Month: May 2025

ಪಾಕಿಸ್ತಾನದ ಎಚ್‌ಕ್ಯು-9 ವಾಯು ರಕ್ಷಣಾ ವ್ಯವಸ್ಥೆಯನ್ನು ಪುಡಿಗಟ್ಟಿದ ಭಾರತೀಯ ಸೇನೆ

ನವದೆಹಲಿ:ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಮೂಲಕ ಉಗ್ರರ 9 ಅಗಡುದಾಣಗಳ ಮೇಲೆ ಭೀಕರ ವಾಯುದಾಳಿ ನಡೆಸಿದ ಕೇವಲ ಎರಡೇ ದಿನಗಳಲ್ಲಿ ಪಾಕಿಸ್ತಾನಕ್ಕೆ ಭಾರೀ ಹೊಡೆತ ನೀಡಿದೆ. ಭಾರತೀಯ ವಾಯುಸೇನೆ ಗುರುವಾರ ಮಧ್ಯಾಹ್ನ ಲಾಹೋರ್ ನಗರದಲ್ಲಿನ ಚೀನಾ ನಿರ್ಮಿತ ಎಚ್‌ಕ್ಯು-9 ಏರ್ ಡಿಫೆನ್ಸ್ ಸಿಸ್ಟಂ…

ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ನಿಗೂಢ ಸ್ಪೋಟ :ರಾವಲ್ಪಿಂಡಿ, ಕರಾಚಿ, ಲಾಹೋರ್ ಸೇರಿದಂತೆ ಹಲವು ನಗರಗಳಲ್ಲಿ ಸ್ಫೋಟ

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಗುರುವಾರ ಬೆಳಗ್ಗೆ ನಿಗೂಢ ಸ್ಪೋಟ ಸಂಭವಿಸಿದೆ ಎನ್ನುವ ಮಾಹಿತಿ ಲಭಿಸಿದೆ. ಪಾಕಿಸ್ತಾನದ ಕರಾಚಿ,ರಾವಲ್ಪಿಂಡಿ,ಲಾಹೋರ್ ನಗರಗಳಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ರಾವಲ್ಪಿಂಡಿಯಲ್ಲಿರುವ ಪಾಕಿಸ್ತಾನದ ಮಿಲಿಟರಿ ಪ್ರಧಾನ ಕಚೇರಿಯ ಸಮೀಪವೇ ಈ‌ ಸ್ಪೋಟ ಸಂಭವವಿದೆ ಎನ್ನಲಾಗಿದ್ದು ಈ ಸ್ಪೋಟದಿಂದ…

ಕಾರ್ಕಳಕ್ಕೆ ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಭೇಟಿ: ದೇಶದ ಆರ್ಥಿಕತೆಗೆ ಪ್ರವಾಸೋದ್ಯಮದ ಕೊಡುಗೆ ಅಪಾರ: ಕಾರ್ಕಳದ ವಿವಿಧ ಪ್ರವಾಸಿತಾಣಗಳ ಅಭಿವೃದ್ಧಿಗೆ 116 ಕೋ.ರೂ ಪ್ರಸ್ತಾವನೆಗೆ ಸ್ವದೇಶಿ ದರ್ಶನ್ ಯೋಜನೆಯಡಿ ಅನುದಾನದ ಭರವಸೆ

ಕಾರ್ಕಳ: ದೇಶದ ಆರ್ಥಿಕತೆಯಲ್ಲಿ ಪ್ರವಾಸೋದ್ಯಮದ ಕೊಡುಗೆ ಅಪಾರವಾಗಿದೆ. ಈ ನಿಟ್ಟಿನಲ್ಲಿ ದೇಶದ ಪ್ರಮುಖ ಐತಿಹಾಸಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದೆಂದು ಕೇಂದ್ರ ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದರು. ಅವರು ಗುರುವಾರ ಬೆಳಗ್ಗೆ ಕಾರ್ಕಳಕ್ಕೆ ಭೇಟಿ ನೀಡಿ ಆನೆಕೆರೆ ಬಸದಿ…

ಯುದ್ದ ಭೀತಿ ಹಿನ್ನಲೆಯಲ್ಲಿ ವಿವಿ ಪರೀಕ್ಷೆಗಳು ರದ್ದು ಆದೇಶ ಸುಳ್ಳು: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಕಲಿ ಆದೇಶದ ಕುರಿತು ಯುಜಿಸಿ ಸ್ಪಷ್ಟನೆ

ನವದೆಹಲಿ: ಭಾರತ ಹಾಗೂ ಪಾಕಿಸ್ತಾನದ ನಡುವೆ ಉದ್ವಿಗ್ನ ಸ್ಥಿತಿಯಿಂದಾಗಿ ಭಾರತದಾದ್ಯಂತ ಎಲ್ಲಾ ವಿಶ್ವವಿದ್ಯಾಲಯ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನೋಟಿಸ್ ನಕಲಿ ಎಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ)ಸ್ಪಷ್ಟಪಡಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾದ ನೋಟಿಸ್ ನಕಲಿಯಾಗಿದ್ದು ಇದು…

ಕಾಂತಾರಾ ಭಾಗ-1 ಚಿತ್ರತಂಡದ ಜೂನಿಯರ್ ಆರ್ಟಿಸ್ಟ್ ಮೃತ್ಯು

ಕೊಲ್ಲೂರು: ರಿಷಬ್ ಶೆಟ್ಟಿ ನಿರ್ದೇಶದ ಕಾಂತಾರಾ – 1 ಚಿತ್ರದ ಶೂಟಿಂಗ್ ವೇಳೆ ಜೂನಿಯರ್ ಆರ್ಟಿಸ್ಟ್ ಒಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತ ದುರ್ದೈವಿಯನ್ನು ಕಪಿಲ್ ಎಂದು ಗುರುತಿಸಲಾಗಿದೆ. ಇವರು ಕೇರಳ ಮೂಲದವರಾಗಿದ್ದು ಅವರನ್ನು ಈ ಚಿತ್ರದಲ್ಲಿ ಜೂನಿಯರ್ ಕಲಾವಿದರಾಗಿ ಅವರು…

