ಕಾರ್ಕಳ:ಮಾವು, ಹಲಸು ಪ್ರಾಕೃತಿಕವಾಗಿ ಹಣ್ಣಾದರೆ ಹೇಗೆ ರುಚಿಯೋ ಹಾಗೆ ಹೆಣ್ಣು ಪ್ರಾಕೃತಿಕವಾಗಿ ಮಗುವಿಗೆ ಜನ್ಮ ನೀಡಬೇಕು. ಸ್ವಾಭಿಮಾನಿ ದೇಶದ ಚಿಂತನೆ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಮಕ್ಕಳು ಮುಂದಿನ ಭವಿಷ್ಯ, ವಾಸ್ತವತೆಯ ಅರಿವು ಅವರಿಗಿರಬೇಕು. ನಾಲಿಗೆಯ ತುದಿಯಲ್ಲಿ ಸತ್ಯ ತಾಂಡವವಾಡಬೇಕು. ನಾಲಿಗೆಯಿಂದ ಬರುವ ಮಾತುಗಳು ಜೇನುತುಪ್ಪದಂತಿರಬೇಕು.
ಇನ್ನೊಬ್ಬರ ಆತ್ಮ ಮತ್ತು ಮಾತಿಗೆ ಗೌರವ ಕೊಡುವವರಾಗಬೇಕು. ಸತ್ಯ ಸತ್ತು ಸುಳ್ಳು ಗೆದ್ದಾಗ ಪ್ರಕೃತಿ ನಾಶವಾಗುತ್ತದೆ ಎಂದು ವಿಮರ್ಶಕ ಹಾಗೂ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ದಯಾನಂದ ಜಿ ಕತ್ತಲಸಾರ್ ಹೇಳಿದರು.
ಅವರು ಎಸ್ ವಿ ಟಿ ವನಿತಾ ಪದವಿ ಪೂರ್ವ ಕಾಲೇಜು ಕಾರ್ಕಳ ಇಲ್ಲಿ ಹತ್ತನೇ ವರ್ಷದ ನೈತಿಕ ಮತ್ತು ಆಧ್ಯಾತ್ಮಿಕ ಶಿಬಿರದಲ್ಲಿ “ತುಳುನಾಡ ಸಂಸ್ಕೃತಿಯೊಳಗೆ ರಾಷ್ಟ್ರೀಯ ಚಿಂತನೆ” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಪ್ರಕೃತಿಯ ನಾಶದಿಂದ ಸಂಸ್ಕೃತಿಯ ನಾಶವಾಗುತ್ತಿದೆ.
ಯಾವುದನ್ನು ಎಲ್ಲಿ ಇಡಬೇಕು, ಅದನ್ನು ಆ ಜಾಗದಲ್ಲಿ ಇಟ್ಟಾಗ ಅದು ಚೆನ್ನ . ಅದು ವ್ಯಕ್ತಿಯಾಗಲಿ ವಸ್ತುವೇ ಇರಲಿ. ಆಮ್ಲಜನಕವನ್ನು ತೆಗೆದುಕೊಂಡು ಆಮ್ಲಜನಕವನ್ನೇ ನೀಡುವ ಏಕೈಕ ಜೀವಿ ಅದು ಹಸು. ಅದಕ್ಕೆ ಅದು ಮಾತೆ. ಅದನ್ನು ಗೊಮಾತೆ ಎಂದು ಪೂಜಿಸುವುದು.ಗೋವಿನ ನಾಶ ಮುಂದೆ ನಮ್ಮ ಸರ್ವನಾಶಕ್ಕೆ ಕಾರವಾಗಬಹುದು. ಹಸು ಪೂಜಿಸಿದವನಿಗೂ, ಅನ್ಯಾಯ ಮಾಡಿದವನಿಗೂ ಪರಿಶುದ್ಧ ಹಾಲನ್ನೇ ಕೊಡುತ್ತೆ . ಅದಕ್ಕೆ ಹಸುವನ್ನು ಮಾತೆ ಎಂದು ಕರೆಯುವುದು.ಹಸುವೇ ಉಸಿರು ಎಂದು ತಿಳಿದು ಅದರ ಉಳಿವಿಗಾಗಿ ಶ್ರಮಿಸುತ್ತೆವೋ ಆಗ ದೇಶದ ಅಭಿವೃದ್ಧಿ ಸಾಧ್ಯ. ಇದು ರಾಷ್ಟ್ರೀಯ ಚಿಂತನೆ. ಹೀಗೆ ತುಳು ನಾಡಿನ ದೈವಾರಾಧನೆಯ ಪಾರ್ದನ, ನುಡಿಕಟ್ಟಿನ ಒಳಗೆ ಒಂದು ಅದ್ಭುತವಾದ ರಾಷ್ಟ್ರೀಯ ಚಿಂತನೆ ಎದೆ ಎಂದು ಎಳೆಎಳೆಯಾಗಿ ನೈಜ ಘಟನೆಗನ್ನು ಉಲ್ಲೇಖ ಮಾಡಿ ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ರಾಮದಾಸ್ ಪ್ರಭು, ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್, ಅಧ್ಯಾಪಕ, ಪ್ರಾಧ್ಯಾಪಕ ಹಾಗೂ ವಿದ್ಯಾರ್ಥಿ ವೃಂದ ಉಪಸ್ಥಿತರಿದ್ದರು.
ಅಧ್ಯಾಪಕ ದೇವದಾಸ್ ಕೆರೆಮನೆ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು