ಕಾರ್ಕಳ: ರೆಂಜಾಳ ಗ್ರಾಮದ ಕಾಂಗ್ರೆಸ್ ಪಕ್ಷದ ಮಹಿಳಾ ಘಟಕದ ಪದಾಧಿಕಾರಿ ಮಲ್ಲಿಕಾ ಶೆಟ್ಟಿಯವರು ಶಾಸಕ ಸುನಿಲ್ ಕುಮಾರ್ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಹಾಗೂ ಸ್ಥಳೀಯ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿರುವ ಮಲ್ಲಿಕಾ ಶೆಟ್ಟಿ ಕಾರ್ಕಳ ಕ್ಷೇತ್ರದಾದ್ಯಂತ ಹಾಗೂ ರೆಂಜಾಳ ಗ್ರಾಮದಲ್ಲಿ ನಡೆಸಿದ ಅಭಿವೃದ್ಧಿ ಚಟುವಟಿಕೆಗಳನ್ನು ಮತ್ತು ಪಕ್ಷದ ಸಿದ್ಧಾಂತಗಳನ್ನು ಮೆಚ್ಚಿ, ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಬಿಜೆಪಿ ಪಕ್ಷದ ಶಾಲು ಮತ್ತು ಧ್ವಜವನ್ನು ನೀಡಿ ಮಲ್ಲಿಕಾ ಶೆಟ್ಟಿಯವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಕ್ಷೇತ್ರ ಪ್ರಭಾರಿಗಳಾದ ಬಾಹುಬಲಿ ಪ್ರಸಾದ್, ಶರತ್ ಶೆಟ್ಟಿ ರೆಂಜಾಳ, ರಮೇಶ್ ಶೆಟ್ಟಿ, ಉಮೇಶ್ ಶೆಟ್ಟಿ, ದೀಪಿಕಾ ಶೆಟ್ಟಿ, ವೃಷಭರಾಜ್ ಜೈನ್, ಯೋಗೀಶ್ ದೇವಾಡಿಗ, ರಾಜೇಶ್ ಶೆಟ್ಟಿ, ಸತೀಶ್, ಪದ್ಮರಾಜ್ ಶೆಟ್ಟಿ, ಸುನಂದಾ, ಪುಷ್ಪಾ ಗೌಡ ಮುಂತಾದವರು ಉಪಸ್ಥಿತರಿದ್ದರು.