Month: April 2024

ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರಿಶೀಲನೆಗೆ ಆದೇಶಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ಪತಂಜಲಿ ಆಯುರ್ವೇದದ ಜಾಹೀರಾತುಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಫಲವಾದ ಉತ್ತರಾಖಂಡದ ಔಷದ ಪರವಾನಗಿ ಮತ್ತು ನಿಯಂತ್ರಣ ಪ್ರಾಧಿಕಾರವನ್ನು ಸುಪ್ರೀಕೋರ್ಟ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ರಾಜ್ಯದಲ್ಲಿ ಎಲ್ಲ ಪತಂಜಲಿ…

ನಲ್ಲೂರು: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಕಾರ್ಕಳ:ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ನಲ್ಲೂರಿನಲ್ಲಿ ಸಂಭವಿಸಿದೆ. ನಲ್ಲೂರು ಗ್ರಾಮದ ಪ್ರವೀಣ್ ಶಂಕರ್ (54) ಎಂಬವರು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತ ಪ್ರವೀಣ್ ಶಂಕರ್ ಮುಡಾರಿನಲ್ಲಿರುವ ಶ್ರೀ ದೇವಿ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ರೈಟರ್…

ಕಾರ್ಕಳ:ವಿಪರೀತ ಸಾಲಬಾಧೆ: ಪತ್ನಿ ಮಕ್ಕಳಿಗೆ ವಿಷ ನೀಡಿ ಆತ್ಮಹತ್ಯೆಗೆ ಯತ್ನಿಸಿದ ಪತಿ!

ಕಾರ್ಕಳ:ವಿಪರೀತ ಸಾಲಬಾಧೆಯಿಂದ ಮನನೊಂದ ಪತಿ ತನ್ನ ಪತ್ನಿ ಹಾಗೂ ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ದಾರುಣ ಘಟನೆ ಏ 9 ರಂದು ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ನಕ್ರೆಯಲ್ಲಿ ಸಂಭವಿಸಿದೆ. ಕುಕ್ಕುಂದೂರಿನ ನಕ್ರೆ ನಿವಾಸಿ ಪ್ರಭಾಕರ ಆಚಾರ್ಯ ಹಾಗೂ…

ಬಿಸಿಲಿನ ಝಳದಿಂದ ಬಸವಳಿದ ಪುಟಾಣಿಗಳು: ಅಂಗನವಾಡಿಗಳ ಸಮಯ ಬದಲಾಯಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು: ರಾಜ್ಯದಲ್ಲಿ ವಿಪರೀತವಾಗಿ ಹೆಚ್ಚುತ್ತಿರುವ ಬಿಸಿಲ ಝಳದಿಂದ ಪುಟಾಣಿ ಮಕ್ಕಳು ಹೈರಾಣಾಗಿದ್ದು,ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಅಂಗನವಾಡಿ ಕೇಂದ್ರಗಳ ಸಮಯದಲ್ಲಿ ಬದಲಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಹಿಂದೆ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಮಾತ್ರ ಅನ್ವಯವಾಗಿದ್ದ ಅಂಗನವಾಡಿ ಕೇಂದ್ರಗಳ ಕಾರ್ಯನಿರ್ವಹಣಾ…

ದೇಶಾದ್ಯಂತ ಚಂದ್ರ ದರ್ಶನ: ಇಂದು ಈದ್ – ಮುಬಾರಕ್ ಆಚರಣೆ

ನವದೆಹಲಿ : ದೇಶದ ಅನೇಕ ಭಾಗಗಳಲ್ಲಿ ಕಂಡುಬರುವ ಶವ್ವಾಲ್ ತಿಂಗಳ ಚಂದ್ರ ದರ್ಶನವಾಗಿದ್ದು, ಇಂದು ದೇಶಾದ್ಯಂತ ಆಡಂಬರದಿಂದ ಈದ್ ಆಚರಿಸಲಾಗುತ್ತಿದೆ. ಇಸ್ಲಾಮಿಕ್ ಕ್ಯಾಲೆಂಡರ್ ಪ್ರಕಾರ, ರಂಜಾನ್ ನಂತ್ರ ಶವ್ವಾಲ್’ನ ಮೊದಲ ದಿನದಂದು ಈದ್-ಉಲ್-ಫಿತರ್ ಆಚರಿಸಲಾಗುತ್ತದೆ. ಈದ್ ದಿನದಂದು ಬೆಳಿಗ್ಗೆ ಪ್ರಾರ್ಥನೆಗಳನ್ನು ಓದುವುದರೊಂದಿಗೆ…

