ಕಾರ್ಕಳ:ಪೊಲೀಸ್ ಇಲಾಖೆಯ ರಾಜ್ಯ ಗುಪ್ತದಳದ ಉಡುಪಿ ಜಿಲ್ಲಾ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹೆಬ್ರಿಯ ಮಹೇಶ್ ಹೆಗ್ಡೆಯವರು ಪೊಲೀಸ್ ಕರ್ತವ್ಯದಲ್ಲಿನ ವಿಶೇಷ ಸಾಧನೆಗಾಗಿ
2024 ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಚಿನ್ನದ ಪದಕಕ್ಕೆ ಆಯ್ಕೆಯಾಗಿರುತ್ತಾರೆ.
ಹೆಬ್ರಿಯ ಚಂದುಕುಂದು ನಿವಾಸಿಯಾಗಿರುವ ಮಹೇಶ್ ಹೆಗ್ಡೆ
2002ರಲ್ಲಿ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಇಲಾಖೆ ಸೇರಿದ್ದು, ಈ ಹಿಂದೆ ಶಿರ್ವ, ಅಮಾಸೆಬೈಲು ಅಜೆಕಾರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. 2017ರಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಸೇವಾ ಪದೋನ್ನತಿ ಹೊಂದಿದ್ದ ಇವರು ಪ್ರಸ್ತುತ ರಾಜ್ಯ ಗುಪ್ತವಾರ್ತೆ(ಇಂಟೆಲಿಜೆನ್ಸ್) ಉಡುಪಿ ಘಟಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಎಪ್ರಿಲ್ 2 ರಂದು ಪೊಲೀಸ್ ದ್ವಜ ದಿನಾಚರಣೆ ದಿನದಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಿನ್ನದ ಪದಕ ಸ್ವೀಕರಿಸಲಿದ್ದಾರೆ.
K