ಕಾರ್ಕಳ:ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ನಲ್ಲೂರಿನಲ್ಲಿ ಸಂಭವಿಸಿದೆ.
ನಲ್ಲೂರು ಗ್ರಾಮದ ಪ್ರವೀಣ್ ಶಂಕರ್ (54) ಎಂಬವರು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೃತ ಪ್ರವೀಣ್ ಶಂಕರ್ ಮುಡಾರಿನಲ್ಲಿರುವ ಶ್ರೀ ದೇವಿ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ರೈಟರ್ ಆಗಿ ಕೆಲಸ ಮಾಡಿಕೊಂಡಿದ್ದರು. ಇತ್ತೀಚೆಗೆ ಕೆಲವು ದಿನಗಳಿಂದ ತನಗೆ ಗೇರು ಬೀಜ ಫ್ಯಾಕ್ಟರಿಯಲ್ಲಿ ಸರಿಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲವೆಂದು ತಾಯಿ ಭುವನೇಶ್ವರಿ ಹಾಗೂ ಪತ್ನಿ ಈಶ್ವರಿಯವರಲ್ಲಿ ಹೇಳುತ್ತಿದ್ದರು. ಅದೇ ವಿಚಾರದಲ್ಲಿ ಕೆಲಸಕ್ಕೆ ಹೋಗದೇ ಮನನೊಂದು ಬುಧವಾರ ಬೆಳಗ್ಗೆ ಮಹಡಿ ಮೇಲಿರುವ ಹಾಲ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.