Month: May 2024

ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ: ಶಾಸಕ ಹರೀಶ್ ಪೂಂಜಾ ವಿರುದ್ಧ ಕೇಸ್ ದಾಖಲು

ಬೆಳ್ತಂಗಡಿ: ಪೊಲೀಸರಿಗೆ ಬೆದರಿಕೆ ಹಾಕಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ಬಿಜೆಪಿ ಶಾಸಕ ಹರೀಶ್ ಪೂಂಜ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಕ್ರಮ ಕಲ್ಲು ಕ್ವಾರಿ ಹಾಗೂ ಸ್ಪೋಟ ಚಟುವಟಿಕೆ ಕೇಸ್ ನಲ್ಲಿ ರೌಡಿ ಶೀಟರ್ ಹಾಗೂ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ…

ಶಿರ್ಲಾಲು: ಹೊಳೆಯಲ್ಲಿ ಮುಳುಗಿ ಇಬ್ಬರು ದಾರುಣ ಸಾವು: ಮಾವ,ಸೋದರಳಿಯನ್ನು ಮೀನಿನ ರೂಪದಲ್ಲಿ  ಬಲಿ ಪಡೆದ ಜವರಾಯ!

ಕಾರ್ಕಳ: ಹೊಳೆಯಲ್ಲಿ ಮೀನು ಹಿಡಿಯಲೆಂದು ಹೋಗಿದ್ದ ಮಾವ ಅಳಿಯ ನೀರಿನಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದ ಉಬ್ಬರಬೈಲ್ ಎಂಬಲ್ಲಿ ಭಾನುವಾರ ಸಂಭವಿಸಿದೆ. ಶಿರ್ಲಾಲು ಮುಡಾಯಿಗುಡ್ಡೆ ನಿವಾಸಿ ಹರೀಶ್ ಪೂಜಾರಿ (46) ಹಾಗೂ ಅಕ್ಕನ ಮಗ ರಿತೇಶ್…

ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ: ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 490 ಕೊಲೆ 600 ರೈತರ ಆತ್ಮಹತ್ಯೆಗಳು ನಡೆದಿದೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ

ಹುಬ್ಬಳ್ಳಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಾಜ್ಯಾದ್ಯಂತ ಬರೋಬ್ಬರಿ 490 ಕೊಲೆಗಳು ಹಾಗೂ 600ಕ್ಕೂ ಅಧಿಕ ರೈತರ ಆತ್ಮಹತ್ಯೆಗಳಾಗಿವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು. ಹುಬ್ಬಳ್ಳಿಯಲ್ಲಿ ಭೀಕರವಾಗಿ ಕೊಲೆಯಾದ ಅಂಜಲಿ ಅಂಬಿಗೇರ ಮನೆಗೆ ಭೇಟಿ…

ರಂಗನಪಲ್ಕೆ: ಕಾರು ಡಿಕ್ಕಿಯಾಗಿ ಜಾರ್ಖಂಡ್ ಮೂಲದ ಕಾರ್ಮಿಕನಿಗೆ ಗಾಯ

ಕಾರ್ಕಳ:ಅಂಗಡಿಯೊಂದರಲ್ಲಿ ದಿನಸಿ ಸಾಮಾಗ್ರಿಗಳನ್ನು ಖರೀದಿಸಿ ರಸ್ತೆ ಬದಿಯಲ್ಲಿ ತನ್ನ ಸ್ನೇಹಿತನ ಜತೆ ನಡೆದುಕೊಂಡು ಹೋಗುತ್ತಿದ್ದ ಜಾರ್ಖಂಡ್ ಮೂಲದ ವ್ಯಕ್ತಿಗೆ ಹಿಂಬದಿಯಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಬಿನೇಶ್ವರ ನಾಗೇಶಿಯ ಎಂಬಾತ ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ರಾತ್ರಿ ಸಂಭವಿಸಿದೆ.…

ಬೋಳ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ವಿಕಲಚೇತನ  ಹಾಗೂ ಮಾನಸಿಕ ಅಸ್ವಸ್ಥ ಮಹಿಳೆ ಚಿಕಿತ್ಸೆ ಫಲಿಸದೇ ಸಾವು

ಕಾರ್ಕಳ:ವಿಶೇಷಚೇತನ ಹಾಗೂ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಜೀವನದಲ್ಲಿ ಜಿಗುಪ್ಸೆಗೊಂಡು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿ ಬಳಿಕ ಗಂಭೀರ ಸುಟ್ಟಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಿಸದೇ ಭಾನುವಾರ ಮುಂಜಾನೆ ಮೃತಪಟ್ಟಿದ್ದಾರೆ‌. ಕಾರ್ಕಳ ತಾಲೂಕಿನ ಬೋಳ ಗ್ರಾಮದ ಪಂಚಾಯತ್ ಕಚೇರಿ ಬಳಿಯ ನಿವಾಸಿ…

ತಾಯಿ ಶವದ ಮುಂದೆ 4 ದಿನ ಅನ್ನ ನೀರಿಲ್ಲದೆ ಬುದ್ದಿಮಾಂದ್ಯ ಪುತ್ರಿಯ ರೋಧನ: ಚಿಕಿತ್ಸೆ ಫಲಿಸದೇ ಮಗಳೂ ಸಾವು! : ಕುಂದಾಪುರದಲ್ಲೊಂದು ಮನಕಲಕುವ ಘಟನೆ