ಮೇ. 09 ರಂದು ಕಾರ್ಕಳದ ಶಿವತಿಕೆರೆ ಬಳಿ ಹೊಟೇಲ್ ವಿಂಟೇಜ್ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

ಕಾರ್ಕಳ:ಬೈಪಾಸ್ ರಸ್ತೆಯ ಶಿವತಿಕೆರೆಯ ಸವಿತಾ ಬಿಲ್ಡಿಂಗ್ ನ ನೆಲಮಹಡಿಯಲ್ಲಿ ವಿಂಟೇಜ್ ರಾಯಲ್ ಸ್ಕೂಪ್ ನ ಹೊಟೇಲ್ ವಿಂಟೇಜ್ ಫ್ಯಾಮಿಲಿ ರೆಸ್ಟೋರೆಂಟ್ ಮೇ.09ರಂದು ಬೆಳಗ್ಗೆ 10.30ಕ್ಕೆ ಶುಭಾರಂಭಗೊಳ್ಳಲಿದೆ. ಖ್ಯಾತ ತುಳು ಚಿತ್ರನಟ ಭೋಜರಾಜ ವಾಮಂಜೂರು ನೂತನ ಹೊಟೇಲ್ ವಿಂಟೇಜ್ ಇದರ ಉದ್ಘಾಟನೆ ನೆರವೇರಿಸಲಿದ್ದು,…

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಲ್ಲಿ 100 ಕ್ಕೂ ಅಧಿಕ ಜನ ಭಾಗಿ ಶಂಕೆ: ಪ್ರಕರಣದ ಕುರಿತು NIA ತನಿಖೆ ಅಗತ್ಯವಿದೆ: ಮಾಜಿ ಸಚಿವ ಸುನಿಲ್ ಕುಮಾರ್ ಒತ್ತಾಯ

ಕಾರ್ಕಳ: ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ 100 ಕ್ಕೂ ಅಧಿಕ ಜನರು ಭಾಗಿಯಾಗಿ ಷಡ್ಯಂತ್ರ ನಡೆಸಿರುವ ಶಂಕೆಯಿದ್ದು,ಈ ಹತ್ಯೆಗೆ ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಣದ ಫಂಡಿಂಗ್ ನಡೆದಿದೆ. ಜತೆಗೆ ಮಂಗಳೂರಿನ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆಂಬ ಆರೋಪವಿದೆ…

ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ: ಸಿಎಂ ಸಿದ್ಧರಾಮಯ್ಯ ಶ್ಲಾಘನೆ

ಬೆಂಗಳೂರು: ಪಾಕಿಸ್ತಾನದ ಉಗ್ರ ನೆಲೆಗಳನ್ನು ಭಾರತ ಉಡೀಸ್ ಮಾಡಿದೆ. ಆಪರೇಷನ್ ಸಿಂಧೂರ್ ನಿಂದ ಪಾಕ್ ನಿದ್ರೆಗೆಟ್ಟಿದೆ. ಪಹಲ್ಗಾಮ್‌ನಲ್ಲಿ ಹುತಾತ್ಮರಾದ ಭಾರತೀಯರ ಸಾವಿಗೆ ನೋವಿಗೆ ನ್ಯಾಯ ಸಿಕ್ಕಿದೆ. ಇಂಥಹ ಸಂದರ್ಭದಲ್ಲಿ ಬಹಳಷ್ಟು ಜನರು ಸೇನೆಯ ಕಡೆಗೆ ತಮ್ಮ ಗೌರವ, ದೇಶದೊಂದಿಗಿನ ತಮ್ಮ ಒಗ್ಗಟ್ಟನ್ನು…

ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ “ಆಪರೇಷನ್ ಸಿಂಧೂರ್” : ಶಾಂತಿ ಮಂತ್ರ ಜಪಿಸಿದ್ದ ಕಾಂಗ್ರೆಸ್, ಜನರ ತರಾಟೆ ಬಳಿಕ ಟ್ವೀಟ್ ಡಿಲೀಟ್

ಬೆಂಗಳೂರು: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕ್‌ನ ಉಗ್ರರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮಾಡಿದೆ. ಭಯೋತ್ಪಾದಕರ 9 ನೆಲೆಗಳನ್ನು ಧ್ವಂಸಗೊಳಿಸುವ ಮೂಲಕ ನವ ವಧುವಿನ ಕುಂಕುಮ ಅಳಿಸಿದ್ದ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿದೆ. ಸದ್ಯ…

ಕೋಟ : ಕಾವಡಿ ಗ್ರಾಮದಲ್ಲಿ ಮಲ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ವಿರುದ್ಧ ಪ್ರತಿಭಟನೆ

ಕೋಟ : ಬ್ರಹ್ಮಾವರ ತಾಲೂಕಿನ ಕೋಟ ಹೋಬಳಿಯ ವಡ್ಡರ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವಡಿ ಗ್ರಾಮದಲ್ಲಿ ಮಲ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ವಿರುದ್ಧ ಕಾವಡಿ ನಾಗರಿಕ ಹಿತರಕ್ಷಣಾ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಸಭೆ ಸೋಮವಾರ ಕಾವಡಿ ಪ್ರಾಥಮಿಕ ಉಪಕೇಂದ್ರದ…