
ಬೆಳಗಾವಿ,ಡಿ.11: ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯಲ್ಲಿ ಶೇ.3 ಹಾಗೂ ವಿವಿಧ ಇಲಾಖೆಗಳಲ್ಲಿ ಶೇ. 2 ರಷ್ಟು ಮೀಸಲಾತಿಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜಾ ರವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.
ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗಗಳು ಕೊಡಬೇಕು. ಈವರೆಗೂ 13 ಜನಕ್ಕೆ ಮಾತ್ರ ಹುದ್ದೆ ನೀಡಲಾಗಿದೆ. ನೇರ ನೇಮಕಾತಿಯಲ್ಲಿ 3% ಹುದ್ದೆ ಕ್ರೀಡಾಪಟುಗಳಿಗೆ ಮೀಸಲಿಡಬೇಕು. ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಪ್ರೋತ್ಸಾಹ ಕೊಡಲು ಒಂದು ಪಾಲಿಸಿ ತರಬೇಕು. ಕಬಡ್ಡಿಗೂ ಪ್ರೋತ್ಸಾಹ ಕೊಡಬೇಕು ಮನವಿ ಮಾಡಿದರು.
ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರ ನೀಡಿ, ಈವರೆಗೂ 13 ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗ ಕೊಡಲಾಗಿದೆ. ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಏಷ್ಯನ್ ಗೇಮ್ಸ್ ಗೆದ್ದವರಿಗೆ ಹುದ್ದೆ ಕೊಡುತ್ತೇವೆ. ಪೊಲೀಸ್ ಇಲಾಖೆಯಲ್ಲಿ, ಅರಣ್ಯ ಇಲಾಖೆಯಲ್ಲಿ 3% ಮೀಸಲಾತಿ ಮಾಡಿದ್ದೇವೆ. ಉಳಿದ ಇಲಾಖೆಯಲ್ಲಿ 2% ಮೀಸಲಾತಿ ನೀಡಲು ನಿರ್ಧಾರ ಮಾಡಿದ್ದೇವೆ. ಆದಷ್ಟು ಬೇಗ ಆದೇಶ ಮಾಡುತ್ತೇವೆ .ಕಬಡ್ಡಿಗೂ ಪ್ರೋತ್ಸಾಹ ನೀಡಲು ಪರಿಶೀಲನೆ ನಡೆಸುತ್ತೇವೆ ಎಂದರು.
.
.