ಬಜ್ಪೆ: ಜಾಲಿ ಗಾಯ್ಸ್ ತಂಡದಿಂದ,ಈದ್ ಪ್ರಯುಕ್ತ ಈದ್ ಸೌಹಾರ್ದ ಕೂಟ

ಬಜ್ಪೆ: ಕಿನ್ನಿಪದವು ಜಂಕ್ಷನ್ ಬಳಿ ಸುಮಾರು ಒಂದು ಸಾವಿರಕ್ಕೂ ಜನ ಮಿಗಿಲಾಗಿ,ಮುಖ್ಯ ರಸ್ತೆಯಲ್ಲಿ ಹೋಗುವ ವಾಹನಗಳ ಸವಾರರಿಗೆ ಸಿಹಿ ತಿಂಡಿ ಮತ್ತು ತಂಪು ಪಾನೀಯಗಳನ್ನು ನೀಡಿ ಸೌಹಾರ್ದತೆಯ ಈದ್ ಆಚರಿಸಿದರು. ಬಜ್ಪೆ ಜಾಲಿ ಗಾಯ್ಸ್ ತಂಡದ ಅಧ್ಯಕ್ಷರಾದ ಹಸೈನಾರ್, ಉಪಾಧ್ಯಕ್ಷರಾದ ನಿಸಾರ್…

ಕಾರ್ಕಳ: ಬೈಕ್- ಟಾಟಾ ಏಸ್ ವಾಹನ ಡಿಕ್ಕಿ: ಸವಾರನಿಗೆ ಗಾಯ

ಕಾರ್ಕಳ: ವಾಹನ ಓವರ್’ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಬೈಕಿಗೆ ಟಾಟಾ ಏಸ್ ವಾಹನ ಡಿಕ್ಕಿಯಾದ ಪರಿಣಾಮ ಸವಾರ ಗಾಯಗೊಂಡ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಗ್ರಾಮದ ಪಿಲಿಚಂಡಿ ಸ್ಥಾನದ ಬಳಿ ಸಂಭವಿಸಿದೆ. ಬೈಕ್ ಸವಾರ ದಿಲೀಪ್ ಎಂಬವರು ಮಂಗಳವಾರ ಸಂಜೆ…

ಮಾಹೆ ಮತ್ತು ICMR ಸಹಭಾಗಿತ್ವದಲ್ಲಿ ಡ್ರೋನ್‌ ಮೂಲಕ ಆರೋಗ್ಯ ವಿತರಣಾ ವ್ಯವಸ್ಥೆಯ ಉದ್ಘಾಟನೆ : ಮೊದಲ ಮಾದರಿ (ಸ್ಯಾಂಪಲ್) ಕಾರ್ಕಳದ ಡಾ TMA ಪೈ ರೋಟರಿ ಆಸ್ಪತ್ರೆಯಿಂದ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ರವಾನೆ

ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE) ಮಣಿಪಾಲ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR ) ಡ್ರೋನ್ ಮೂಲಕ ಬಹು ಅಗತ್ಯ ವೈಮಾನಿಕ ಆಧಾರಿತ ಆರೋಗ್ಯ ವಿತರಣಾ ವ್ಯವಸ್ಥೆಯ ಯೋಜನೆಯನ್ನು ಜಂಟಿಯಾಗಿ ಬುಧವಾರ ಉದ್ಘಾಟಿಸಲಾಯಿತು .…

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ 37 ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದಲ್ಲಿ ಮೊದಲ ಹತ್ತು ರ‍್ಯಾಂಕ್: ವಿಜ್ಞಾನ ವಿಭಾಗದ ಸಮ್ಯಕ್ ಪ್ರಭು ಹಾಗೂ ವಾಣಿಜ್ಯ ವಿಭಾಗದ ಚೈತ್ರ ಕಾಮತ್ ಗೆ ರಾಜ್ಯಮಟ್ಟದಲ್ಲಿ 4ನೇ ರ‍್ಯಾಂಕ್

ಉಡುಪಿ : ಕರ್ನಾಟಕ ಶಾಲಾ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದ 2023-24ನೇ ಸಾಲಿನ ದ್ವೀತೀಯ ಪಿಯುಸಿ ಪರೀಕ್ಷೆ -1ರ ಫಲಿತಾಶದಲ್ಲಿ ಜ್ಞಾನಸುಧಾದ ವಿದ್ಯಾರ್ಥಿಗಳು ರಾಜ್ಯಕ್ಕೆ 10ರೊಳಗಿನ 37 ರ‍್ಯಾಂಕ್ ಪಡೆದಿದ್ದು, ವಿಜ್ಞಾನ ವಿಭಾಗದಲ್ಲಿ ಸಮ್ಯಕ್ ಆರ್ ಪ್ರಭು (595/600)…

ಬೈಲೂರು ಪರಶುರಾಮ ಥೀಮ್ ಪಾರ್ಕ್ ವಿವಾದ: ಕಾಂಗ್ರೆಸ್ ಮುಖಂಡರ ವಿರುದ್ಧ ದಾಖಲಾದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು: ಬೈಲೂರು ಸಮೀಪದ ಉಮಿಕಲ್ ಬೆಟ್ಟದಲ್ಲಿ ನಿರ್ಮಾಣಗೊಂಡ ಪರಶುರಾಮ ಥೀಂ ಪಾರ್ಕ್ ಯೋಜನೆಯ ಪರಶುರಾಮನ ಪ್ರತಿಮೆಯ ನೈಜತೆ ಪರಿಶೀಲನೆಗೆ ಅಕ್ರಮವಾಗಿ ಪ್ರವೇಶಿಸಿ ಧಕ್ಕೆ‌ಯನ್ನುಂಟು ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್…