Month: August 2024

ಹೆಬ್ರಿ: ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಹೆಬ್ರಿ: ಕಳೆದ 2 ವರ್ಷಗಳಿಂದ ಅನಾರೋಗ್ಯ ಹಾಗೂ ಆರ್ಥಿಕ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬಿ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮಾವರ ತಾಲೂಕಿನ ನಡೂರು ಗ್ರಾಮದಲ್ಲಿ ಶನಿವಾರ ನಡೆದಿದೆ. ಶ್ರೀಧರ (41ವ) ಆತ್ಮಹತ್ಯೆ ಮಾಡಿಕೊಂಡವರು.ಅನಾರೋಗ್ಯ ಪೀಡಿತರಾಗಿದ್ದ…

ಕಾರ್ಕಳ ಬಸ್ಟ್ಯಾಂಡ್ ಗಣೇಶೋತ್ಸವ ಸಮಿತಿಯ ಅದ್ಯಕರಾಗಿ ಸುರೇಶ್ ದೇವಾಡಿಗ ಪುನರಾಯ್ಕೆ

ಕಾರ್ಕಳ. ಅ 11: ಕಾರ್ಕಳ ಬಸ್ಸ್ ಸ್ಟ್ಯಾಂಡ್ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಿ. ಕಾರ್ಕಳ ಇದರ 17ನೇ ವರ್ಷದ ಗಣೇಶೋತ್ಸವ ಸಮಿತಿಯ ಅದ್ಯಕ್ಷರಾಗಿ ಸುರೇಶ್ ದೇವಾಡಿಗ ಪುನರಾಯ್ಕೆಯಾಗಿದ್ದಾರೆ. ಶ್ರೀ ರಾಧಾಕೃಷ್ಣ ಸಭಾ ಭವನದಲ್ಲಿ ಸಮಿತಿಯ ಸ್ಥಾಪಕಾದ್ಯಕ್ಷ ಶುಭದರಾವ್ ಇವರ ಅದ್ಯಕ್ಷತೆಯಲ್ಲಿ…

ಕಲ್ಯಾಣಪುರ ತ್ರಿಶಾ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ

ಉಡುಪಿ: ಶಿಕ್ಷಣದ ಉದ್ದೇಶ ಮನುಷ್ಯನನ್ನು ಸಂಸ್ಕಾರವAತರನ್ನಾಗಿಸುವುದಾಗಿದೆ.ಪಡೆದ ಶಿಕ್ಷಣದಿಂದ ಉದ್ಯೋಗ ಗಳಿಸುವುದು ಒಂದು ಗುರಿಯಾದರೆ ಬದುಕಿನ ಉದ್ದೇಶ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವಿಸುವುದಾಗಿದೆ .ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಸಾಧನೆಯೊಂದಿಗೆ ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜ ಮತ್ತು ದೇಶಕ್ಕೆ ಕೊಡುಗೆ ನೀಡಬೇಕು.ವಿದ್ಯಾರ್ಥಿ ಜೀವನದಲ್ಲಿ…

ಕಾರ್ಕಳದ ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆಯಲ್ಲಿ ಪಾರ್ಶ್ವವಾಯು ಪುನಶ್ಚೇತನ ಉಚಿತ ಚಿಕಿತ್ಸಾ ಶಿಬಿರ

ಕಾರ್ಕಳ, ಆ11: ಡಾ ಟಿ ಎಂ ಎ ಪೈ ರೋಟರಿ ಆಸ್ಪತ್ರೆ ಕಾರ್ಕಳ ಮತ್ತು ಮಣಿಪಾಲದ ಸೆಂಟರ್ ಫಾರ್ ಕಾಂಪ್ರಹೆಂನ್ಸಿವ್ ಸ್ಟ್ರೋಕ್ ರೆಹಬೀಲಿಟೇಷನ್ ಮತ್ತು ರಿಕವರಿ (CCSRR) ಇವರ ಸಹಯೋಗದಲ್ಲಿ ಪಾಶ್ವ ವಾಯು ಪುನಶ್ವೇತನ ಉಚಿತ ಚಿಕಿತ್ಸಾ ಶಿಬಿರ ಮತ್ತು ಜಾಗೃತಿ…

ಹೆಬ್ರಿ: ಅಮೃತ ಭಾರತಿ ವಿದ್ಯಾಲಯದಲ್ಲಿ ಜಿಲ್ಲಾ ಗುಂಪು ಆಟಗಳ ಸಮಾರೋಪ ಸಮಾರಂಭ

ಹೆಬ್ರಿ: ವಿದ್ಯಾರ್ಥಿಗಳು ಕ್ರೀಡೆಯ ಮೂಲಕ ದೈಹಿಕ ಸಾಮರ್ಥ್ಯವನ್ನು ಗಟ್ಟಿಗೊಳಿಸಿಕೊಳ್ಳಬೇಕು, ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಿಕೊಳ್ಳಬೇಕ . ಸೋಲು ವಿಜಯದ ಮೆಟ್ಟಿಲು ಎನ್ನುವುದನ್ನು ತಿಳಿದುಕೊಂಡು ಮುಂದಿನ ಪ್ರಯತ್ನವನ್ನು ಹೆಚ್ಚು ಗಮನವಿಟ್ಟು ಮಾಡಿದರೆ ಜಯ ನಿಮ್ಮದಾಗುತ್ತದೆ. ಪಂದ್ಯಾಟದಲ್ಲಿ ಗೆದ್ದಂತಹ ಎಲ್ಲ ವಿಜೇತರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ…

