ಕಾರ್ಕಳ: ಮರಾಠ ಸಾಮ್ರಾಜ್ಯದ ಆಡಳಿತಾವಧಿಯಲ್ಲಿ ನಿರ್ಮಾಣಗೊಂಡ ಹಿರಿಯಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಫೆ.19 ರಂದು ಮರಾಠ ಸಮಾಜ ಬಂದುಗಳು ಶಿವಾಜಿ ಜಯಂತಿ ಆಚರಿಸಿದರು.
ದೇವಳದ ಆಡಳಿತ ಮೋಕ್ತಸರ ಕ್ಷತ್ರಿಯ ಮರಾಠ ಸಮಾಜದ ಜಿಲ್ಲಾಧ್ಯಕ್ಷ ಗಿರೀಶ್ ರಾವ್ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ದೀಪ ಬೆಳಗಿಸಿದರು .
ಕಾರ್ಕಳ ತಾಲೂಕು ಕ್ಷತ್ರಿಯ ಮರಾಠ ಸಮಾಜದ ಅಧ್ಯಕ್ಷ ಶುಭದ ರಾವ್ ಪುಷ್ಪ ನಮನವನ್ನು ನೆರವೇರಿಸಿದರು .
ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿ ಸದಸ್ಯರು ಸಮಾಜದ ಪದಾಧಿಕಾರಿಗಳು ಸಮಾಜ ಬಂದುಗಳು ಉಪಸ್ಥಿತರಿದ್ದರು .