ಕಾರ್ಕಳ:ವಿದ್ಯಾರ್ಥಿಗಳು ಶಿಕ್ಷಣದ ಜೊತೆ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಲು ವ್ಯಕ್ತಿತ್ವ ವಿಕಸನದಂತಹ ಶಿಬಿರಗಳು ಸಹಕಾರಿ ಯಾಗಿವೆ ಎಂದು ಹಿರ್ಗಾನ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದ ಮೊಕ್ತೇಸರ ಅಶೋಕ್ ನಾಯಕ್ ಹೇಳಿದರು .
ಅವರು ಹಿರ್ಗಾನ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನದಲ್ಲಿಸಂಸ್ಕಾರ ಸುಬೋಧ ಶಿಬಿರ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ಜೊತೆ ಆಟೋಟಗಳು ಕ್ರೀಡೆಗಳು ಒಂದೆಡೆಯಾದರೆ ಉತ್ತಮ ಸಂಸ್ಕಾರವನ್ನು ಮೈಗೂಡಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ಹೊಂದಲು ಸಹಕಾರಿಯಾಗುತ್ತದೆ ಎಂದರು.
ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷ ಸದಾಶಿವ ಪ್ರಭು ಶಿಬಿರಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ದೇವಳದ ಅರ್ಚಕ ವೇದಮೂರ್ತಿ ರಾಮಚಂದ್ರ ಭಟ್ , ಹಿರಿಯರಾದ ಮಂಜುನಾಥ್ ನಾಯಕ್, ಪಾಂಡುರಂಗ ನಾಯಕ್ ಹಾಗೂ ಉಮೇಶ್ ನಾಯಕ್ ಎಣ್ಣೆಹೊಳೆ, ಪುರುಷೋತ್ತಮ ನಾಯಕ್, ಪ್ರೇಮಾನಂದ ನಾಯಕ್ ಉಪಸ್ಥಿತರಿದ್ದರು