Month: February 2025

ತುಳುನಾಡಿನ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗೆ ಅವಕಾಶ ನೀಡಿ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಶಾಸಕ ಯಶ್ ಪಾಲ್ ಸುವರ್ಣ ಮನವಿ

ಉಡುಪಿ : ಜಿಲ್ಲೆಯಲ್ಲಿ ತುಳುನಾಡಿನ ಧಾರ್ಮಿಕ ಆಚರಣೆ ಹಾಗೂ ಜನಜೀವನದ ಸಂಸ್ಕೃತಿಯ ಭಾಗವಾಗಿ ಗುರುತಿಸಿಕೊಂಡಿರುವ ಕಂಬಳ, ಕೋಳಿ ಪಡೆ, ಯಕ್ಷಗಾನ, ನೇಮೋತ್ಸವ, ನಾಗಮಂಡಲ ಮೊದಲಾದ ಕಾರ್ಯಕ್ರಮಗಳ ಆಯೋಜನೆ ಸಂದರ್ಭದಲ್ಲಿ ಜಿಲ್ಲಾಡಳಿತ ಕಠಿಣ ನಿಯಮಾವಳಿಗಳನ್ನು ರೂಪಿಸಿರುವುದರಿಂದ ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆಗೆ ಅನಾನುಕೂಲವಾಗುತ್ತಿರುವ ಹಿನ್ನೆಲೆಯಲ್ಲಿ…

ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಸಾಣೂರು ನರಸಿಂಹ ಕಾಮತ್- ಉಪಾಧ್ಯಕ್ಷರಾಗಿ ರಾಯಲ್ ನರೋನ್ಹ ಅವಿರೋಧ ಆಯ್ಕೆ

ಕಾರ್ಕಳ: ಇಂದು ನಡೆದ ಸಾಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಸಾಣೂರು ನರಸಿಂಹ ಕಾಮತ್ ಹಾಗೂ ಉಪಾಧ್ಯಕ್ಷರಾಗಿ ರಾಯಲ್ ನೊರೋನ್ಹ ಅಯ್ಕೆಯಾಗಿದ್ದಾರೆ. ಆಯ್ಕೆ ಪ್ರಕ್ರಿಯೆಯನ್ನು ಚುನಾವಣಾ ಅಧಿಕಾರಿಯಾಗಿ ಶ್ರೀಮತಿ ಶಹನಾಜ್ ನಡೆಸಿಕೊಟ್ಟರು. ಸಾಣೂರು ಹಾಲು ಉತ್ಪಾದಕರ ಸಹಕಾರಿ…

ಮೂಡುಬಿದಿರೆ: ಹಾಡಹಗಲೇ ಮನೆಗೆ ನುಗ್ಗಿ ದರೋಡೆ : 3.5 ಲ.ರೂ ಮೌಲ್ಯದ ಚಿನ್ನಾಭರಣ ಕಳವು

ಮೂಡುಬಿದಿರೆ : ಪಾಕ ಶಾಸ್ತ್ರಜ್ಞ ಪ್ರಶಾಂತ್ ಜೈನ್ ಅವರ ಮನೆಗೆ ಹಾಡಹಗಲೇ ನುಗ್ಗಿದ ದರೋಡೆಕೋರರು ಮೂರೂವರೆ ಲಕ್ಷ ರೂ. ಮೌಲ್ಯದ ಸುಮಾರು 30 ಪವನ್ ತೂಕದ ಚಿನ್ನಾಭರಣಗಳನ್ನು ದೋಚಿದ ಘಟನೆ ತಾಲೂಕಿನ ಅಳಿಯೂರಿನ ನೇಲಡೆಯಲ್ಲಿ ಫೆ. 16ರಂದು ನಡೆದಿದೆ. ಪ್ರಶಾಂತ್ ಜೈನ್…

ಬೆಳ್ಮಣ್ :  ಪಂಚಾಯತ್‌ನ ನೂತನ ಮಾರುಕಟ್ಟೆ ಸಂಕೀರ್ಣಕ್ಕೆ ಶಿಲಾನ್ಯಾಸ, ಸರ್ಕಾರದ ವಿವಿಧ ಸವಲತ್ತುಗಳ ವಿತರಣೆ

