Share this news

ಹಾವೇರಿ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಕೆ.ಎಸ್‌.ಈಶ್ವರಪ್ಪನವರಿಗೆ ಸೆಟ್ಲಮೆಂಟ್‌ ಮಾಡುತ್ತೇನೆ ಎಂಬ ವಿಚಾರ ನಿಜಕ್ಕೂ ಹಾಸ್ಯಾಸ್ಪದ. ಅವರು ಸೆಟ್ಲಮೆಂಟ್‌ ಮಾಡಿಕೊಂಡೇ ಹೊರಗಿದ್ದಾರೆ. ಇನ್ನು ಮುಂದೆ ಹೊರಗೆ ಇರೋಕೆ ಸಾಧ್ಯವಿಲ್ಲ. ಕೇಂದ್ರದಲ್ಲಿ ಯಾವ ಸೆಟ್ಲಮೆಂಟ್‌ ನಡೆಯಲ್ಲ. ಸದ್ಯದಲ್ಲೇ ಡಿಕೆಶಿ ಅವರ ಸೆಟ್ಲಮೆಂಟ್‌ ಆಗಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ರಾಣಿಬೆನ್ನೂರು ತಾಲ್ಲೂಕಿನ ಕೊಡಿಯಾಲ ಹೊಸಪೇಟೆ ಗ್ರಾಮದಲ್ಲಿ ಭಾನುವಾರ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ದೇಶ ವಿಭಜನೆ ಬಗ್ಗೆ ಮಾತಾಡೋದು ಅಂದ್ರೆ ದೇಶದ್ರೋಹ. ಹೀಗಿರುವಾಗ ಡಿ.ಕೆ. ಸುರೇಶ್‌ ಅವರಿಗೆ ಷೋಕಾಸ್‌ ನೋಟಿಸ್ ಕೊಟ್ಟಿಲ್ಲ. ಅಂದರೆ ಸೋನಿಯಾ ಹಾಗೂ ರಾಹುಲ್ ಗಾಂಧಿ ದೇಶ ವಿಭಜನೆಗೆ ಬೆಂಬಲ ಕೊಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆರೋಪಿಸಿದರು.

ದೇಶ ವಿಭಜನೆ ಹೇಳಿಕೆ ನೀಡುವವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ಜಾರಿಗೆ ತರಬೇಕು ಎಂದು ಬಿಜೆಪಿಯ ಮಾಜಿ ಸಚಿವ KS ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದರು .ಇದಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿ , ನಾಡಪ್ರಭು ಕೆಂಪೇಗೌಡರ ರಕ್ತ ನಮ್ಮ ಮೈಯಲ್ಲಿ ಹರಿಯುತ್ತಿದೆ. ಯಾವುದಕ್ಕೂ ಹೆದರುವುದಿಲ್ಲ ಈಶ್ವರಪ್ಪ ಅವರಿಗೆ ಸೆಟಲ್ಮೆಂಟ್ ಆಗಿದೆ ಎಂದು ತಿಳಿಸಿದ್ದರು.

ಅಲ್ಲದೆ ಸಂಸದ ಡಿಕೆ ಸುರೇಶ್ ಕೂಡ ಬಿಜೆಪಿಯ ಮಾಜಿ ಸಚಿವ KS ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದು ನಿಮ್ಮ ಮುಂದೆ ಬಂದು ನಿಲ್ಲುತ್ತೇನೆ ದಿನಾಂಕ ಸ್ಥಳ ತಿಳಿಸುತ್ತೇನೆ ನನ್ನನ್ನು ನೀವೇ ಕೊಂದು ಮೇಲಿನವರಿಂದ ಶಬ್ಬಾಶ್ ಗಿರಿ ಪಡೆಯಿರಿ ಎಂದು ಟಾಂಗ್ ನೀಡಿದ್ದರು.

 

Leave a Reply

Your email address will not be published. Required fields are marked *