Month: January 2024

ಕಾರ್ಕಳದಲ್ಲಿ ಬಡಗಬೆಟ್ಟು ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿಯ 11 ನೇ ಶಾಖೆ ಉದ್ಘಾಟನೆ: ಪರಸ್ಪರ ಕೂಡಿಬಾಳುವ ಮನೋಭಾವನೆಯೇ ಸಹಕಾರದ ಪ್ರಮುಖ ತತ್ವ: ಮೂಡಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಠಾರಕ ಮಹಾಸ್ವಾಮೀಜಿ

ಕಾರ್ಕಳ: ಸಂಘಟನೆಯಿದ್ದರೆ ಸಹಕಾರ, ವಿಫಟನೆಯಾದರೆ ಅಶಾಂತಿ, ಆದ್ದರಿಂದ ಸಮಾಜದಲ್ಲಿ ಒಬ್ಬರಿಗೊಬ್ಬರು ಪರಸ್ಪರ ಶಾಂತಿ ಸೌಹಾರ್ದತೆಯಿಂದ ಬಾಳುವುದೇ ಸಹಕಾರದ ಪ್ರಮುಖ ತತ್ವವಾಗಿದೆ ಎಂದು ಮೂಡಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಠಾರಕ ಪಟ್ಟಾಚಾರ್ಯ ಸ್ವಾಮಿಗಳು ಹೇಳಿದರು. ಅವರು ಕಾರ್ಕಳದ ವಿಕಾಸ ಟವರ್ ವಾಣಿಜ್ಯ ಸಂಕೀರ್ಣದಲ್ಲಿ…

ನಿಟ್ಟೆ ಮಾವಿನಕಟ್ಟೆ ಬಳಿ ಭೀಕರ ಅಪಘಾತ: ಅತ್ತೂರು ಸಾಂತ್‌ಮಾರಿಗೆ ತೆರಳುತ್ತಿದ್ದಾಗ ದುರ್ಘಟನೆ: ಕಾರುಗಳು ಮುಖಾಮುಖಿ ಡಿಕ್ಕಿಯಾಗಿ ಮಹಿಳೆ ದಾರುಣ ಸಾವು

ಕಾರ್ಕಳ: ಕಾರ್ಕಳದ ಅತ್ತೂರು ಸಾಂತ್‌ಮಾರಿಗೆAದು ತೆರಳುತ್ತಿದ್ದ ವೇಳೆ ಕಾರುಗಳೆರಡರ ಮಧ್ಯ ಮುಖಾಮುಖಿ ಡಿಕ್ಕಿ ಸಂಭಾವಿಸಿ ಮಹಿಳೆಯೊಬ್ಬರು ದಾರುಣವಾಗಿ ಮೃತಪಟ್ಟ ಘಟನೆ ನಿಟ್ಟೆ ಸಮೀಪದ ನಂದಳಿಕೆ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಮರಿಯಾ ಫೆರ್ನಾಡಿಸ್ (53ವ) ಎಂಬವರು ಮೃತಪಟ್ಟ ಮಹಿಳೆ.…

ಉಡುಪಿ: 75ನೇ ವರ್ಷದ ಗಣರಾಜ್ಯೋತ್ಸವ: ಧ್ವಜಾರೋಹಣ ನೆರವೇರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ:75ನೇ ಗಣರಾಜ್ಯೋತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಆರ್ ಹೆಬ್ಬಾಳ್ಕರ್ ಅವರ ಸಂದೇಶ ಉಡುಪಿ ಜಿಲ್ಲಾಡಳಿತ ವತಿಯಿಂದ ಅಜ್ಜರಕಾಡಿನ ಮಹಾತ್ಮ ಗಾಂಧಿ ಜಿಲ್ಲಾ…

ಗುಲ್ವಾಡಿ ಶ್ರೀ ವೀರಾಂಜನೇಯ ಭಜನಾ ಮಂಡಳಿ ವಾರ್ಷಿಕೋತ್ಸವ: ಶ್ರೀ ರಾಮೋತ್ಸವ ಮತ್ತು ಅಖಂಡ ಭಜನಾ ಕಾರ್ಯಕ್ರಮ

