ಹೆಬ್ರಿ: ಪಾಂಡುರಂಗ ರಮಣ ನಾಯಕ್ ಅಮೃತಭಾರತಿ ವಿದ್ಯಾಲಯದಲ್ಲಿ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು.
ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ಮೇಲ್ವಿಚಾರಕ ಮಾಜಿ ಯೋಧ ರಾಘವೇಂದ್ರ ಮಾತನಾಡಿ, ಹಿಂದಿ ಭಾಷೆಯು ದೇಶಾದ್ಯಂತ ವ್ಯಾಪಕವಾಗಿ ಬಳಸುವ ಭಾಷೆಯಾಗಿದೆ. ನಾವು ನಮ್ಮ ಪ್ರಾಂತ್ಯದಿಂದ ಹೊರಗೆ ಹೋದಾಗ ಭಾಷೆಯ ಮಹತ್ವವನ್ನು ತಿಳಿಯಬಹುದು. ಆದ್ದರಿಂದ ನಾವು ಅವಕಾಶ ಸಿಕ್ಕಾಗ ಭಾಷೆಯನ್ನು ಕಲಿಯುವ ಪ್ರಯತ್ನ ಮಾಡಬೇಕು.ಇಲ್ಲವಾದರೆ ಬೇರೆಯವರನ್ನು ಅನುಸರಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದರು.
ವಿದ್ಯಾಲಯದ ಮುಖ್ಯಸ್ಥರಾದ ಅಪರ್ಣಾ ಆಚಾರ್, ಶಕುಂತಲಾ ಹಾಗೂ ಗುರೂಜಿ , ಮಾತಾಜಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹಿಂದಿ ಶಿಕ್ಷಕಿ ಪ್ರೇಮಲತಾ ಹಿಂದಿ ಪದ್ಯ ವಾಚಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮವನ್ನು ಶಕುಂತಲಾ ಮಾತಾಜಿ ಸ್ವಾಗತಿಸಿ, ಮೀನಾಕ್ಷಿ ಮಾತಾಜಿ ವಂದಿಸಿ, ವಿದ್ಯಾರ್ಥಿನಿ ಅನುಷಾ ನಾಯಕ್ ನಿರೂಪಿಸಿದರು.