ಕಾರ್ಕಳ : ಭ್ರಷ್ಠಾಚಾರ ಹಾಗೂ ಬೇನಾಮಿ ಆಸ್ತಿಗಳ ಬಗ್ಗೆ ದಾಖಲೆ ಸಹಿತ ಪಟ್ಟಿ ಮಾಡಿ ಪ್ರಮೋದ್ ಮುತಾಲಿಕ್ ಸಾರ್ವಜನಿಕ ವೇದಿಕೆಗಳಲ್ಲಿ ಓದಿ ಹೇಳುತ್ತಿದ್ದರೂ ಸುನಿಲ್ ಕುಮಾರ್ ಮೌನ ವಹಿಸಿರುವುದರ ಹಿಂದೆ ಮೌನಂ ಸಮ್ಮತಿ ಲಕ್ಷಣಂ ಎನ್ನುವ ಸಿದ್ದಾಂತ ಅಡಗಿದೆ ಎಂದು ಕಾರ್ಕಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಕೆದಿಂಜೆ ಸುಪ್ರೀತ್ ಶೆಟ್ಟಿ ಹೇಳಿದ್ದಾರೆ.

ಕ್ಷೇತ್ರದಲ್ಲಿ ಭಾವನಾತ್ಮಕ ವಿಚಾರಗಳ ಮೇಲೆ ರಾಜಕೀಯ ಮಾಡಿ ಅವುಗಳನ್ನು ಅಭಿವೃದ್ಧಿಯ ಹೆಸರಲ್ಲಿ ಥಳಕುಹಾಕಿ ಸರಕಾರದ ಹಣವನ್ನು ಅನಗತ್ಯ ದುಂದುವೆಚ್ಚ ಮಾಡಿ ಅದರೊಂದಿಗೆ ತನ್ನ ರಾಜಕೀಯ ಆರ್ಥಿಕ ತಿಜೋರಿಯನ್ನು ಭರ್ತಿ ಮಾಡಿದ ಸುನೀಲ್ ಕುಮಾರ್ ಪ್ರಮೋದ್ ಮುತಾಲಿಕ್ ಮಾಡಿದ ಆರೋಪಗಳಿಗೆ ಪ್ರತಿಕ್ರಿಯೆ ನೀಡದಿರುವುದು ತನ್ನ ಮೇಲಿನ ಆರೋಪ ಒಪ್ಪಿಕೊಂಡಂತಾಗಿದೆ.

ಆದ್ದರಿಂದ ಸುನಿಲ್ ಕುಮಾರ್ ರವರಿಗೆ ಮತ್ತೆ ಈ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ದಿಸುವ ನೈತಿಕ ಹಕ್ಕಿಲ್ಲ. ಪ್ರಮೋದ್ ಮುತಾಲಿಕ್ ಮಾಡಿದ ಆರೋಪಗಳು ಕ್ಷೇತ್ರದಲ್ಲಿ ಸುನಿಲ್ ಕುಮಾರ್ ಮಾಡಿದ ಭ್ರಷ್ಟಾಚಾರಗಳಿಗೆ ಜೀವಂತ ಸಾಕ್ಷಿಗಳು. ಆದ್ದರಿಂದ ಲೋಕಾಯುಕ್ತ ಸಂಸ್ಥೆ ಇವರ ವಿರುದ್ಧ ಸ್ವಯಂ ಪ್ರೇರಿತ – ಸುಮೊಟೊ ಪ್ರಕರಣ ದಾಖಲಿಸಿ ತನಿಖೆಗೆ ಒಳಪಡಿಸಬೇಕು ಸುಪ್ರೀತ್ ಶೆಟ್ಟಿ ಆಗ್ರಹಿಸಿದ್ದಾರೆ.