ಬೈಂದೂರು: ಅಯೋಧ್ಯೆ ಶ್ರೀ ರಾಮ ಮಂದಿರ ಪ್ರತಿಷ್ಠಾಪನೆ ಪುಣ್ಯದಿನದಂದು ಗುಲ್ವಾಡಿ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಶ್ರೀ ವೀರಾಂಜನೇಯ ಭಜನಾ ಮಂಡಳಿಯ ವಾರ್ಷಿಕೋತ್ಸವ ಕಾರ್ಯಕ್ರಮ ಶ್ರೀ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಶ್ರೀ ರಾಮೋತ್ಸವ ಮತ್ತು 24 ಗಂಟೆಗಳ ಅಖಂಡ ಭಜನಾ ಕಾರ್ಯಕ್ರಮ…

ಉಡುಪಿ:ವಿದ್ಯಾಭಾರತಿ ವತಿಯಿಂದ ನಿತ್ಯ ಸರಳ ಯೋಗ ಕಾರ್ಯಾಗಾರ

ಉಡುಪಿ: ವಿದ್ಯಾಭಾರತಿ, ಸಂವಿತ್ ಯೋಗ ರಿಸರ್ಚ್ ಫೌಂಡೇಶನ್ ಬೆಂಗಳೂರು ಇವುಗಳ ಜಂಟೀ ಆಶ್ರಯದಲ್ಲಿ ಸರಸ್ವತಿ ವಿದ್ಯಾಲಯ ಸಿದ್ದಾಪುರ ಸಹಯೋಗದಲ್ಲಿ ಸರಸ್ವತಿ ಮಾತೃಭಾರತಿ ಸಿದ್ಧಾಪುರ ಇದರ ಮಾತೆಯರಿಗಾಗಿ ಆಯೋಜಿಸಿದ ನಿತ್ಯ ಸರಳ ಯೋಗ ಶಿಬಿರವನ್ನು ಸಿದ್ದಾಪುರದ ಸರಸ್ವತಿ ಮಾತೃ ಭಾರತಿಯ ಸಂಯೋಜಕಿ ಮಲ್ಲಿಕಾ…

ಫೆ.3 ರಂದು ಮುಂಬಯಿ ಶ್ರೀ ನಿತ್ಯಾನಂದ ಸೇವಾ ಸಂಸ್ಥಾ ರಿ. ಮೀರಾ- ಭಾಯಂಧರ್ ವತಿಯಿಂದ “ನಮ್ಮಯ ನಡಿಗೆ ಸ್ವಾಮಿಯ ನೆಡೆಗೆ” ಪಾದಯಾತ್ರೆ

ಮುಂಬಯಿ: ಶ್ರೀ ನಿತ್ಯಾನಂದ ಸೇವಾ ಸಂಘ ರಿ. ಮೀರಾ- ಭಾಯಂಧರ್ ಇದರ ವಾರ್ಷಿಕ ದಿನಾಚರಣೆಯ ಅಂಗವಾಗಿ ಫೆಬ್ರವರಿ 3 ರಂದು ಶ್ರೀ ಕ್ಷೇತ್ರ ಗಣೇಶ್ ಪುರಿಗೆ “ನಮ್ಮಯ ನಡಿಗೆ ಸ್ವಾಮಿಯ ನೆಡೆಗೆ” 15ನೇ ವರ್ಷದ ಪಾದಯಾತ್ರೆ ನಡೆಯಲಿದೆ. ಫೆ. 3 ಶನಿವಾರ…

ಹೆಬ್ರಿ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಮಾತೃವಂದನಾ ಕಾರ್ಯಕ್ರಮ: ತಂದೆತಾಯಿ ಋಣ ಮಕ್ಕಳಿಂದ ತೀರಿಸಲು ಸಾಧ್ಯವಿಲ್ಲ: ದಾಮೋದರ ಶರ್ಮಾ

