Share this news

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಗೆ ಸರ್ಕಾರ ಮೇಜರ್ ಸರ್ಜರಿ ಮಾಡಿದ್ದು ಉನ್ನತ ಪೊಲೀಸ್ ಅಧಿಕಾರಿಗಳು ಸೇರಿದಂತೆ 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದೆ.
ಈ ಕುರಿತಂತೆ ರಾಜ್ಯಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು,ತಕ್ಷಣದಿಂದಲೇ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ.
ಬೆಂಗಳೂರಿನಲ್ಲಿದ್ದ ಬಹುತೇಕ ಐಪಿಎಸ್ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಲಾಗಿದೆ. ಅನುಪಮ್ ಅಗರವಾಲ್, ಮಂಗಳೂರು ಕಮಿಷನರ್ ಆಗಿ ವರ್ಗಾವಣೆಗೊಳಿಸಲಾಗಿದೆ. ಭೀಮಾಶಂಕರ ಗುಳೇದ್, ಬೆಳಗಾವಿ ಎಸ್‌ಪಿ, ಡಾ.ಎಸ್. ಡಿ ಶರಣಪ್ಪ, ಡಿಐಜಿಪಿ ಪೊಲೀಸ್ ಅಕಾಡೆಮಿ ಮೈಸೂರು ಸೇರಿದಂತೆ ಹಲವು ಐಪಿಎಸ್ ಅಧಿಕಾರಿಳಿಗೆ ಸ್ಥಳ ನಿಯೋಜನೆ ಮಾಡದೇ ವರ್ಗಾವಣೆಗೊಳಿಸಲಾಗಿದೆ.

ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಇಂತಿದೆ:

ಡಾ.ಭೀಮಾಶಂಕರ ಗುಳೇದ್-ಎಸ್​​​​ಪಿ, ಬೆಳಗಾವಿ

ಸಾರಾ ಫಾತೀಮಾ-ಬೆಂಗಳೂರು ಸಂಚಾರ ಪಶ್ಚಿಮ ವಿಭಾಗ.

