ಕಾರ್ಕಳ : ತಾಲೂಕಿನ ಶಿರ್ಲಾಲು ಅತಿಶಯ ಶ್ರೀಕ್ಷೇತ್ರ ಭಗವಾನ್ ಅನಂತನಾಥ ಸ್ವಾಮಿ ಬಸದಿ ಸಿದ್ಧಗಿರಿ ಕ್ಷೇತ್ರದ ರಜತ ರಥಯಾತ್ರ ಮಹೋತ್ಸವ, 108 ಕಲಶಾಭಿಭಿಷೇಕ ಹಾಗೂ ಮಹಾಮಸ್ತಕಾಭಿಷೇಕ ಮಹೋತ್ಸವವು ಇಂದು(ಎ.24) ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿತು.
ಕಾರ್ಕಳ ಜೈನ ಮಠದ ರಾಜಧ್ಯಾನಯೋಗಿ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚರ್ಯವರ್ಯ ಮಹಾಸ್ವಾಮಿ ಹಾಗೂ ಸುಧಾಪುರ ಸೋಂದಾ ಜೈನ ಮಠದ ಶ್ರೀಕ್ಷೇತ್ರ ಸ್ವಾದಿ ದಿಗಂಬರ ಪರಮಪೂಜ್ಯ ಸ್ವಸ್ತಿ ಶ್ರೀ ಭಟ್ಟಕಲಂಕ ಭಟ್ಟಾರಕ ಮಹಾಸ್ವಾಮಿಜಿಗಳ ನೇತೃತ್ವದಲ್ಲಿ ನಡೆಯಿತು.ಅಪಾರ ಸಂಖ್ಯೆಯ ಭಕ್ತಾಧಿಗಳು ದೇವರ ಉತ್ಸವದಲ್ಲಿ ಪಾಲ್ಗೊಂಡಿದ್ದರು.