Share this news

ಅಲಹಾಬಾದ್‌: ಹಾಸ್ಟೆಲ್‌ ಕೊಠಡಿಯೊಳಗೆ ಕುಳಿತುಕೊಂಡು ವಿದ್ಯಾರ್ಥಿಯೊಬ್ಬ ಬಾಂಬ್ ಸಿದ್ಧಪಡಿಸುವ ಕೆಲಸ ಮಾಡುತ್ತಿದ್ದಾಗಲೇ ಬಾಂಬ್ ಸ್ಫೋಟಗೊಂಡು ಆತ ಗಂಭೀರವಾಗಿ ಗಾಯಗೊಂಡ ಆಘಾತಾಕಾರಿ ಘಟನೆ ಉತ್ತರಪ್ರದೇಶದ ಅಲಹಾಬಾದ್‌ನಲ್ಲಿ ನಡೆದಿದೆ. ಹಾಸ್ಟೆಲ್‌ನಲ್ಲಿ ಬಾಂಬ್ ತಯಾರಿಸುತ್ತಿದ್ದ ವಿದ್ಯಾರ್ಥಿಯನ್ನು ಪ್ರಭಾತ್ ಯಾದವ್ ಎಂದು ಗುರುತಿಸಲಾಗಿದೆ. ಈತ ಅಲಾಹಾಬಾದ್‌ ವಿಶ್ವವಿದ್ಯಾಲಯದ ಎಂಎ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಈತ ಪಿಸಿ ಬ್ಯಾನರ್ಜಿ ಹಾಸ್ಟೆಲ್‌ನಲ್ಲಿ ವಾಸವಿದ್ದು, ಹಾಸ್ಟೆಲ್‌ನ ಕೊಠಡಿಯಲ್ಲಿ ರಹಸ್ಯವಾಗಿ ಬಾಂಬ್ ಸಿದ್ಧಪಡಿಸುತ್ತಿದ್ದ ಎಂದು ತಿಳಿದು ಬಂದಿದೆ. ಆದರೆ ಆತನ ದುರಾದೃಷ್ಟಕ್ಕೆ ಸ್ಫೋಟಗೊಂಡಿದೆ. ಬುಧವಾರ ಸಂಜೆ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಎಂಎ ವಿದ್ಯಾರ್ಥಿಯೋರ್ವ ಈ ರೀತಿ ಬಾಂಬ್ ಏಕೆ ಸಿದ್ಧಪಡಿಸುತ್ತಿದ್ದ ಎಂಬ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ ಎಂದು ಪೊಲೀಸರು ಹೇಳಿದ್ದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಬಾಂಬ್ ಆತನ ಕೈಯಲ್ಲೇ ಸ್ಫೋಟಗೊಂಡ ಪರಿಣಾಮ ಆತನ ಬಲಗೈ ಸಂಪೂರ್ಣ ಛಿದ್ರಗೊಂಡಿದೆ ಎಂದು ಅಲಹಾಬಾದ್ ಸಹಾಯಕ ಪೊಲೀಸ್ ಕಮೀಷನರ್ ರಾಜೇಶ್ ಕುಮಾರ್ ಯಾದವ್ ಹೇಳಿದ್ದಾರೆ. ಪ್ರಭಾತ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು,ಇದು ಗಂಭೀರ ಪ್ರಕರಣವಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಎಸಿಪಿ ಹೇಳಿದ್ದಾರೆ.

Leave a Reply

Your email address will not be published. Required fields are marked *