ಡಾ.S.D.ಶರಣಪ್ಪ-ಡಿಐಜಿಪಿ & ಡೈರೆಕ್ಟರ್, ಪೊಲೀಸ್ ಅಕಾಡೆಮಿ, ಮೈಸೂರು

ಡಾ.ಕೆ.ಅರುಣ್-ಎಸ್​​​​ಪಿ ಉಡುಪಿ

ಕಾರ್ತಿಕ್​​​​ ರೆಡ್ಡಿ-ಡಿಸಿಪಿ, ಬೆಂಗಳೂರು ಸಂಚಾರ ದಕ್ಷಿಣ ವಿಭಾಗ

ಯತೀಶ್ ಚಂದ್ರ-ಎಸ್​​​​ಪಿ, ಆಂತರಿಕ ಭದ್ರತಾ ವಿಭಾಗ

ಕೆ.ಪರಶುರಾಮ್-ಎಸ್​​​​ಪಿ, ಇಂಟೆಲಿಜೆನ್ಸ್‌ ವಿಭಾಗ

ನಿಕಂ ಪ್ರಕಾಶ್ ಅಮ್ರಿತ್-ಎಸ್​​​​ಪಿ, ವೈರ್ ಲೆಸ್

ರಾಹುಲ್ ಕುಮಾರ್ ಶಹಾಪುರವಾಡ್-ಡಿಸಿಪಿ, ಬೆಂಗಳೂರು ದಕ್ಷಿಣ ವಿಭಾಗ

ಡಾ.ಕೋನ ವಂಶಿಕೃಷ್ಣ-ಡಿಸಿಪಿ, ಕಮಾಂಡ್ ಸೆಂಟರ್, ಬೆಂಗಳೂರು

ಲಕ್ಷ್ಮಣ್ ನಿಂಬರಗಿ-ಎಸ್​​​​ಪಿ, ಸ್ಟೇಟ್ ಕ್ರೈಂ ರೆಕಾರ್ಡ್ ಬ್ಯೂರೋ

H.D.ಆನಂದ್ ಕುಮಾರ್-ಡೈರೆಕ್ಟೋರೆಟ್ ಸಿವಿಲ್ ರೈಟ್ಸ್, ಎನ್ಪೋರ್ಸ್ಮೆಂಟ್

ಕುಶಾಲ್ ಚೌಸ್ಕಿ-ಜಂಟಿ ನಿರ್ದೇಶಕ, ವಿಧಿವಿಜ್ಞಾನ ಪ್ರಯೋಗಾಲಯ, ಬೆಂಗಳೂರು

ಸಂಜೀವ್ ಎಂ. ಪಾಟೀಲ್-ಡಿಸಿಪಿ, ವೈಟ್​​ಫೀಲ್ಡ್ ವಿಭಾಗ

ಡಾ.ಸುಮನ್ ಡಿ.ಪನ್ನೇಕರ್-ಎಐಜಿಪಿ, ಹೆಡ್ ಕ್ವಾರ್ಟರ್ಸ್-1

ವೈ.ಅಮರನಾಥ್ ರೆಡ್ಡಿ-ಎಸ್​ಪಿ, ಬಾಗಲಕೋಟ

ಲೋಕೇಶ್ ಭರಮಪ್ಪ-ಎಸ್​​ಪಿ, ರಾಜ್ಯ ಪೊಲೀಸ್ ಅಕಾಡೆಮಿ, ಮೈಸೂರು

ಅನುಪಮ್ ಅಗರ್ವಾಲ್-ಮಂಗಳೂರು ಸಿಟಿ ಕಮಿಷನರ್

ಕಿಶೋರ್ ಬಾಬು- SP&ಪ್ರಿನ್ಸಿಪಲ್, ಪೊಲೀಸ್ ತರಬೇತಿ ಕೇಂದ್ರ, ಕಲಬುರಗಿ

ಎಂ.ಎಸ್.ಮಹಮ್ಮದ್ ಸುಜೀತಾ-ಎಸ್​​​​ಪಿ, ಹಾಸನ

ಡಿ.ದೇವರಾಜ್-ಡಿಸಿಪಿ, ಬೆಂಗಳೂರು ಪೂರ್ವ ವಿಭಾಗ

ಅದ್ದೂರು ಶ್ರೀನಿವಾಸುಲು-ಎಸ್​ಪಿ, ಕಲಬುರಗಿ

ಸೋನಾವಾನೆ ರಿಷಿಕೇಶ್ ಭಗವಾನ್-ಎಸ್​​ಪಿ, ವಿಜಯಪುರ

ಆರ್.ಶ್ರೀನಿವಾಸ್ ಗೌಡ-ಡಿಸಿಪಿ 2, ಸಿಸಿಬಿ ಬೆಂಗಳೂರು

ಶೇಖರ್.ಹೆಚ್.ತೆಕ್ಕನ್ನವರ್, ಡಿಸಿಪಿ, ಸಿಸಿಬಿ ಬೆಂಗಳೂರು

ವರ್ತಿಕಾ ಕಟಿಯಾರ್-ಎಸ್​​​ಪಿ, ಸ್ಟೇಟ್ ಕ್ರೈಂ ರೆಕಾರ್ಡ್ ಬ್ಯೂರೋ

ಹರಿರಾಮ್ ಶಂಕರ್-ಎಸ್​ಪಿ, ಇಂಟೆಲಿಜೆನ್ಸ್‌ ವಿಭಾಗ

ರವೀಂದ್ರ ಕಾಶಿನಾಥ್ ಗಡದಿ-ಎಸ್​ಪಿ, ಇಂಟೆಲಿಜೆನ್ಸ್‌ ವಿಭಾಗ

ಅಬ್ದುಲ್ ಅಹದ್-ಡಿಸಿಪಿ, ಬೆಂಗಳೂರು ಕೇಂದ್ರ ವಿಭಾಗ

ಪಿ.ಕೃಷ್ಣಕಾಂತ್-ಎಐಜಿಪಿ(ಆಡಳಿತ ವಿಭಾಗ)

ಕೆ.ಸಂತೋಷ್ ಬಾಬು-ಡಿಸಿಪಿ ಆಡಳಿತ ವಿಭಾಗ, ಬೆಂಗಳೂರು ನಗರ

ಜಯಪ್ರಕಾಶ್-ಎಸ್​​​​ಪಿ, ಇಂಟೆಲಿಜೆನ್ಸ್ ವಿಭಾಗ

Leave a Reply

Your email address will not be published. Required fields are marked *