Share this news

ದಕ್ಷಿಣ ಕನ್ನಡ: ಪುತ್ತೂರಿನ ಬಸ್‌ ನಿಲ್ದಾಣದಲ್ಲಿ ವಿವಾಹಿತ ಮಹಿಳೆಗೆ ನೀರಿನ ಬಾಟಲಿಯಲ್ಲಿ ಮದ್ಯ ಮಿಶ್ರಣ ಮಾಡಿ ಕುಡಿಸಿ ಆಕೆ ಅರೆ ಪ್ರಜ್ಞಾವಸ್ಥೆ ಸ್ಥಿತಿಗೆ ತಲುಪಿದ ನಂತರ ಅತ್ಯಾಚಾರ ಮಾಡಿದ ಕೃತ್ಯ ನವೆಂಬರ್24 ರಂದು ನಡೆದಿದೆ.

ಪುತ್ತೂರಿನ ಬಸ್‌ ನಿಲ್ದಾಣದಲ್ಲಿದ್ದ ಮಹಿಳೆ ಅಪರಿಚಿತ ಯುವಕನಲ್ಲಿ ಕುಡಿಯುವ ನೀರು ಕೇಳಿದಾಗ ಆತ ನೀರಿನ ಬಾಟಲಿಯಲ್ಲಿ ಮದ್ಯ ಮಿಶ್ರಣ ಮಾಡಿ ಕುಡಿಸಿದ್ದಾನೆ. ನಂತರ, ಆಕೆ ಅರೆ ಪ್ರಜ್ಞಾವಸ್ಥೆಗೆ ತಲುಪುತ್ತಿದ್ದಂತೆಯೇ ಆಕೆಯನ್ನು ಸಾಲ್ಮರ ಎಂಬಲ್ಲಿನ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಬಸ್ ನಿಲ್ದಾಣಕ್ಕೆ ಬಿಟ್ಟು ಪರಾರಿಯಾಗಿದ್ದಾನೆ.
ಪುತ್ತೂರಿನ ಆರ್ಯಾಪು ಗ್ರಾಮದ ನಿವಾಸಿ ಸಂಶುದ್ದೀನ್ ಆಸ್ಗರ್ ಆಲಿ (23) ಎಂಬಾತ ಅತ್ಯಾಚಾರ ಎಸಗಿರುವ ಅರೋಪಿಯಾಗಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ‌
ಅತ್ಯಾಚಾರಕ್ಕೆ ಒಳಗಾದ ಮಹಿಳೆಯನ್ನು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದವರು ಎಂದು ಗುರುತಿಸಲಾಗಿದೆ. ನ.24ರಂದು ಪುತ್ತೂರು ಬಸ್ ನಿಲ್ದಾಣದ ಬಳಿ ಮಹಿಳೆಗೆ ನೀರಿನ ಬಾಟಲಿಯಲ್ಲಿ ಮಿಶ್ರಣ ಮಾಡಿದ್ದ ಮದ್ಯಪಾನ ಮಾಡಿಸಿ, ಅರೆ ಪ್ರಜ್ಞಾವಸ್ಥೆಗೆ ತಲುಪಿದ ನಂತರ ಆಕೆಯನ್ನು ಅಲ್ಲಿಂದ ಸಾಲ್ಮರ ಎಂಬಲ್ಲಿಗೆ ಕರೆದೊಯ್ದು ಆಕೆಯ ವಿರೋಧದ ನಡುವೆಯೂ ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈ ಘಟನೆಯ ನಂತರ ಆತನಿಂದ ತಪ್ಪಿಸಿಕೊಂಡು ಬಂದ ಮಹಿಳೆ ಮದ್ಯ ಸೇವಿಸಿದ್ದ ಪರಿಣಾಮ ಹೆಚ್ಚು ದೂರು ಕ್ರಮಿಸಲಾಗದೇ ರಸ್ತೆಯ ಬಳಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು. ಮಹಿಳೆಯನ್ನು ಗಮನಿಸಿದ ಸಾರ್ವಜನಿಕರು ಪೋಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಪುತ್ತೂರು ಪೊಲೀಸರು ಮಹಿಳೆಯನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ, ಮಹಿಳೆ ಎಚ್ಚರಗೊಂಡಾಗ ಆಕೆ ಕೊಟ್ಟ ದೂರಿನಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಸಾಮೂಹಿಕ ಅತ್ಯಾಚಾರದ ಶಂಕೆ, ತನಿಖೆ ನಡೆಸುವಂತೆ ಬಜರಂಗದಳ ಒತ್ತಾಯ:

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಪುತ್ತೂರಿನ ಭಜರಂಗದಳ ಇದೊಂದು ಜಿಹಾದಿ ಮಾನಸಿಕತೆಯ ಕೃತ್ಯ, ಇದು ಒಬ್ಬರಿಂದ ಅಸಾಧ್ಯ. ಇದು ಒಂದು ಗುಂಪಿನ ಕೆಲಸ ಎಂದು ಸಾಮೂಹಿಕ ಅತ್ಯಾಚಾರದ ಶಂಕೆಯನ್ನು ವ್ಯಕ್ತಪಸಿದ್ದು, ಪೋಲೀಸ್ ಇಲಾಖೆ ಈ ಕುರಿತು ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ‌. ಇದೇ ಪ್ರದೇಶದಲ್ಲಿ 2006ರಲ್ಲಿ ಸತ್ತರ್ ಎನ್ನುವವನಿಂದಲೂ ಅಕ್ಷತಾ ಎನ್ನುವ ಯುವತಿಯ ಕೊಲೆಯೂ ನಡೆದು ಭಾರೀ ಪ್ರತಿಭಟನೆ ನಡೆದು ರಾಜ್ಯಮಟ್ಟದಲ್ಲಿ ಸುದ್ದಿಯಾಗಿತ್ತು. ಈ ಪ್ರದೇಶದಲ್ಲಿ ಅಕ್ರಮ ಚಟುವಟಿಕೆ ಮತ್ತು ಗಾಂಜಾ ಪ್ರಕರಣ ನಡೆಯುತ್ತಿರುವ ಬಗ್ಗೆ ಕೂಡಾ ಹಲವು ದೂರುಗಳು ದಾಖಲಾಗಿವೆ. ಪೊಲೀಸರು ಈ ಬಗ್ಗೆ ಕಾರ್ಯಪ್ರವೃತ್ತರಾಗುವ ಮೂಲಕ ಪುತ್ತೂರು ತಾಲೂಕನ್ನು ಗಾಂಜಾ ಮುಕ್ತವನ್ನಾಗಿ ಹಾಗೂ ಶಾಂತಿಧಾಮವಾಗಿ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *