Share this news

ಹೆಬ್ರಿ : ಹೆಬ್ರಿ ಆರಕ್ಷಕ ಠಾಣೆಯಲ್ಲಿ ಅಮೃತ ಭಾರತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆ ಹಾಗೂ ಕಾನೂನಿನ ಕುರಿತು ಮಾಹಿತಿ ‌ನೀಡುವ ತೆರೆದ ಮನೆ ಕಾರ್ಯಕ್ರಮ ಇಂದು (ಸೆ.7) ಜರುಗಿತು.

ಪೊಲೀಸ್ ಇಲಾಖೆಯ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ರಾಮ ಪ್ರಭು ಮಾತನಾಡಿ, ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಸಮಗ್ರ ಮಾಹಿತಿ ಮತ್ತು ಕರ್ತವ್ಯಗಳ ಬಗ್ಗೆ ಸವಿವರವಾಗಿ ತಿಳಿಸಿ, ಪೊಲೀಸ್ ಇಲಾಖೆಯು ಸಮಾಜದ ಸ್ವಾಸ್ಥ್ಯ ಮತ್ತು ಕಾನೂನು ವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಗಲಿರುಳು ದುಡಿಯುತ್ತಿದೆ ಎಂದರು.

ಪೋಕ್ಸೋ ಕಾಯಿದೆಯ ಕುರಿತು ಮಾಹಿತಿ ನೀಡಿ, ಪೊಲೀಸ್ ಇಲಾಖೆ ಬಳಸುವ ಆಯುಧಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿ, ವಿವಿಧ ಇಲಾಖೆಗಳ ಅಧಿಕಾರಿಗಳ ಕರ್ತವ್ಯವನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಕಾನ್ಸ್ಟೇಬಲ್ ಯಮನೂರ ವಾಲಿಕಾರ, ರಾಜೇಶ್ ಹಾಗೂ ವಿದ್ಯಾಲಯದ ಬೋಧಕೇತರ ವರ್ಗದ ಮಹೇಶ್.ಟಿ, ರಮೇಶ್, ವಿದ್ಯಾಲಯದ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ, ಉಪಮುಖ್ಯೋಪಾಧ್ಯಾಯ ಮಹೇಶ್ ಹೈಕಾಡಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *