ಬೆಂಗಳೂರು: ಗೃಹಜ್ಯೋತಿ ಯೋಜನೆಯ ಲಾಭ ಪಡೆಯಲು ಸೇವಾ ಸಿಂಧು ಮೂಲಕ ಅರ್ಜಿ ಸಲ್ಲಿಸುವಂತೆ ಸರ್ಕಾರ ಸೂಚನೆ ನೀಡಿದೆ. ಆದರೆ ಇತ್ತ ಅರ್ಜಿ ಸಲ್ಲಿಸಲು ಅಪ್ಲಿಕೇಶನ್ ಓಪನ್ ಆಗುತ್ತಿಲ್ಲ ಎಂದು ಫಲಾನುಭವಿಗಳು ದೂರಿದ್ದರು.

ಸದ್ಯ ಈ ಕುರಿತಾಗಿ ಸೇವಾ ಸಿಂಧು ಆ್ಯಪ್ ಡೈರೆಕ್ಟರ್ ದಿಲೀಶ್ ಶಶಿ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಯಾವಾಗಿನಿಂದ ಅರ್ಜಿ ಸ್ವೀಕರಿಸಬೇಕು ಎನ್ನುವುದನ್ನು ತಿಳಿಸಿಲ್ಲ. ಸರ್ಕಾರದಿಂದ ಗೈಡ್ ಲೈನ್ಸ್ ಬಂದ ಕೂಡಲೇ ಅರ್ಜಿ ಸ್ವೀಕರಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು.

ಅರ್ಜಿಗೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ದಾಖಾಲೆಗಳನ್ನ ಕೊಡಬೇಕಾಗುತ್ತದೆ. ಒಂದೇ ದಾಖಾಲೆಯಲ್ಲಿ ಎಲ್ಲಾ ಸ್ಕೀಮ್ಗಳನ್ನ ಮಾಡುವುದಕ್ಕೆ ಸಾಧ್ಯವಿಲ್ಲ. ಹೀಗಾಗಿ ಎಲ್ಲಾ ಸ್ಕೀಮ್ಗಳಿಗೆ ವಿವಿಧ ದಾಖಾಲೆಗಳನ್ನ ಪಡೆದುಕೊಳ್ಳಲಾಗುತ್ತದೆ ಎಂದು ಮಾಹಿತಿ ನೀಡಿದರು.