ಕಾರ್ಕಳ : ಗ್ರಾಮದ ಅಭಿವೃದ್ದಿಯಲ್ಲಿ ಗ್ರಾಮ ಪಂಚಾಯತಿ ಹಾಗೂ ಜನಪ್ರತಿನಿಧಿಗಳ ಪಾತ್ರ ಮಹತ್ವವಾಗಿದೆ. ಜನರಿಗೆ ಅಗತ್ಯವಿರುವ ಯೋಜನೆಯನ್ನು ತಲುಪಿಸುವಲ್ಲಿ ಜನಪ್ರತಿನಿಧಿ ಕರ್ತವ್ಯ ಬಹುಮುಖ್ಯವಾಗಿದೆ. ಬೆಳೆಯುತ್ತಿರುವ ಬೆಳ್ಮಣ್‌ಗೆ ಅಗತ್ಯ ಇರುವ ಮಾರುಕಟ್ಟೆಯ ಸಂಕೀರ್ಣ ನಿರ್ಮಾಣ ಪಂಚಾಯತ್‌ನ ಅನುದಾನದಲ್ಲಿ 16.00 ಲಕ್ಷ ರೂ ವೆಚ್ಚದಲ್ಲಿ…

ಉಡುಪಿ: ಅಕ್ರಮವಾಗಿ ಖರೀದಿಸಿದ್ದ ಅನ್ನ ಭಾಗ್ಯದ ಅಕ್ಕಿ ವಶ, ಪ್ರಕರಣ ದಾಖಲು

ಉಡುಪಿ: ಕೋಟತಟ್ಟು ಗ್ರಾಮದ ಪಡುಕೆರೆಯ ಜನರಲ್ ಸ್ಟೋರ್ಸ್ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಅನ್ನ ಭಾಗ್ಯದ ಅಕ್ಕಿಯನ್ನು ಆಹಾರ ಇಲಾಖೆಯವರು ದಾಳಿ ನಡೆಸಿ ಅಕ್ಕಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಲ್ಲಿನ ಶ್ರೀ ಸಾಯಿರಾಮ್ ಜನರಲ್ ಸ್ಟೋರ್ನಲ್ಲಿ ಅನ್ನ ಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಉಚಿತವಾಗಿ…

ಇಡಿ ಅಧಿಕಾರಿಗಳ ಸೋಗಿನಲ್ಲಿ ವಂಚನೆ ಪ್ರಕರಣ: ಕೇರಳ ಪೊಲೀಸ್ ಅಧಿಕಾರಿ ಸೇರಿ ನಾಲ್ವರು ಬಂಧನ

ಮಂಗಳೂರು: ಇ ಡಿ ಅಧಿಕಾರಿಗಳ ಸೋಗಿನಲ್ಲಿ ಸುಮಾರು 30 ಲಕ್ಷ ನಗದು ವಂಚಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಕೇರಳ ಪೊಲೀಸ್ ಅಧಿಕಾರಿ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ ಈಗ ಏಳಕ್ಕೆ ಏರಿಕೆಯಾಗಿದೆ ಜ. 3 ರಂದು ರಾತ್ರಿ, ವಿಟ್ಲ…

ಕಾರ್ಕಳ: ಜ್ಞಾನಭಾರತ್ ಬಾಲಸಂಸ್ಕಾರ -ಕೋಟಿ-ಚೆನ್ನಯ್ಯರ ನಡೆನುಡಿ ಎಂದೆಂದಿಗೂ ಶಾಶ್ವತ : ಸಂಗೀತಾ ಕುಲಾಲ್

ಕಾರ್ಕಳ: ತುಳುನಾಡಿನ ಅವಳಿವೀರರಾದ ಕೋಟಿ ಚೆನ್ನಯ್ಯರು ಅಧರ್ಮದ ವಿರುದ್ಧ, ನ್ಯಾಯದ ಪರವಾಗಿ ಹೋರಾಡಿದ ವೀರಪುರುಷರು. ಹಿರಿಯರಿಗೆ ಗೌರವವನ್ನು, ಶಿಷ್ಟರ ರಕ್ಷಣೆಯನ್ನು ಮಾಡಿ, ಕೊಟ್ಟ ಮಾತನ್ನು ಉಳಿಸಿಕೊಂಡ ಕೋಟಿ-ಚೆನ್ನಯ್ಯರ ಮೌಲ್ಯಯುತ ಜೀವನ ಇಂದಿಗೂ ಎಂದೆಂದಿಗೂ ಮೌಲ್ಯಯುತ ಎಂದು ಜ್ಞಾನಭಾರತ್-ಬಾಲಸಂಸ್ಕಾರದ ಕಾರ್ಯದರ್ಶಿ ಶ್ರೀಮತಿ ಸಂಗೀತಾ…

ಕನ್ಯಾಲು ಮುಜಿಲ್ನಾಯ ದೈವಸ್ಥಾನ ಜೀರ್ಣೊದ್ಧಾರದ ವಿಜ್ಞಾಪನ ಪತ್ರ ಬಿಡುಗಡೆ

ಕಾರ್ಕಳ: ಕಾರ್ಕಳ ತಾಲೂಕಿನ ನೂರಾಳ್ ಬೆಟ್ಟು ಕನ್ಯಾಲು ಶ್ರೀ ಮುಜಿಲ್ನಾಯ ದೈವಸ್ಥಾನದ ಜೀರ್ಣೋದ್ಧಾರದ ವಿಜ್ಞಾಪನ ಪತ್ರವನ್ನು ಶಾಸಕ ವಿ ಸುನಿಲ್ ಕುಮಾರ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಮುಜಿಲ್ನಾಯ ದೈವಸ್ಥಾನ ಹಾಗೂ ಪರಿವಾರ ಗುಡಿಗಳ ಪುನರ್ ನಿರ್ಮಾಣ…

ಕಾರ್ಕಳ: ಕಫದ ಸಮಸ್ಯೆಯಿಂದ 3 ತಿಂಗಳ ಹಸುಗೂಸು ಮೃತ್ಯು

ಕಾರ್ಕಳ: ಕೇವಲ ಮೂರು ತಿಂಗಳ ಮಗುವಿಗೆ ಕಫದ ಸಮಸ್ಯೆ ಉಂಟಾಗಿ ಆಸ್ಪತ್ರೆಗೆ ಸೇರಿಸುವ ವೇಳೆಗೆ ಮಗು ಮೃತಪಟ್ಟಿರುವ ಘಟನೆ ಕಾರ್ಕಳ ತಾಲೂಕಿನ ನಿಂಜೂರಿನಲ್ಲಿ ನಡೆದಿದೆ. ನಿಂಜೂರಿನ ರಾಘವೇಂದ್ರ ಅವರ ಸೊಸೆ ಪೂರ್ಣಿಮಾರ ಮೂರು ತಿಂಗಳು ಪ್ರಾಯದ ಗಂಡು ಮಗು ಧನ್ವಿತ್ ಕಫದ…

ಕಾರ್ಕಳ: ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರಕ್ಕೆ ಶಾಸಕ ವಿ ಸುನಿಲ್ ಕುಮಾರ್ ಭೇಟಿ- ಸಮಸ್ಯೆಗಳ ಕುರಿತು ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಭರವಸೆ

ಕಾರ್ಕಳ: ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಸಂಘದ ವತಿಯಿಂದ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ನಡೆಸುತ್ತಿರುವ ಅನಿರ್ದಿಷ್ಟ ಅವಧಿ ಮುಷ್ಕರಕ್ಕೆ ಕಾರ್ಕಳ ಶಾಸಕರು, ಮಾಜಿ ಸಚಿವರಾದ ವಿ ಸುನಿಲ್ ಕುಮಾರ್ ಭೇಟಿ ನೀಡಿದರು. ವೇತನ ಹೆಚ್ಚಳ,…