Month: March 2024

ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಗೆ ಹೈಕೋರ್ಟ್ ಅನುಮತಿ: ಅನುಮತಿ ನಿರಾಕರಿಸಿದ ತ.ನಾಡು ಸರ್ಕಾರಕ್ಕೆ ಮುಖಭಂಗ!

ಕೊಯಂಬತ್ತೂರು: ದೇಶದ ಪ್ರಧಾನಿಯ ರೋಡ್ ಶೋಗೆ ಸೂಕ್ಷ್ಮ ಪ್ರದೇಶ ಅನ್ನೋ ಕಾರಣ ನೀಡಿ ಅನುಮತಿ ನಿರಾಕರಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿತ್ತು. ಮಾರ್ಚ್ 18 ರಂದು ಕೊಯಂಬತ್ತೂರಿನಲ್ಲಿ ಪ್ರಧಾನಿ ಮೋದಿಯ 4 ಕಿಲೋಮೀಟರ್ ರೋಡ್ ಶೋ ಆಯೋಜಿಸಲು ಎಲ್ಲಾ ಸಿದ್ಧತೆ ಮಾಡಲಾಗಿತ್ತು. ಆದರೆ…

ಕಾರ್ಕಳ: ಸ್ಕೂಟರ್ ಕಾರು ಡಿಕ್ಕಿ: ಸವಾರನಿಗೆ ಗಾಯ

ಕಾರ್ಕಳ: ಸ್ಕೂಟರ್ ಹಾಗೂ ಕಾರಿನ ನಡುವೆ ಡಿಕ್ಕಿಯಾಗಿ ಸ್ಕೂಟರ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಗುರುವಾರ ಬೆಳಗ್ಗೆ ಸಂಭವಿಸಿದೆ. ಕಾರ್ಕಳದ ಜೋಡುಕಟ್ಟೆ ಬಳಿಯ ಪವರ್ ಪಾಯಿಂಟ್ ಬಳಿ ಈ ದುರ್ಘಟನೆ ಸಂಭವಿಸಿದ್ದು ಸ್ಕೂಟರ್ ಸವಾರ ಸತೀಶ್(46) ಎಂಬವರು ಗಾಯಗೊಂಡಿದ್ದಾರೆ. ಸ್ಕೂಟರ್ ಸವಾರ…

ನಾಳೆ (ಮಾ.16ರಂದು) ಅಜೆಕಾರಿನಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ

ಕಾರ್ಕಳ: ರಾಮ ಮಂದಿರ ಟ್ರಸ್ಟ್ ಅಜೆಕಾರು, ಲಯನ್ಸ್ ಕ್ಲಬ್ ಅಜೆಕಾರು, ಕರುಣಾಳು ಬಾ ಬೆಳಕೆ ಪ್ರತಿಷ್ಠಾನ, ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ದೇರಳಕಟ್ಟೆ ಹಾಗೂ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆಧಾರ್ ನೋಂದಣಿ…

ಫಾಸ್ಟ್ ಫುಡ್, ಕಬಾಬ್ ತಯಾರಿಕೆಗೆ ಕಲರ್ ಬಳಸಿದ್ರೆ ಜೈಲು ಶಿಕ್ಷೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಚ್ಚರಿಕೆ

ಬೆಂಗಳೂರು: ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಫಾಸ್ಟ್ ಫುಡ್ ಗಳಲ್ಲಿ ಬಳಕೆಯಾಗುತ್ತಿರುವ ಗೋಬಿ ಮಂಚೂರಿಯಲ್ಲಿ ಬಳಸುತ್ತಿರುವ ಕ್ಯಾನ್ಸರ್ ಕಾರಕ ರಾಸಾಯನಿಕ ಬಣ್ಣವನ್ನು ನಿಷೇಧಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವ ಬೆನ್ನಲ್ಲೇ ಇದೀಗ ಕಬಾಬ್ ಹಾಗೂ ಇತರೇ ಫಾಸ್ಟ್ ಫೂಡ್ ಗಳಲ್ಲಿ…

ನಾಳೆ ಕೇಂದ್ರ ಚುನಾವಣಾ ಆಯೋಗದಿಂದ ಮಹತ್ವದ ಸುದ್ದಿಗೋಷ್ಟಿ: ನಾಳೆಯೇ ಚುನಾವಣೆ ದಿನಾಂಕ ಪ್ರಕಟ

ನವದೆಹಲಿ: ಲೋಕಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ಆರಂಭಿಸಿದ್ದು, ಈ ನಡುವೆ ಕೇಂದ್ರ ಚುನಾವಣಾ ಆಯೋಗವು ನಾಳೆ ಮಾ.16ರಂದು ಸಂಜೆ 3 ಗಂಟೆಗೆ ಮಹತ್ವದ ಸುದ್ಧಿಗೋಷ್ಟಿ ಕರೆದಿದ್ದು ನಾಳೆಯೇ ಚುನಾವಣಾ ದಿನಾಂಕ ಘೋಷಣೆಯಾಗಲಿದೆ. ಕೇಂದ್ರ ಚುನಾವಣಾ ಆಯೋಗದ ಜಂಟೀ…

ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ವಿರುದ್ಧ ಲೈಂಗಿಕ ಕಿರುಕುಳ ಆರೋಪದಡಿ ಪೋಕ್ಸೋ ಕೇಸ್ ದಾಖಲು! ಬಿಎಸ್‌ವೈ ವಶಕ್ಕೆ ಪಡೆದು ವಿಚಾರಣೆ ಸಾಧ್ಯತೆ

ಬೆಂಗಳೂರು: ತನ್ನ ಅಪ್ರಾಪ್ತ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಹಿಳೆಯೊಬ್ಬಳು ಮಾಜಿ ಸಿಎಂ ಬಿಜೆಪಿ ಹಿರಿಯ ನಾಯಕ ಬಿ.ಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿದ್ದಾಳೆ. ಶಿವಮೊಗ್ಗ ಮೂಲದ ಮಹಿಳೆ ಈ ಕುರಿತು ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ಈ…

ದ್ವಾದಶ ರಾಶಿಗಳ ನಿಮ್ಮ ಇಂದಿನ ದಿನ ಭವಿಷ್ಯ

ನಿತ್ಯ ಪಂಚಾಂಗ : ದಿನಾಂಕ:15.03.2024,ಶುಕ್ರವಾರ, ಸಂವತ್ಸರ:ಶೋಭಕೃತ್, ಉತ್ತರಾಯಣ, ಶಿಶಿರ ಋತು,ಮೀನ ಮಾಸ, ಶುಕ್ಲ ಪಕ್ಷ,ನಕ್ಷತ್ರ:ಕೃತ್ತಿಕಾ, ರಾಹುಕಾಲ- 11:10 ರಿಂದ 12:40 ಗುಳಿಕಕಾಲ-08:10 ರಿಂದ 09:40 ಸೂರ್ಯೋದಯ (ಉಡುಪಿ) 06:40 ಸೂರ್ಯಾಸ್ತ – 06:39 ರಾಶಿ ಭವಿಷ್ಯ: ಮೇಷ ರಾಶಿ: ಇಂದು ನೀವು…

ರಾಜ್ಯ ಸರ್ಕಾರಗಳು ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನ ನಿರಾಕರಿಸುವಂತಿಲ್ಲ: ಕೇರಳ, ತ.ನಾಡು, ಪ.ಬಂಗಾಳ ಸಿಎಂ ವಿರುದ್ಧ ಅಮಿತ್ ಶಾ ವಾಗ್ದಾಳಿ

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ(CAA)ಅನುಷ್ಠಾನವನ್ನು ಯಾವುದೇ ರಾಜ್ಯ ಸರ್ಕಾರಗಳು ವಿರೋಧಿಸುವಂತಿಲ್ಲ,ಇದನ್ನು ಜಾರಿಗೊಳಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಎಂದು ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸುವುದಿಲ್ಲ ಎಂದು ಕೇರಳ, ಪಶ್ಚಿಮ ಬಂಗಾಳ ಹಾಗೂ…

ಮಾ.17 ರಂದು ಜೋಡುರಸ್ತೆಯಲ್ಲಿ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರಿ ಸಂಘದ ನವೀಕೃತ ಪ್ರಧಾನ ಕಚೇರಿ ಹಾಗೂ ಸಭಾಂಗಣ ಉದ್ಘಾಟನೆ

ಕಾರ್ಕಳ: ಕಾರ್ಕಳ ತಾಲೂಕಿನ ಜೋಡುರಸ್ತೆಯಲ್ಲಿನ ಶ್ರೀ ದುರ್ಗಾಪರಮೇಶ್ವರಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ನವೀಕೃತ ಪ್ರಧಾನ ಕಚೇರಿ ಮತ್ತು ಸಭಾಂಗಣದ ಉದ್ಘಾಟನೆಯು ಮಾ.17ರಂದು ಭಾನುವಾರ ಬೆಳಗ್ಗೆ 10.30ಕ್ಕೆ ನಡೆಯಲಿದೆ. ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾ‌ರ್ ಪ್ರಧಾನ…

ರಾಜ್ಯಸಭಾ ಸದಸ್ಯೆ ಸುಧಾ ಮೂರ್ತಿ ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಲೇಖಕಿ, ಸಮಾಜ ಸೇವಕಿ, ಇನ್ಫೋಸಿಸ್ ಮಾಜಿ ಅಧ್ಯಕ್ಷೆ ಸುಧಾಮೂರ್ತಿ ಗುರುವಾರ ದೆಹಲಿಯಲ್ಲಿ ಸಂಸತ್ತಿನ ಮೇಲ್ಮನೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮೂಲತಃ ಇಂಜಿನಿಯರ್ ಆಗಿರುವ ಸುಧಾಮೂರ್ತಿ ಅವರು ತಮ್ಮ ಪತಿ ಎನ್…