ಮೈಸೂರು:ಈ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಯಾಗಿದ್ದ ಪಶು ಭಾಗ್ಯ ಯೋಜನೆಯನ್ನು ಮುಂದಿನ ವರ್ಷದಿಂದಲೇ ಮರುಜಾರಿಗೊಳಿಸಲಾಗುವುದೆಂದು ಪಶುಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ವೆಂಕಟೇಶ್ ಹೇಳಿದ್ದಾರೆ.
ಅವರು ಮೈಸೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿ, 2013ರಲ್ಲಿ ಸಿದ್ಧರಾಮಯ್ಯ ಸರ್ಕಾರ ಜಾರಿ ಮಾಡಿದ್ಧ ಪಶುಭಾಗ್ಯ ಯೋಜನೆಗೆ ಬಹಳ ಬೇಡಿಕೆಯಿದೆ. ಆದರೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಯೋಜನೆ ಸ್ಥಗಿತಗೊಳಿಸಲಾಗಿತ್ತು. ಈ ಯೋಜನೆಯನ್ನು ಮರುಜಾರಿಗೊಳಿಸುವಂತೆ ಶಾಸಕರು, ರೈತರು ಒತ್ತಾಯಿಸಿದ್ದಾರೆ. ಹೀಗಾಗಿ ಶೀಘ್ರವೇ ಮರುಜಾರಿಗೊಳಿಸುವುದಾಗಿ ತಿಳಿಸಿದರು.ಪಶುಭಾಗ್ಯ ಯೋಜನೆ ಮರುಜಾರಿಯಿಂದ ರೈತರಿಗೆ ಅನುಕೂಲ ಆಗಲಿದೆ.ಇದರಿಂದ ಪಶು ಸಾಕಾಣಿಕೆ ಪ್ರಮಾಣ ಹೆಚ್ಚಳವಾಗಿ ಹಾಲು ಉತ್ಪಾದನೆ ಕೂಡ ಹೆಚ್ಚಾಗಲಿದೆ. ಅದಕ್ಕಾಗಿ ಈ ಯೋಜನೆಯನ್ನು ಮತ್ತೆ ಆರಂಭಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಶೀಘ್ರವೇ ಸಿಎಂ ಜೊತೆ ಮಾತನಾಡಿ ಪಶುಭಾಗ್ಯ ಯೋಜನೆ ಮರು ಜಾರಿಗೊಳಿಸುವುದಾಗಿ ಸಚಿವ ವೆಂಕಟೇಶ್ ಸ್ಪಷ್ಟಪಡಿಸಿದ್ದಾರೆ