ರಾಜ್ಯದಲ್ಲಿ ಭೂ ಕುಸಿತ ತಡೆಗೆ ಶೀಘ್ರವೇ ಹೊಸ ನೀತಿ ಜಾರಿ: ಕಂದಾಯ ಸಚಿವ ಕೃಷ್ಣ ಭೈರೇಗೌಡ

ಬೆಂಗಳೂರು: ಈ ಬಾರಿಯ ಭಾರೀ ಮಳೆ ಗೆ ರಾಜ್ಯದಲ್ಲಿ ಭೂಕುಸಿತಗಳು ಉಂಟಾಗಿದ್ದು ಅನೇಕ ಸಾವು ನೋವುಗಳು ಸಂಭವಿಸಿದೆ. ಅಲ್ಲದೇ ಕೇರಳದ ವಯನಾಡಿನಲ್ಲಿ ಉಂಟಾದ ಭೀಕರ ಭೂಕುಸಿತದಿಂದ ಎಚ್ಚೆತ್ತ ಕರ್ನಾಟಕ ಸರ್ಕಾರ ಇದೀಗ ಭೂ ಕುರಿತ ತಡೆಗೆ ಶೀಘ್ರವೇ ಹೊಸ ನೀತಿ ಜಾರಿಗೆ…

ವಿನೇಶ್ ಪೋಗಟ್ ಗೆ ‘ಬೆಳ್ಳಿ’ ಪದಕ: ಇಂದು ರಾತ್ರಿ ಸಿಎಎಸ್ ಮಹತ್ವದ ತೀರ್ಪು

ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ನ 50 ಕೆಜಿ ಮಹಿಳಾ ಕುಸ್ತಿ ವಿಭಾಗದ ಫೈನಲ್ ನಿಂದ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರನ್ನು ಅನರ್ಹಗೊಳಿಸಿದ ಪ್ರಕರಣವನ್ನು ಆಲಿಸಿದ ಸಿಎಎಸ್ ತನ್ನ ನಿರ್ಧಾರದ ದಿನಾಂಕವನ್ನು ವಿಸ್ತರಿಸಿದೆ. ಭಾರತೀಯ ಕಾಲಮಾನ ಶನಿವಾರ ರಾತ್ರಿ 9:30ಕ್ಕೆ ಬರಬೇಕಿದ್ದ ತೀರ್ಪು…

ಜಮ್ಮು ಕಾಶ್ಮೀರದಲ್ಲಿ ಯೋಧರು ಉಗ್ರರ ನಡುವೆ ಗುಂಡಿನ ಕಾಳಗ: ಇಬ್ಬರು ಸೈನಿಕರು ಹುತಾತ್ಮ, ಮೂವರಿಗೆ ಗಾಯ

ಅನಂತನಾಗ್: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ದೂರದ ಅರಣ್ಯ ಪ್ರದೇಶದ ಶನಿವಾರ ಉಗ್ರರೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ ಮತ್ತು ಮೂವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ಕೊಕರ್ನಾಗ್ ಪ್ರದೇಶದ…

ಉಡುಪಿ: ಹಿರಿಯ ಪತ್ರಕರ್ತರ ಜಯಕರ ಸುವರ್ಣರಿಗೆ ಶ್ರದ್ಧಾಂಜಲಿ ಸಭೆ

ಉಡುಪಿ, ಆ.10: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲೆ ಇದರ ಉಡುಪಿ ವಲಯದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಹಿರಿಯ ಪತ್ರಕರ್ತರ ಹಾಗೂ ಛಾಯಾಗ್ರಾಹಕ ಜಯಕರ…

ಕಾರ್ಕಳ: ಆನ್ಲೈನ್ ವಂಚನೆಯಿಂದ ಲಕ್ಷಾಂತರ ರೂ. ನಷ್ಟ

ಕಾರ್ಕಳ: ಆನ್ಲೈನ್ ವಂಚನೆಯಿಂದ ಕಾರ್ಕಳದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ವಾದಿರಾಜ ಎಂಬವರ ಖಾತೆಗೆ ವಿಮಾ ಕಂಪೆನಿಯಿಂದ 3,67,269 ರೂ. ಹಣ ಬಂದಿದ್ದು, ಆಗಸ್ಟ್. 09 ರಂದು ಅವರ ಖಾತೆಯಲ್ಲಿದ್ದ 3,55,199 ರೂ. ಹಾಗೂ ಜಂಟಿ ಖಾತೆಯಿಂದ 299 ರೂ. ನಗದು…