ಹೆಬ್ರಿ: ತಂದೆತಾಯಿ ಕಣ್ಣಿಗೆ ಕಾಣುವ ದೇವರು ಎನ್ನುವುದು ಸಾರ್ವಕಾಲಿಕ ಸತ್ಯ,ಮಗುವನ್ನು ಹೆತ್ತುಹೊತ್ತು ಅದನ್ನು ಸಮಾಜದ ಉತ್ತಮ ನಾಗರಿಕನಾಗಿ ರೂಪಿಸುವ ನಿಟ್ಟಿನಲ್ಲಿ ಪೋಷಕರು ತ್ಯಾಗ ಅನನ್ಯವಾಗಿದೆ,ಆದ್ದರಿಂದ ಮಕ್ಕಳಿಂದ ತಂದೆತಾಯಿ ಋಣ ತೀರಿಸಲು ಸಾಧ್ಯವಿಲ್ಲ, ಜೀವನದಲ್ಲಿ ಹೆತ್ತವರಿಗೆ ನೋವು ನೀಡದೇ ಅವರ ಸೇವೆ ಮಾಡುವುದೇ…

ಜ. 31ರೊಳಗೆ ಜಾತಿ ಸಮೀಕ್ಷೆ ವರದಿ ಸರ್ಕಾರಕ್ಕೆ ಸಲ್ಲಿಕೆ: ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಜನವರಿ 31ರೊಳಗೆ ಜಾತಿ ಸಮೀಕ್ಷೆ ವರದಿಯನ್ನು ಸಿದ್ದರಾಮಯ್ಯ ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಗುರುವಾರ ತಿಳಿಸಿದ್ದಾರೆ. ವರದಿ ಬಹುತೇಕ ಸಿದ್ಧವಾಗಿದ್ದು, ಅಂತಿಮ ಹಂತದಲ್ಲಿದೆ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:26.01.2024, ಶುಕ್ರವಾರ, ಸಂವತ್ಸರ:ಶೋಭಕೃತ್, ಉತ್ತರಾಯಣ, ಹೇಮಂತ ಋತು,ಮಕರ ಮಾಸ, ಕೃಷ್ಣ ಪಕ್ಷ,ನಕ್ಷತ್ರ: ಪುಷ್ಯ, ರಾಹುಕಾಲ-11:18 ರಿಂದ 12:44 ಗುಳಿಕಕಾಲ-08:26 ರಿಂದ 09:52 ಸೂರ್ಯೋದಯ (ಉಡುಪಿ) 07:00 ಸೂರ್ಯಾಸ್ತ – 06:28 ರಾಶಿ ಭವಿಷ್ಯ: ಮೇಷ ರಾಶಿ: ಎರವಲು…

ಅಜೆಕಾರು: ಬಾಡಿಗೆ ವಿಚಾರದಲ್ಲಿ ರಿಕ್ಷಾ ಚಾಲಕರ ನಡುವೆ ಹೊಡೆದಾಟ: ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

ಕಾರ್ಕಳ: ಬಾಡಿಗೆ ವಿಚಾರದಲ್ಲಿ ರಿಕ್ಷಾ ಚಾಲಕರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಇಬ್ಬರು ಹೊಡೆದಾಡಿಕೊಂಡ ಘಟನೆ ಅಜೆಕಾರು ರಿಕ್ಷಾ ನಿಲ್ದಾಣದಲ್ಲಿ ಬುಧವಾರ ಸಂಜೆ ನಡೆದಿದೆ. ರಿಕ್ಷಾ ಚಾಲಕ ಪವಿತ್ರ ಕುಮಾರ್ ಜೈನ್ ಎಂಬವರು ತನ್ನ ರಿಕ್ಷಾದಲ್ಲಿ ಅಜೆಕಾರಿನಿಂದ ಗುಡ್ಡೆಯಂಗಡಿಗೆ ಬಾಡಿಗೆ ಮಾಡಿಕೊಂಡು…