Month: November 2024

ವಿಧಾನಸಭಾ ಉಪಚುನಾವಣೆ: 3 ಕ್ಷೇತ್ರಗಳ ಚುನಾವಣಾ ದಿನಾಂಕ ಬದಲಾವಣೆ: ನ.13 ರ ಬದಲಿಗೆ ನ. 20 ರಂದು ಮತದಾನ

ನವದೆಹಲಿ: ಕೇಂದ್ರ ಚುನಾವಣಾ ಆಯೋಗವು ನವೆಂಬರ್ 13 ರಿಂದ ನವೆಂಬರ್ 20 ರವರೆಗೆ ಈ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ದಿನಾಂಕ ಬದಲಾಯಿಸಿದೆ. ಕೇರಳ, ಪಂಜಾಬ್ ಮತ್ತು ಉತ್ತರ ಪ್ರದೇಶಗಳ ಉಪ ಚುನಾವಣೆ ದಿನಾಂಕವನ್ನು ಬದಲಿಸಲಾಗಿದೆ. ನವೆಂಬರ್ 13 ರಂದು 48 ವಿಧಾನಸಭಾ…

ಬಜಗೋಳಿ: ರವೀಂದ್ರ ಶೆಟ್ಟಿ ನೇತೃತ್ವದಲ್ಲಿ 4 ನೇ ವರ್ಷದ ಗೋದಾನ ಕಾರ್ಯಕ್ರಮ: ಗೋಮಾತೆಯನ್ನು ಪೂಜಿಸಿದರೆ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ: ಕಮಲಾಕ್ಷ ಕಾಮತ್

ಕಾರ್ಕಳ: ಗೋವಿನಲ್ಲಿ ಮುಕ್ಕೋಟಿ ದೇವತೆಗಳು ವಾಸವಾಗಿದ್ದಾರೆ.ಗೋದಾನ ಭೂಮಿಯ ಅತ್ಯಂತ ಶ್ರೇಷ್ಠ ದಾನವಾಗಿದೆ.ಗೋವು ಕಲಿಯುಗದ ಕಾಮಧೇನು,ಇಂತಹ ಪವಿತ್ರ ಗೋಮಾತೆಯನ್ನು ಪೂಜಿಸಿದರೆ ಲಕ್ಷ್ಮೀ ಪ್ರಸನ್ನಳಾಗುತ್ತಾಳೆ ಎಂದು ಕಮಲಾಕ್ಷ ಕಾಮತ್ ಹೇಳಿದರು. ಅವರು ಬಜಗೋಳಿ ರವೀಂದ್ರ ಶೆಟ್ಟಿ ನೇತೃತ್ವದಲ್ಲಿ ಭಾನುವಾರ ಬಜಗೋಳಿಯ ರವೀಂದ್ರ ಶೆಟ್ಟಿಯವರ ನಿವಾಸದಲ್ಲಿ…

ಪಶ್ಚಿಮ ಘಟ್ಟದ ಕಾನನದೊಳು ಅನಾವರಣಗೊಳ್ಳಲಿದೆ ವಿದ್ಯಾರ್ಥಿಗಳ ಪ್ರತಿಭೆ: ನ.5 ರಂದು ನಕ್ಸಲ್ ಬಾಧಿತ ಈದು ಗ್ರಾಮದ ಮುಳಿಕಾರು ಶಾಲೆಯಲ್ಲಿ ಪ್ರತಿಭಾ ಕಾರಂಜಿ

ಕಾರ್ಕಳ: ಕಳೆದ ಎರಡು ದಶಕಗಳಿಂದ ನಕ್ಸಲ್ ಬಾಧಿತ ಪ್ರದೇಶವಾಗಿರುವ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿನ ಈದು ಗ್ರಾಮದ ಅತೀ ಗ್ರಾಮೀಣ ಪ್ರದೇಶವಾದ ಮುಳಿಕಾರು ಶಾಲೆಯಲ್ಲಿ ಈ ಸಾಲಿನ ಹೊಸ್ಮಾರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಶಿಕ್ಷಣ ಇಲಾಖೆ ಆಯೋಜಿಸಿದೆ. ಶಾಲಾ…

