ಕೊಪ್ಪಳ : ಈಡಿಗ ಬಿಲ್ಲವ ಹಾಗೂ ನಾಮಧಾರಿ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಕೊಪ್ಪಳ ಜಿಲ್ಲೆಯ ‘ ಗಂಗಾವತಿ ಚಲೋ’ ಹಮ್ಮಿಕೊಂಡಿದ್ದು ನಂತರ ಅಲ್ಲಿ ಒಂದು ದಿನ ಉಪವಾಸ ಸತ್ಯಾಗ್ರಹ ಆಯೋಜನೆ ಮಾಡಲಾಗಿದೆ. ಈಡಿಗ ಸಮುದಾಯದ ಗುರುಗಳಾದ ಪ್ರಣವಾನಂದ ಸ್ವಾಮೀಜಿ ನೇತೃತ್ವದಲ್ಲಿ ಇಂದು ಗಂಗಾವತಿ ಪಟ್ಟಣದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದ್ದು, ಮಹಾಮಂಡಳಿ ನಾರಾಯಣ ಗುರು ಶಕ್ತಿ ಪೀಠದಿಂದ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಗಂಗಾವತಿ ಪಟ್ಟಣದ ಕೃಷ್ಣದೇವರಾಯ ವೃತ್ತದಲ್ಲಿ ಉಪವಾಸ ಸತ್ಯಾಗ್ರಹ ಆಯೋಜಿಸಲಾಗಿದ್ದು, ಆರ್ಯ ಈಡಿಗ ನಿಗಮಕ್ಕೆ ಘೋಷಿಸಿದ ಅನುದಾನವನ್ನು ಬಿಡುಗಡೆ ಮಾಡಬೇಕು, ಹಿಂದಿನ ಸರ್ಕಾರ ಘೋಷಿಸಿದ 500 ಕೋಟಿ ಹಣ ಬಿಡುಗಡೆ ಮಾಡಬೇಕು, ತ್ವರಿತಗತಿಯಲ್ಲಿ ಕುಲಶಾಸ್ತ್ರ ಅಧ್ಯಯನ ಮುಗಿಸಬೇಕು.
ಈಡಿಗ ಸಮಾಜವನ್ನು ಎಸ್ಟಿಗೆ ಸೇವಿಸಲು ಕೇಂದ್ರಕ್ಕೆ ಶಿಫಾರಸು ಮಾಡಬೇಕು ವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಒಂದು ದಿನದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಆರ್ಯ ಈಡಿಗ ಸಮುದಾಯ ಹೇಳಿದೆ.