Share this news

ನವದೆಹಲಿ: ಟ್ವಿಟ್ಟರ್ ಆಯ್ತು, ಈಗ ವಿಕಿಪೀಡಿಯಾ ಮೇಲೆ ವಿಶ್ವದ ನಂಬರ್ ಒನ್ ಶ್ರೀಮಂತ ಎಲಾನ್ ಮಸ್ಕ್ ಕಣ್ಣು ಬಿದ್ದಿದೆ. ಮಸ್ಕ್ ಅವರು ಟ್ವಿಟ್ಟರ್ ಖರೀದಿಸುವ ಮುನ್ನ ಅದರೊಂದಿಗೆ ಮಸ್ಕ್ ಸೋಷಿಯಲ್ ಮೀಡಿಯಾದಲ್ಲಿ ಜಟಾಪಟಿ ನಡೆಸಿದ್ದು ಗೊತ್ತಿರುವ ವಿಚಾರ. ಈಗ ವಿಕಿಪೀಡಿಯಾ ಹಾಗೂ ಅವರ ಮಧ್ಯೆ ವಾಗ್ಯುದ್ಧಗಳು ನಡೆಯುತ್ತಿವೆ. ವಿಕಿಪೀಡಿಯಾದ ಕೆಲ ಬರಹಗಳ ಬಗ್ಗೆ ಅಸಮಾಧಾನಗೊಂಡಿರುವ ಎಲಾನ್ ಮಸ್ಕ್ ಇತ್ತೀಚೆಗೆ ಒಂದು ಸವಾಲು ಹಾಕಿದ್ದಾರೆ. ವಿಕಿಪೀಡಿಯಾ ತನ್ನ ಹೆಸರು ಬದಲಾಯಿಸಿಕೊಂಡರೆ 1 ಬಿಲಿಯನ್ ಡಾಲರ್ ಕೊಡುವುದಾಗಿ ಹೇಳಿದ್ದಾರೆ. ಇದಾದ ಬಳಿಕ ವಿಕಿಪೀಡಿಯಾ ಅಭಿಮಾನಿಗಳು ಹಾಗೂ ಇಲಾನ್ ಮಸ್ಕ್ ನಡುವೆ ಒಂದಷ್ಟು ಮಾತಿನ ಸಮರ ಏರ್ಪಟ್ಟಿತು.

ಅವರ ಹೆಸರನ್ನು ಡಿಕಿಪೀಡಿಯಾ ಎಂದು ಬದಲಾಯಿಸಿಕೊಂಡರೆ ಒಂದು ಬಿಲಿಯನ್ ಡಾಲರ್ (8,300 ಕೋಟಿ ರೂ) ಕೊಡುತ್ತೇವೆ. ನಿಖರ ಮಾಹಿತಿಯನ್ನು ರಕ್ಷಿಸಲು ಈ ಕೆಲಸ ಮಾಡುತ್ತೇನೆ, ಎಂದು ಸ್ಪೇಸ್ ಎಕ್ಸ್ ಸಂಸ್ಥಾಪಕರೂ ಆದ ಇಲಾನ್ ಮಸ್ಕ್ ಚಾಲೆಂಜ್ ಮಾಡಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.

ಇದಕ್ಕೆ ಒಬ್ಬ ವಿಕಿಪೀಡಿಯಾ ಬಳಕೆದಾರ ಪ್ರತಿಕ್ರಿಯಿಸಿದ್ದು, ವಿಕಿಪೀಡಿಯಾ ನೀವು ಈ ಸವಾಲು ಸ್ವೀಕರಿಸಿ. ಹಣ ಪಡೆದ ಬಳಿಕ ಹೆಸರನ್ನು ಮತ್ತೆ ಬದಲಾಯಿಸಿಕೊಳ್ಳಬಹುದು, ಎಂದಿದ್ದಾರೆ. ಇದಕ್ಕೂ ಇಲಾನ್ ಮಸ್ಕ್ ಪ್ರತಿಕ್ರಿಯಿಸಿ, ಕನಿಷ್ಠ ಒಂದು ವರ್ಷ ಇರಬೇಕು. ನಾನೇನು ಮೂರ್ಖನಲ್ಲ ಎಂದು ಇಲಾನ್ ಮಸ್ಕ್ ತಮ್ಮ ಸವಾಲಿಗೊಂದು ಷರತ್ತು ವಿಧಿಸಿದ್ದಾರೆ.

ಮಸ್ಕ್ ಇಷ್ಟಕ್ಕೆ ಸುಮ್ಮನಾಗಿಲ್ಲ. ಬಳಕೆದಾರರಿಂದ ವಿಕಿಪೀಡಿಯಾ ಹಣದ ದಾನ ಸಂಗ್ರಹಿಸುತ್ತಿರುವ ಬಗ್ಗೆ ಮಸ್ಕ್ ಕಿಡಿಕಾರಿದ್ದಾರೆ.
ವಿಕಿಮೀಡಿಯ ಫೌಂಡೇಶನ್?ಗೆ ಯಾಕೆ ಇಷ್ಟು ಹಣ ಬೇಕು ಎಂದು ನಿಮಗೆ ಆಶ್ಚರ್ಯವೇ ಆಗಿಲ್ಲವಾ? ವಿಕಿಪೀಡಿಯಾವನ್ನು ನಿರ್ವಹಿಸಲಂತೂ ಅದು ಅವಶ್ಯಕತೆ ಇಲ್ಲ. ಇಡೀ ಪಠ್ಯದ ನಕಲನ್ನು ನೀವು ಫೋನ್?ನಲ್ಲಿ ಹಾಕಿಬಿಡಬಹುದು. ಹಾಗಾದರೆ, ಆ ಹಣ ಯಾತಕ್ಕಾಗಿ? ಈ ಪ್ರಶ್ನೆಗೆ ಉತ್ತರ ಬೇಕು, ಎಂದು ಆಗ್ರಹಿಸಿದ್ದಾರೆ. ಅಲ್ಲದೆ, ತಮ್ಮ ವಿಕಿಪೀಡಿಯಾ ಪೇಜ್‌ಗೆ ಹಸು ಮತ್ತು ಸೆಗಣಿಯ ಚಿತ್ರವನ್ನೂ ಸೇರಿಸುವಂತೆ ಮತ್ತೊಂದು ಟ್ವೀಟ್ ಮಾಡಿ ವ್ಯಂಗ್ಯ ಮಾಡಿದ್ದಾರೆ.

 

 

 

 

 

 

 

 

Leave a Reply

Your email address will not be published. Required fields are marked *