ಬಂಟ್ವಾಳ: ಸ್ಕೂಟರ್ ಗೆ ಡಿಕ್ಕಿಯಾದ ಖಾಸಗಿ ಬಸ್ : ಓರ್ವ ಸ್ಥಳದಲ್ಲೇ ಸಾವು,ಇನ್ನೋರ್ವ ಗಂಭೀರ

ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ 75ರ ತುಂಬೆ ಸಮೀಪದ ಕಡೆಗೋಳಿಯಲ್ಲಿ ಖಾಸಗಿ ಬಸ್‌ ಸ್ಕೂಟರ್ ಗೆ ಢಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ರವಿವಾರ ರಾತ್ರಿ ನಡೆದಿದೆ. ಮೃತ ದುರ್ದೈವಿಯನ್ನು ತುಂಬೆ ನಿವಾಸಿ ಪ್ರವೀಣ್ (30) ಎಂದು ಗುರುತಿಸಲಾಗಿದೆ. ಇನ್ನೊರ್ವ ಸವಾರ ಸಂದೀಪ್…

ವಕ್ಫ್ ನೋಟಿಸ್ ಹಿನ್ನಲೆ: ನ.6 ಮತ್ತು 7 ರಂದು ರಾಜ್ಯಕ್ಕೆ “ಜೆಪಿಸಿ” ಭೇಟಿ

ಬೆಂಗಳೂರು: ಕರ್ನಾಟಕದಾದ್ಯಂತ ವಕ್ಫ್ ಆಸ್ತಿ ನೋಟಿಸ್ ಜಾರಿ ಮಾಡಿರುವುದು ರೈತರಲ್ಲಿ ಆತಂಕ ಹುಟ್ಟಿಸಿದ್ದು ಇದೀಗ ಈ ವಿವಾದ ಕೇಂದ್ರಕ್ಕೆ ತಲುಪಿದೆ. ಈ ಹಿನ್ನಲೆಯಲ್ಲಿ ವಕ್ಫ್ ಕಾಯ್ದೆ ತಿದ್ದುಪಡಿಗೆ ಜಗದಾಂಬಿಕಾ ಪಾಲ್ ನೇತೃತ್ವದ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ನವೆಂಬರ್ 6 ಮತ್ತು…

ಪುತ್ತೂರು: ನಾಪತ್ತೆಯಾಗಿದ್ದ ಮಹಿಳೆಯ ತಲೆಬುರುಡೆ, ಎಲುಬುಗಳು ಪತ್ತೆ: ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕುಂಬ್ರದ ಒಳಮೊಗ್ರು ಗ್ರಾಮದ ಕಾಡಿನಲ್ಲಿ ಮಹಿಳೆಯ ತಲೆ ಬುರುಡೆ ಹಾಗೂ ಎಲುಬುಗಳು ಪತ್ತೆಯಾಗಿದ್ದು, ತಿಂಗಳ ಹಿಂದೆ ನಾಪತ್ತೆಯಾಗಿದ್ದ ನಳಿನಿ ಎಂಬವರದ್ದು ಎಂದು ಗುರುತಿಸಲಾಗಿದೆ. ಮಹಿಳೆಯ ತಲೆಗೂದಲು ನೇಣುಕುಣಿಕೆಯಲ್ಲಿ ಜೋತಾಡುತ್ತಿದ್ದು, ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ…

ಉಡುಪಿ : ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ: ಸ್ಕೂಟರ್ ಸೇರಿದಂತೆ 740 ಗ್ರಾಂ ತೂಕದ ಗಾಂಜಾ ವಶಕ್ಕೆ

ಉಡುಪಿ: ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಉಡುಪಿ ತಾಲೂಕಿನ ಪುತ್ತೂರು ಗ್ರಾಮದ ನಾರಾಯಣ ನಗರ ರಸ್ತೆಯ ಬಳಿ ನಡೆದಿದೆ. ಬಂಧಿತ ಆರೋಪಿಗಳನ್ನು ಬಂಟ್ವಾಳ ತಾಲೂಕಿನ ನರಿಂಗಾಣ ಗ್ರಾಮದ ಮಹಮ್ಮದ್‌ ಸಪಾಝ್‌ (29)ಹಾಗೂ ಪುತ್ತೂರು ಗ್ರಾಮದ ಸಂತೆಕಟ್ಟೆಯ…

