗಟ್ಟಿದ ನೀರಿನ ರೀತಿಯಲ್ಲಿರುವ ಪ್ರದೇಶವನ್ನು ಶೋಧನೆ ಮಾಡುವ ಗುರಿಯನ್ನು ಹೊಂದಿತ್ತು. ಆದರೀಗ ಅದರಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಸುದ್ದಿಯಾಗಿದೆ.