Share this news

ಬೆಂಗಳೂರು : ಪ್ರತ್ಯೇಕ ರಾಷ್ಟ್ರದ ಹೇಳಿಕೆ ದೇಶ ಒಡೆಯುವ ಕೆಲಸವಾಗಿದೆ,ಆದ್ದರಿಂದ ದೇಶವನ್ನು ವಿಭಜಿಸುವ ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಬೇಕೆಂದು ಸಂಸದ ಡಿ.ಕೆ ಸುರೇಶ್ ಹೇಳಿಕೆ ಉಲ್ಲೇಖಿಸಿ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದ ಕೆ ಎಸ್ ಈಶ್ವರಪ್ಪ ವಿರುದ್ಧ ದಾವಣಗೆರೆಯಲ್ಲಿ ಎಫ್ ದಾಖಲಾಗಿತ್ತು ಅಲ್ಲದೆ ಪೊಲೀಸರು ಕೂಡ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.

ಆದರೆ ಇದೀಗ ಹೈಕೋರ್ಟ್ ಈ ಒಂದು FIR ಗೆ ನೀಡಿದೆ. ಪ್ರಕರಣ ತನಿಖೆಗೆ ಹೈಕೋರ್ಟ್‌ ತಡೆ ನೀಡಿದ್ದು, ನ್ಯಾ. ಕೃಷ್ಣದೀಕ್ಷಿತ್‌ ಪೀಠವು ಈ ಕುರಿತಂತೆ ಆದೇಶ ಹೊರಡಿಸಿದೆ.ಇದೆ ಸಂದರ್ಭದಲ್ಲಿ ಈಶ್ವರಪ್ಪ ಹೇಳಿಕೆಯನ್ನ ಖಂಡಿಸಿದ ಕೋರ್ಟ್ ಯಾವುದೇ ರಾಜಕಾರಣಿಗಳಿರಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದೆ.

ನಮ್ಮ ರಾಜಕೀಯ ನಾಯಕರು ಭಾಷೆಯ ಮೇಲೆ ದೌರ್ಜನ್ಯ ಮಾಡ್ತಾ ಇದ್ದಾರೆ. ನಾಯಕರ ಮಾತುಗಳನ್ನು ಮಕ್ಕಳು ನೋಡುತ್ತಾ ಇರ್ತಾರೆ. ಇದರಿಂದ ಮಕ್ಕಳು ಏನನ್ನು ಕಲಿಯುತ್ತಾರೆ? ಸಂಸ್ಕೃತಿ ಬಿಂಬಿಸುವಂತೆ ಮಾತನಾಡಲು ಹೇಳಿ. ನಿಮ್ಮ ಕಕ್ಷಿದಾರರಿಗೆ ನೀವೆ ಸಲಹೆ ನೀಡಿ ಎಂದು ಕೋರ್ಟ್‌ ಕಿವಿಮಾತು ಹೇಳಿದೆ.

ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆಗೆ ಹೈಕೋರ್ಟ್‌ ಅಸಮಾಧಾನ ಹೊರಹಾಕಿದೆ. ನಮ್ಮದು ಬಹು ಭಾಷಾ, ಧರ್ಮ ಇರುವ ದೇಶ. ಎಷ್ಟೋ ಕಡೆ ಸ್ವಲ್ಪ ಹೆಚ್ಚು ಕಡಿಮೆ ಮಾತನಾಡಿದ್ರೆ ಗಲಭೆ ಆಗುವ ಸನ್ನಿವೇಶ ಇದೆ. ಹೀಗುರುವಾಗ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು ಎಂದು ಕೋರ್ಟ್‌ ಸಲಹೆ ನೀಡಿದೆ.

 

 

Leave a Reply

Your email address will not be published. Required fields are marked *