ಶತಮಾನೋತ್ಸವ ಸಂಭ್ರಮದಲ್ಲಿ ನೆಲ್ಲಿಕಾರು ಪ್ರಾಥಮಿಕ ಶಾಲೆ: ಶಾಲಾ ಹಳೆವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಬರಹಗಳು, ಭಾವಚಿತ್ರಗಳ ಆಹ್ವಾನ

ಮೂಡುಬಿದಿರೆ : ಮೂಡುಬಿದಿರೆ ತಾಲೂಕಿನ ನೆಲ್ಲಿಕಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಶತಮಾನೋತ್ಸವ ಸಂಭ್ರಮದಲ್ಲಿದ್ದು, 2025ರ ಏಪ್ರಿಲ್ ಅಥವಾ ಮೇ ಮೊದಲ ವಾರದಲ್ಲಿ ಎರಡು ದಿನಗಳ “ಶತಮಾನೋತ್ಸವ ಸಂಭ್ರಮ” ಸಮಾರಂಭವನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಹಿನ್ನಲೆಯಲ್ಲಿ ಶಾಲೆಯ ಗತ ವರ್ಷದ ನೆನಪಿನಲ್ಲಿ…

ವಕ್ಫ್ ಬೋರ್ಡ್ ವಿವಾದ:ಕರ್ನಾಟಕದಾದ್ಯಂತ ಇಂದು ಬಿಜೆಪಿ ಪ್ರತಿಭಟನೆ

ಬೆಂಗಳೂರು:ವಕ್ಫ್ ವಿವಾದ ತೀವ್ರಗೊಂಡಿದ್ದು ಪ್ರತಿಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ತೀವ್ರಗೊಳಿಸುತ್ತಿದೆ. ಇಂದು ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ.ಬಳ್ಳಾರಿಯಲ್ಲಿ ಬೆಳಗ್ಗೆ 11 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಧರಣಿ ನಡೆಯಲಿದ್ದು, ವಕ್ಫ್​ ಬೋರ್ಡ್ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಲಿದ್ದಾರೆ.…

ನಾಳೆ ನ.04ರಂದು ಕಾರ್ಕಳದಲ್ಲಿ ಜಾನ್ಸ್ ಹೈಟೆಕ್ ಅಗ್ರಿ ಸೊಲ್ಯೂಷನ್ಸ್ ಕೃಷಿ ಯಂತ್ರೋಪಕರಣಗಳ ಮಳಿಗೆ ಉದ್ಘಾಟನೆ

ಕಾರ್ಕಳ: ಕೃಷಿ ಯಂತ್ರೋಪಕರಣಗಳ ಮಾರಾಟ ಹಾಗೂ ಸರ್ವೀಸ್ ನಲ್ಲಿ ಹೆಸರಾಗಿರುವ ಜಾನ್ಸ್ ಹೈಟೆಕ್ ಅಗ್ರಿ ಸೊಲ್ಯೂಷನ್ಸ್ ಸಂಸ್ಥೆಯ ನೂತನ ಮಳಿಗೆ ನಾಳೆ (ನ.4 ರಂದು ಸೋಮವಾರ) ಬೆಳಗ್ಗೆ 10 ಗಂಟೆಗೆ ಕಾರ್ಕಳದಲ್ಲಿ ಉದ್ಘಾಟನೆಯಾಗಲಿದೆ. ಈಗಾಗಲೇ ಮೂಡಬಿದಿರೆ,ಸಿದ್ದಕಟ್ಟೆ ಹಾಗೂ ಬಿಸಿರೋಡುಗಳಲ್ಲಿ ಶಾಖೆಗಳನ್ನು ಹೊಂದಿರುವ…