ಕುಂದಾಪುರ:ತನ್ನ ತಾಯಿಯ ಶವದ ಜತೆ 4 ದಿನಗಳನ್ನು ಕಳೆದ ಬುದ್ಧಿಮಾಂದ್ಯ ಮಗಳು ಕೊನೆಗೆ ಆಸ್ಪತ್ರೆಗೆ ಸೇರಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ನಡೆದಿದೆ. ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ದಾಸನಹಾಡಿ ಗ್ರಾಮದ ನಿವಾಸಿಗಳಾಗಿದ್ದ ತಾಯಿ…

ಕಾರ್ಕಳದ ನಿಟ್ಟೆಯಲ್ಲಿ ಭೀಕರ ದುರಂತ!: ಕಲ್ಲು ಸಾಗಾಟದ ಲಾರಿ ಪಲ್ಟಿ: ಕಲ್ಲಿನಡಿ ಸಿಲುಕಿ ಇಬ್ಬರು ಕಾರ್ಮಿಕರು ದಾರುಣ ಸಾವು !

ಕಾರ್ಕಳ: ಸೈಜ್ ಕಲ್ಲು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿಯೊಂದು ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಭ್ರಾಮರಿ ಕ್ರಾಸ್ ಬಳಿ ಶನಿವಾರ ಸಂಜೆ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಕೋರೆ ಕಾರ್ಮಿಕರಾದ ಕೊಪ್ಪಳ ಜಿಲ್ಲೆಯ ಯಲಬುರ್ಗಿ…

ಬೈಲೂರು: ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ವತಿಯಿಂದ ಪರಶುರಾಮನ ನೈಜ ಕಂಚಿನ ಪ್ರತಿಮೆ ನಿರ್ಮಾಣಕ್ಕಾಗಿ ಸಂಕಲ್ಪ ಸಭೆ:  ನಕಲಿ ಪರಶುರಾಮನ ಪ್ರತಿಮೆ ಸ್ಥಾಪಿಸಿ ತುಳುನಾಡಿಗೆ ಹಾಗೂ ಹಿಂದೂ ಧಾರ್ಮಿಕ ಭಾವನೆಗಳಿಗೆ ಅಪಮಾನ: ಕಾಂಗ್ರೆಸ್ ಮುಖಂಡ ಸುಧೀರ್ ಮರೋಳಿ ಆರೋಪ

ಕಾರ್ಕಳ:ನಕಲಿ ಪರಶುರಾಮನ ಪ್ರತಿಮೆ ಸ್ಥಾಪಿಸಿ ತುಳುನಾಡಿನ ಸೃಷ್ಟಿಕರ್ತ ಪರಶುರಾಮ ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಕಾರ್ಕಳ ಶಾಸಕರು ಅವಮಾನ ಮಾಡಿದ್ದಾರೆ ಎಂದು ಹೈಕೋರ್ಟ್ ನ್ಯಾಯವಾದಿ ಕಾಂಗ್ರೆಸ್ ಮುಖಂಡ ಸುಧೀರ್ ಮರೋಳಿ ಆರೋಪಿಸಿದ್ದಾರೆ. ಅವರು ಮೇ 18 ರಂದು ಶನಿವಾರ ಕಾರ್ಕಳ ತಾಲೂಕಿನ…

ಹೆಬ್ರಿ: ಸರ್ಕಾರಿ ಬಸ್ ಚಾಲಕನ ಮೇಲೆ ಪುಡಿ ರೌಡಿಗಳಿಂದ ಹಲ್ಲೆ

ಹೆಬ್ರಿ: ಸರ್ಕಾರಿ ಬಸ್ ಚಾಲಕನಿಗೆ ಮೂವರು ಪುಂಡರ ಗ್ಯಾಂಗ್ ಕಾರನ್ನು ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ. ಸರ್ಕಾರಿ ಬಸ್ ಚಾಲಕ ಶಿವಾನಂದ (38) ಎಂಬವರು ಹಲ್ಲೆಗೊಳಗಾಗಿದ್ದು, ಅವರು ಶುಕ್ರವಾರ ಬೆಳಗ್ಗೆ ಆಗುಂಬೆ ಕಡೆಯಿಂದ ಸೋಮೇಶ್ವರ…

ಉತ್ತರಪ್ರದೇಶ ಮಾದರಿಯ ಕಾನೂನು ರಾಜ್ಯದಲ್ಲೂ ಜಾರಿಯಾಗಬೇಕು : ಶಾಂತಭೀಷ್ಮಶ್ರೀ ಒತ್ತಾಯ

ಹುಬ್ಬಳ್ಳಿ : ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ಪ್ರೀತಿ ನಿರಾಕರಿಸಿದ ಕಾರಣಕ್ಕೆ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ಆಕೆಯ ಪ್ರಿಯಕರ ಬರ್ಬರ ಹತ್ಯೆಗೈದಿದ್ದ. ಈ ಒಂದು ಘಟನೆಗೆ ಸಂಬಂಧಿಸಿದಂತೆ ಇಂದು ಅಂಬಿಗೇರ ಚೌಡಯ್ಯ ಪೀಠದ ಶಾಂತಭೀಷ್ಮ ಶ್ರೀಗಳು ಮಾತನಾಡಿ ಉತ್ತರ ಪ್ರದೇಶದ ಸಿಎಂ ಯೋಗಿ…