ಹೆಬ್ರಿ: ಪಾಂಡುರಂಗ ರಮಣ ನಾಯಕ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಅಮೃತಭಾರತಿ ಮಾತೃ ಮಂಡಳಿಯಿಂದ ಶ್ರೀವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ ಅನ್ನಪೂರ್ಣ ಸಭಾಂಗಣದಲ್ಲಿ ನಡೆಯಿತು.
ಸಂಸ್ಥೆಯ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಪೂಜೆ ನೆರವೇರಿಸಿ, ಮಹಾಲಕ್ಷ್ಮಿಯು ಭಕ್ತಿಯಿಂದ ಆರಾಧಿಸುವವರಿಗೆ ಇಷ್ಟಾರ್ಥ ಸಿದ್ಧಿಯನ್ನು, ಜ್ಞಾನ, ಸಂಪತ್ತು, ಐಶ್ವರ್ಯವನ್ನು ಕರುಣಿಸುವ ತಾಯಿಯಾಗಿದ್ದಾಳೆ. ಶ್ರಾವಣಮಾಸದ ನಿಯಾಮಕನಾದ ಮಹಾವಿಷ್ಣುವಿನ ಪ್ರೀತಿಪಾತ್ರಳಾದ್ದರಿಂದ ವಿಶೇಷ ಆರಾಧನೆಯನ್ನು ಶುಕ್ರವಾರ ಮಾಡುವುದರಿಂದ ಜೀವನದಲ್ಲಿ ಅನ್ಯೋನ್ಯತೆ ಮತ್ತು ಸೌಭಾಗ್ಯವನ್ನು ಕರುಣಿಸುವ ದೇವತೆಯಾಗಿದ್ದಾಳೆ ಎಂದು ಪೂಜೆಯ ಮಹತ್ವವನ್ನು ತಿಳಿಸಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತೃ ಮಂಡಳಿಯ ಅಧ್ಯಕ್ಷೆ ವೀಣಾ ಭಟ್ ವರಂಗ, ಕೋಶಾಧಿಕಾರಿ ಛಾಯಾ ಸೋಮಯಾಜಿ, ಕಾರ್ಯದರ್ಶಿ ಸುಪ್ರೀತಾ ಶೆಟ್ಟಿ, ಮಾತೃಮಂಡಳಿ ಸದಸ್ಯರು
ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಸಿ ಎ.ಎಂ ರವಿರಾವ್ , ಕಾರ್ಯದರ್ಶಿ ಗುರುದಾಸ್ ಶೆಣೈ, ವಿಷ್ಣುಮೂರ್ತಿ ನಾಯಕ್, ಸಂಸ್ಥೆಯ ಮುಖ್ಯಸ್ಥೆಯರಾದ ಅಪರ್ಣಾ ಆಚಾರ್, ಶಕುಂತಲಾ,ಅನಿತಾ ಹಾಗೂ ಸಂಸ್ಥೆಯ ಗುರೂಜಿ, ಮಾತಾಜಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.