ಕಾರ್ಕಳ: ಚಲಿಸುತ್ತಿದ್ದ ಸ್ಕೂಟರಿಗೆ ಕಾಡುಪ್ರಾಣಿ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮದ ಹುಣ್ಸೆಕಟ್ಟೆ ನಿವಾಸಿ ಸದಾನಂದ ಶೆಟ್ಟಿ(45) ಎಂಬವರು ಮೃತಪಟ್ಟ ದುರ್ದೈವಿ.
ಸದಾನಂದ ಶೆಟ್ಟಿಯವರು ಮೇ 26ರಂದು ಶುಕ್ರವಾರ ಸಂಜೆ ತನ್ನ ಸಂಬAಧಿಕರ ಮನೆಯಾದ ಶಿರ್ಲಾಲಿಗೆ ಪುತ್ರ ಸ್ಪರ್ಷ್(13) ಜತೆ ಸ್ಕೂಟರಿನಲ್ಲಿ ಹೋಗಿ,ರಾತ್ರಿ ಕಾರ್ಯಕ್ರಮ ಮುಗಿಸಿ ವಾಪಾಸು ತನ್ನ ಮನೆಯಾದ ಕಲ್ಯಾಗೆ ಹೋಗುತ್ತಿದ್ದಾಗ ರಾತ್ರಿ 10.30ರ ವೇಳೆಗೆ ಹಿರ್ಗಾನದ ಬಿ.ಎಂ ಶಾಲೆಯ ಬಳಿ ತಲುಪಿದಾಗ ಏಕಾಎಕಿ ಕಾಡುಪ್ರಾಣಿ ರಸ್ತೆ ದಾಟಿದಾಗ ಸದಾನಂದ ಶಟ್ಟಿ ಚಲಾಯಿಸುತ್ತಿದ್ದ ಸ್ಕೂಟರಿಗೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಸವಾರ ಸದಾನಂದ ಶೆಟ್ಟಿ ಹಾಗೂ ಸ್ಪರ್ಶ್ ಸ್ಕೂಟರಿನಿಂದ ರಸ್ತೆಗೆ ಬಿದ್ದ ಪರಿಣಾಮ ಸದಾನಂದ ಶೆಟ್ಟಿಯವರ ತಲೆಗೆ ಗಂಭೀರ ಗಾಯಗಳಾಗಿ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು ಬಳಿಕ ಅಲ್ಲಿಂದ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಶನಿವಾರ ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ಸ್ಪರ್ಶ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.