Month: May 2024

ಮಲ್ಪೆ ಬೀಚ್‌ನಲ್ಲಿ ಪ್ರವಾಸಿಗರಿಂದ ಜೀವರಕ್ಷಕನ ಮೇಲೆ ಹಲ್ಲೆ

ಉಡುಪಿ: ಮಲ್ಪೆ ಬೀಚ್‌ನಲ್ಲಿ ನಿಯೋಜನೆಗೊಂಡಿದ್ದ ಜೀವರಕ್ಷಕ ದಳದ ಸಿಬ್ಬಂದಿ ಮೇಲೆ ಆರು ಮಂದಿ ಪ್ರವಾಸಿಗರ ತಂಡವೊಂದು ಗುರುವಾರ ಹಲ್ಲೆ ನಡೆಸಿದ ಘಟನೆ ನಡೆದಿದೆ. ಸಮುದ್ರವು ಪ್ರಕ್ಷುಬ್ಧಗೊಂಡ ಹಿನ್ನೆಲೆಯಲ್ಲಿ ಲೈಫ್‌ಗಾರ್ಡ್‌ ಉದ್ಯಾವರ-ಪಿತ್ರೋಡಿಯ ತೇಜ ಕೋಟ್ಯಾನ್ ಪ್ರವಾಸಿಗರಿಗೆ ಪದೇಪದೇ ಎಚ್ಚರಿಕೆ ನೀಡಿದರೂ, ಅದನ್ನು ನಿರ್ಲಕ್ಷಿಸಿ…

ಕಾರ್ಕಳ ಎಸ್ ‌ವಿ ಟಿ ಕನ್ನಡ ಮಾಧ್ಯಮ ಪ್ರೌಢಶಾಲೆಗೆ 100% ಫಲಿತಾಂಶ

ಕಾರ್ಕಳ:ಎಸ್ ‌ವಿ ಟಿ ವನಿತಾ ಪದವಿ ಪೂರ್ವ ಕಾಲೇಜು ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ 100% ಫಲಿತಾಂಶ ದಾಖಲಾಗಿದೆ. ಪರೀಕ್ಷೆಗೆ ಹಾಜರಾಗಿದ್ದ 39 ವಿದ್ಯಾರ್ಥಿಗಳಲ್ಲಿ 10 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 09 ವಿದ್ಯಾರ್ಥಿಗಳು ಪ್ರಥಮ…

ಶಿವಕಾಶಿಯಲ್ಲಿ ಸಿಡಿಮದ್ದು ತಯಾರಿಕಾ ಘಟಕದಲ್ಲಿ ಭೀಕರ ಸ್ಪೋಟ: 8 ಕಾರ್ಮಿಕರು ಬಲಿ,: ಹಲವಾರು ಕಾರ್ಮಿಕರು ಗಂಭೀರ

ಶಿವಕಾಶಿ: ಸರ್ಕಾರಗಳು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಿದರೂ ಪಟಾಕಿ ಕಾರ್ಖಾನೆಗಳ ಅಗ್ನಿ ದುರಂತಕ್ಕೆ ಕಡಿವಾಣ ಬಿದ್ದಿಲ್ಲ. ತಮಿಳುನಾಡಿನ ಶಿವಕಾಶಿಯಲ್ಲಿ ಮತ್ತೊಂದು ಪಟಾಕಿ ತಯಾರಿಕಾ ಘಟಕ ಸ್ಫೋಟಗೊಂಡು ಭೀಕರ ದುರಂತದ ನಡೆದಿದೆ. ತಮಿಳುನಾಡಿನ ಶಿವಕಾಶಿ ಬಳಿಯಲ್ಲಿರುವ ಚೆನ್ನಗಲಂಪಟ್ಟಿ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದ್ದು,ಕೆಲಸದ ಸಮಯದಲ್ಲೇ…

ಪರಶುರಾಮ ಥೀಮ್ ಪಾರ್ಕ್ ಕುರಿತು ಪ್ರಾಥಮಿಕ ತನಿಖೆ ಆರಂಭಿಸಿದ ಸಿಐಡಿ: ಕಡತಗಳ ಪರಿಶೀಲನೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹ

ಕಾರ್ಕಳ: ಕಳೆದ ಒಂದು ವರ್ಷದಿಂದ ಭಾರೀ ಸದ್ದು ಮಾಡುತ್ತಿರುವ ಬೈಲೂರಿನ ಉಮಿಕ್ಕಲ್ ಬೆಟ್ಟದಲ್ಲಿ ಸ್ಥಾಪಿಸಲಾಗಿದ್ದ ಪರಶುರಾಮ ಥೀಮ್ ಪಾರ್ಕ್ ಯೋಜನೆಯ ಕಾಮಗಾರಿಯಲ್ಲಿ ಕಳಪೆಯಾಗಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪ್ರಕರಣವನ್ನು ಕೊನೆಗೂ ಸಿಐಡಿ ತನಿಖೆಗೆ ಆದೇಶಿಸಿದೆ. ಸರ್ಕಾರ ತನಿಖೆಗೆ ಅದೇಶಿಸಿದ…

ನಾಳೆ (ಮೇ 10) ಅಜೆಕಾರಿನಲ್ಲಿ ಶಿವಂ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಶುಭಾರಂಭ

ಕಾರ್ಕಳ: ಕಳೆದ ಒಂದು ದಶಕದಿಂದ ಕಾರ್ಕಳ ಆಸುಪಾಸಿನಲ್ಲಿ ಮನೆಮಾತಾಗಿರುವ ಹಾಗೂ ಗ್ರಾಹಕರಿಗೆ ನಗುಮೊಗದ ಸೇವೆ ನೀಡುತ್ತಿರುವ ಕಾರ್ಕಳದ ಶಿವಂ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ನ ಅಜೆಕಾರು ಶಾಖೆಯು ಮೇ 10 ರಂದು ಅಕ್ಷಯ ತೃತೀಯ ಶುಭ ದಿನದಂದು ಶುಭಾರಂಭಗೊಳ್ಳಲಿದೆ. ಅಜೆಕಾರು ವ್ಯವಸಾಯ…

ಎಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟ: ರಾಜ್ಯದಲ್ಲಿ ಶೇಕಡಾ ಶೇ.76.91 ಫಲಿತಾಂಶ: ಉಡುಪಿ ಜಿಲ್ಲೆ ಪ್ರಥಮ:ಬಾಗಲಕೋಟೆಯ ಅಂಕಿತಾ ರಾಜ್ಯಕ್ಕೆ ಪ್ರಥಮ ಸ್ಥಾನ

ಬೆಂಗಳೂರು:ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ 2023-24ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಫಲಿತಾಂಶದಲ್ಲಿ ಗಣನೀಯ ಕುಸಿತ ಕಂಡಿದ್ದು,ರಾಜ್ಯದಲ್ಲಿ ಒಟ್ಟಾರೆ ಶೇ, 76.91 ರಷ್ಟು ಫಲಿತಾಂಶ ದಾಖಲಾಗಿದೆ. ನೀರಿಕ್ಷೆಯಂತೆ ಈ ಬಾರಿ ಉಡುಪಿ…

ಇಂದು ಬೆಳಗ್ಗೆ 10.30ಕ್ಕೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: 8.69 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ

ಬೆಂಗಳೂರು: ಅತ್ಯಂತ ಕುತೂಹಲ ಮೂಡಿಸುತ್ತಿರುವ ಎಸೆಸ್ಸೆಲ್ಸಿ ಫಲಿತಾಂಶ ಇಂದು ಬೆಳಗ್ಗೆ10.30 ಕ್ಕೆ ಪ್ರಕಟವಾಗಲಿದೆ. ಬೆಂಗಳೂರಿನ ಮಲ್ಲೇಶ್ವಂನಲ್ಲಿರುವ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷೆ ಎನ್ .ಮಂಜುಶ್ರೀ ಸುದ್ದಿಗೋಷ್ಟಿ ನಡೆಸಿ ಫಲಿತಾಂಶ ಪ್ರಕಟಿಸಲಿದ್ದಾರೆ. ಈ ಬಾರಿ 4,41,910 ಬಾಲಕರು…

ಅಜೆಕಾರು ಜ್ಯೋತಿ ಪಿಯು ಕಾಲೇಜಿನಲ್ಲಿ ಪ್ರಥಮ ವರ್ಷದ ವಾಣಿಜ್ಯ ವಿಭಾಗಕ್ಕೆ ಪ್ರವೇಶ ಆರಂಭ

ಕಾರ್ಕಳ: ಕಳೆದ ಹಲವು ವರ್ಷಗಳಿಂದ ಶೇ 100ರ ಫಲಿತಾಂಶದೊಂದಿಗೆ ಅಜೆಕಾರು ಜ್ಯೋತಿ ಪದವಿ ಪೂರ್ವ ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಶಿಕ್ಷಣ ಸಂಸ್ಥೆಯಾಗಿದೆ. ಈ ಶೈಕ್ಷಣಿಕ ವರ್ಷದ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗಕ್ಕೆ ಈಗಾಗಲೇ ಪ್ರವೇಶ ಆರಂಭಗೊಂಡಿದ್ದು, ಅರ್ಜಿಗಳನ್ನು…

ಬೆಳ್ತಂಗಡಿ ಮಾಜಿ ಶಾಸಕ ಕಾಂಗ್ರೆಸ್ ಮುಖಂಡ ಕೆ.ವಸಂತ ಬಂಗೇರ ವಿಧಿವಶ

ಬೆಳ್ತಂಗಡಿ:ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಬೆಳ್ತಂಗಡಿ ಗುರುದೇವ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕೆ.ವಸಂತ ಬಂಗೇರ(79) ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ನಿಧನರಾಗಿದ್ದಾರೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಕುವೆಟ್ಟು ಗ್ರಾಮದ ಕೇದೆ…

ಕಾರ್ಕಳದ ಹಿಮ್ಮುಂಜೆಯ ಮನೆಯೊಂದರಲ್ಲಿ ನಿಗೂಢ ಸ್ಪೋಟ: ಮಹಿಳೆಯರು ಸಹಿತ ಹಲವರಿಗೆ ಗಂಭೀರ ಗಾಯ

ಕಾರ್ಕಳ: ಕಾರ್ಕಳ ಕಸಬಾ ವ್ಯಾಪ್ತಿಯ ಹಿಮ್ಮುಂಜೆ ಕಜೆ ಎಂಬಲ್ಲಿನ ಮನೆಯೊಂದರಲ್ಲಿ ಬುಧವಾರ ಮುಂಜಾನೆ ನಿಗೂಢ ಸ್ಫೋಟ ಸಂಭವಿಸಿದೆ. ಈ ಸ್ಪೋಟದಲ್ಲಿ ಮನೆಯ ಛಾವಣಿ ಸಂಪೂರ್ಣ ಧ್ವಂಸವಾಗಿದ್ದು,ಇಬ್ಬರು ಮಹಿಳೆಯರ ಸಹಿತ ಹಲವರಿಗೆ ಗಾಯಗಳಾಗಿವೆ. ಹಿಮ್ಮುಂಜೆ ಬಳಿಯ ಕಜೆ ಎಂಬಲ್ಲಿ ನ ಮನೆಯಲ್ಲಿ ಹಲವು…