ಉಡುಪಿಯಲ್ಲಿ ಅದ್ದೂರಿಯಾಗಿ ನಡೆದ ಶಿರೂರು ಶ್ರೀಗಳ ಪರ್ಯಾಯ ಮಹೋತ್ಸವ : ಪುತ್ತಿಗೆ ಶ್ರೀಗಳಿಂದ ಕೃಷ್ಣ ಪೂಜಾ ಕೈಂಕರ್ಯ ಶಿರೂರು ಮಠಕ್ಕೆ ಹಸ್ತಾಂತರ
ಉಡುಪಿ,ಜ.19 : ಕೃಷ್ಣನ ನಗರಿ ಉಡುಪಿಯಲ್ಲಿ ಪರ್ಯಾಯ ಮಹೋತ್ಸವ ಬಹಳ ಅದ್ದೂರಿಯಾಗಿ ನೆರವೇರಿದ್ದು, ಶಿರೂರು ಮಠದ ಶ್ರೀ ವೇದವರ್ಧನ ಶ್ರೀಪಾದರು ಸರ್ವಜ್ಞ ಪೀಠಾರೋಹಣ ಅಲಂಕರಿಸಿದ್ದಾರೆ. ಭಾನುವಾರ ಬೆಳಗ್ಗೆ ಶಿರೂರು ವೇದವರ್ಧನ ಶ್ರೀಗಳ ಚೊಚ್ಚಲ ಪರ್ಯಾಯ ಮಹೋತ್ಸವದ ಭವ್ಯ ಶೋಭಾಯಾತ್ರೆ ವಿಜೃಂಭಣೆಯಿAದ ನಡೆಯಿತು.…
